ಸಮುದ್ರ

ಸಮುದ್ರ

ಕ್ಷಣಿಕ  ಅಪ್ಪುಗೆಗಾಗಿ ಕಾದು ಕುಳಿತಿದೆ
ಅಲೆಗಳಿಗೋಸ್ಕರ ಸಮುದ್ರತೀರ..
ಬಿಡದಂತೆ ಬಂದು ಬಾರಿ ಬಾರಿ
ಮುತ್ತಿಟ್ಟುಹೋಗುತಿದೆ ಸಾಗರ…

ಒಂದೊಂದು ಬಾರಿ ಮುತ್ತಿನ ಮಳೆಗೆರೆದಾಗಲೂ
ಕಿವಿಗಡಚಿಕ್ಕುವಂತೆ ಸದ್ದು ಮಾಡುತ್ತಿದೆ ಅಲೆ
ಯಾರಾದರೂ ನೋಡಬಹುದೆಂಬ ಭಯವೇನೋ?
ಅದಕೆ ಓಡಿ ಹೋಗುತ್ತಿದೆ ರಭಸದಿಂದಲೇ…

ಅದೇನು ಸೆಳೆತವೋ, ಹರಿತವೋ ನಿನ್ನಲ್ಲಿ
ಮುಂಜಾನೆಯಾದೊಡೆ ಕೆನ್ನೆ ಕೆಂಪಾಗಿಸುವೆ
ಮುಸ್ಸಂಜೆ ಹೊತ್ತಲ್ಲಿ ಮನಸೆಲ್ಲ ತಂಪಾಗಿಸುವೆ
ಹುಣ್ಣಿಮೆಯ ರಾತ್ರಿಯಲಿ ಕೂಗಿ ಕರೆಯುವೆ…

ಭೇದಭಾವ ಮಾಡುವದಿಲ್ಲ, ಯಾವ ನದಿಗಳಿಗೂ,
ಎಲ್ಲರಿಗೂ ಸ್ಥಾನ ಕೊಡುವೆ ನಿನ್ನ ಮಡಿಲಲ್ಲಿ
ನಿನ್ನ ವಿಸ್ತಾರ ಎಷ್ಟು ವಿಶಾಲವೋ,
ಅಷ್ಟೇ ವಿಶಾಲವು ನಿನ್ನ ಹೃದಯವು
ಸಿಟ್ಟು ಬಂದಾಗ ಮಾತ್ರ ಸುನಾಮಿಯ ಅವತಾರದಲ್ಲಿ…

✍🏻 ಪ್ರಶಾಂತ ಗುಣಕಿ ಬೆಂಗಳೂರು

Don`t copy text!