ಆತಂಕ
(ಕಥೆ)
ಗಂಟೆ ಆರೂವರೆಯಾಗುತ್ತಿದ್ದಂತೆ ವೈದೇಹಿಯ ಕಣ್ಣುಗಳು ಮನೆಯ ಮುಂದಿನ ದಾರಿಯನ್ನು ನಿರುಕಿಸ ತೋಡಗಿದವು. ತನ್ನ ಬೆಳೆದ ಹೆಣ್ಣು ಮಕ್ಕಳಿಗಾಗಿ ಕಾಯುವ ತಾಯಿ ಹೃದಯದ ತವಕ ಸಹಜವಾದದ್ದು. ಮನೆಯ ಹಿಂದಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಆಳುಗಳು ಆಗಲೇ ಹೋಗಿಯಾಗಿತ್ತು. ಮನೆಯಲ್ಲಿದ್ದ ಕೆಲಸದ ಸಾವಿತ್ರಮ್ಮ ರಾತ್ರಿ ಅಡುಗೆಗೆ ಬೇಕಾದ ತರಕಾರಿಯನ್ನು ಹೆಚ್ಚಿಟ್ಟು ಹೋಗಲು ಅನುಮತಿ ಕೇಳಿದಾಗ ಸುಮ್ಮನೇ ತಲೆಯಾಡಿಸಿದ್ದರು. ಇಂಜಿನಿಯರಿAಗ ಮೊದಲನೇ ವರ್ಷದಲ್ಲಿ ಒದುತ್ತಿದ್ದ ಎರಡನೇಯ ಮಗಳು ಆರು ಗಂಟೆಗೆಲ್ಲ ಬರಬೇಕಿತ್ತು. ಮೊದಲನೇಯವಳು ನಗರದ ನರ್ಸಿಂಗ ಹೋಮ್‌ನಲ್ಲಿ ಹೊಸದಾಗಿ ಸೇರಿದ್ದರಿಂದ ಯಾವಾಗಲೂ ಸ್ವಲ್ಪ ತಡವಾಗಿಬರುವುದು ಸಹಜವಾಗಿತ್ತು. ಆದರೂ ಡಿಸೆಂಬರ ತಿಂಗಳ ಚಳಿಗಾಲದಲ್ಲಿ ದಿನಗಳು ಚಿಕ್ಕದಾದ್ದರಿಂದ ಆಗಲೇ ಕತ್ತಲಾಗಿ ಹೊತ್ತು ಮೀರಿದ ಹಾಗೆ ಅನುಭವ ನೀಡುತ್ತಿತ್ತು. ಕೂಗಳತೆಯಲ್ಲಿದ್ದ ವಾಚಮನ್ ಮನೆಯಲ್ಲಿದ್ದ ಮಂದ ಬೆಳಕಿನ ಹೊರತಾಗಿ ಹೊರಗಡೆ ಕತ್ತಲು ಆವರಿಸಿತ್ತು.
ಯಮುನಾಪುರದಿಂದ ನಗರಕ್ಕೆ ಹೋಗುವ ದಾರಿಯಲ್ಲಿ ಅದೊಂದು ಒಂಟಿಯಾದ ತೋಟದ ಮನೆ. ಸರಕಾರಿ ನೌಕರಿಯಲ್ಲಿದ್ದ ವೈದೇಹಿಯ ಯಜಮಾನರ ಅಕಾಲಿಕ ನಿಧನದ ನಂತರ ವೈದೇಹಿ ಎರಡು ಚಿಕ್ಕ ಮಕ್ಕಳನ್ನು ಕರೆದುಕೊಂಡು ತೋಟದ ಮನೆಯಲ್ಲಿ ನೆಲೆಸಿದ್ದರು. ಮಕ್ಕಳಿಬ್ಬರೂ ಅಲ್ಲಿಂದಲೇ ಎರಡು ಕಿಲೊ ಮೀಟರವರೆಗೆ ಸೈಕಲ್ ಮೇಲೆ ಮುಖ್ಯ ರಸ್ತೆ ತಲುಪಿ, ಬಸ್ಸ್ ಹಿಡಿದು ಶಾಲೆಗೆ ಹೋಗಬೇಕಾಗಿತ್ತು. ವಾಚಮನ್ ಅವರನ್ನು ಬಸ್ಸ್ವರೆಗೆ ತಲುಪಿಸಿ ಸಾಯಂಕಾಲ ಕರೆದುಕೊಂಡು ಬರುವುದು ಅಭ್ಯಾಸವಾಗಿತ್ತು. ದೊಡ್ಡ ಮಗಳು ದೀಪಾ ಪಿಯುಸಿ ಮುಗಿಸಿ ಮೆಡಿಕಲ್ ಕಾಲೇಜ ಸೇರಿದಾಗ ಸ್ಕೂಟಿ ತೆಗೆದುಕೊಂಡಿದ್ದಳು. ಮುಖ್ಯ ರಸ್ತೆಯ ಬದಿಯಲ್ಲಿದ್ದ ಪರಿಚಯದ ಹೋಟೆಲ್ ಮಾಲಿಕರಿಗೆ ಹೇಳಿ ಅಲ್ಲಿಯೇ ತನ್ನ ಸ್ಕೂಟಿ ನಿಲ್ಲಿಸಿ ಬಸ್ಸ್ ಹಿಡಿಯುವ ಅಭ್ಯಾಸ ಮಾಡಿಕೊಂಡಿದ್ದಳು. ಚಿಕ್ಕ ಮಗಳು ಶಿಲ್ಪಾ ಪಿಯುಸಿ ಸೇರಿದಾಗ ಸಮಯಗಳಲ್ಲಿ ವ್ಯತ್ಯಾಸ ಆಗಿದ್ದರಿಂದ ಆಕೆಯೂ ಒಂದು ಬೇರೆ ಸ್ಕೂಟಿ ತೆಗೆದುಕೊಂಡು ಬೇರೆಯಾಗಿ ಹೋಗುವುದು ರೂಡಿಯಾಗಿತ್ತು.
ಮೂಲತಃ ಬುದ್ದಿವಂತೆ ಹಾಗೂ ಪರಿಶ್ರಮಿಯಾದ ದೀಪಾ ತನ್ನ ಸತತ ಪ್ರಯತ್ನದಿಂದ ಒಳ್ಳೆಯ ಅಂಕಗಳೊAದಿಗೆ ವೈದ್ಯಕೀಯ ಪದವಿಯನ್ನು ಪಡೆದಾಗ ಉದ್ಯೋಗ ಅವಕಾಶ ಆಕೆಯನ್ನು ಅರಸಿ ಬಂದಿತ್ತು. ನಗರದ ಹೆಸರಾಂತ ನರ್ಸಿಂಗಹೊAನಿAದ ಆಕೆಗೆ ಕರೆ ಬಂದಿತ್ತು. ಆಕೆಯ ಸ್ವಭಾವ ಹಾಗೂ ಸಾಮರ್ಥ್ಯಗಳನ್ನು ಅರಿತಿದ್ದ ಆಕೆಯ ಪ್ರಾದ್ಯಾಪಕರೊಬ್ಬರ ಶಿಫಾರಸ್ಸಿನಿಂದಾಗಿ ತಾವಾಗಿಯೇ ಆಕೆಗೆ ತಮ್ಮ ನರ್ಸಿಂಗ ಹೋಮ್‌ನಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದರು. ತಾಯಿ ಶಿಕ್ಷಣವನ್ನು ಮುಂದುವರೆಸಲು ಒತ್ತಾಯ ಮಾಡಿದರೂ ಸಹ ದೀಪಾ ನಿರಾಕರಿಸಿ ಕೆಲಸಕ್ಕೆ ಸೇರಿಕೊಂಡಿದ್ದಳು. ತುಂಬ ಶ್ರದ್ಧೆಯಲ್ಲಿ ಕೆಲಸ ಮಾಡುತ್ತಿದ್ದವಳಿಗೆ ನರ್ಸಿಂಗಹೊAನ ವಾತಾವರಣ ತುಂಬ ಹಿಡಿಸಿತ್ತು. ಹೊಸ ವಿಷಯಗಳನ್ನು ಕಲಿಯುವ ಅವಕಾಶದಿಂದ ಸಂತೋಷವೆನಿಸುತ್ತಾ ಇತ್ತು. ಕೆಲವು ಸಲ ಸಮಯದ ಪರಿವೆ ಇಲ್ಲದೇ ತನ್ನ ಕೆಲಸದಲ್ಲಿ ತೊಡಗಿರುತ್ತಿದ್ದಳು. ಹೀಗಾಗಿ ತಡವಾಗಿ ಮನೆಗೆ ತಲುಪುವುದು ಅಭ್ಯಾಸವಾಗಿ ಬಿಟ್ಟಿತ್ತು.
ಇವತ್ತು ಸಹ ಮಗಳು ತಡವಾಗಿ ಬರಬಹುದು ಎನಿಸಿದರೂ ತಾಯಿಯ ಹೃದಯ ಆರು ಗಂಟೆಯಿAದಲೇ ಮಕ್ಕಳಿಗಾಗಿ ಕಾಯಲು ಪ್ರಾರಂಭಿಸಿತ್ತು. ಆರುವರೆಗೆ ಚಿಕ್ಕ ಮಗಳ ಸ್ಕೂಟಿ ದೂರದಲ್ಲಿ ಕಾಣಿಸಿದಾಗ ಮನಸ್ಸಿಗೆ ಹಾಯೆನಿಸಿತ್ತು. ಆದರೂ ಗೇಟ ತೆಗೆದು ಒಳಗೆ ಬಂದ ತಕ್ಷಣ ವಾಡಿಕೆಯಂತೆ ಪ್ರಶ್ನೆ ಮಾಡಿದ್ದರು. “ಯಾಕೆ ಶಿಲ್ಪಾ ತಡಾ ಆಯ್ತಲ್ಲಾ” ತಾಯಿಯ ಆತಂಕವನ್ನು ಅರಿತಿದ್ದ ಆಕೆ ಉತ್ತರಿಸಿದ್ದಳು. “ಇಲ್ಲಮ್ಮ ಬೇಗನೇ ಹೊರಟಿದ್ದೆ ಒಂದು ಬಸ್ಸ್ ತಪ್ಪಿಸಿಕೊಂಡೆ. ಆದ್ದರಿಂದ ಅರ್ಧ ಗಂಟೆ ಬಸ್ಸ್ ಸ್ಟಾಪ್‌ನಲ್ಲಿ ನಿಲ್ಲಬೇಕಾಯಿತು.”
ಮಗಳಿಗೆ ತಿಂಡಿ ಚಹಾ ಮಾಡುವುದರಲ್ಲಿ ನಿರತರಾದ ವೈದೇಹಿಗೆ ಸಮಯದ ಕಡೆಗೆ ಗಮನವಿರಲಿಲ್ಲ. ತಾನೂ ಚಹಾ ಕುಡಿದು ಹೊರಗೆ ಬಂದಾಗ ರಸ್ತೆಯ ದೀಪಗಳೆಲ್ಲ ಆಗಲೇ ಹೊತ್ತುಕೊಂಡಿದ್ದವು. ಮತ್ತೆ ನೆನಪಾಗಿದ್ದಳು ದೀಪಾ. ಒಳಗೆ ಬಂದು ಮಗಳಿಗೆ ಹೇಳಿದ್ದರು. “ಶಿಲ್ಪಾ ಫೊನ್ ಮಾಡಿ ನೋಡಮ್ಮ ದೀಪಾ ಎಲ್ಲಿದ್ದಾಳೆ. ಆಗಲೇ ಎಳು ಗಂಟೆ ಆಗಿ ಹೋಯ್ತು”
“ಬರತ್ತಾಳೆ ಬಿಡಮ್ಮಾ ಯಾವುದಾದರೂ ಹೊಸ ಕೆಲಸ ಹಿಡಕೊಂಡು ಕೂತಿರಬಹುದು” ಎನ್ನುತ್ತ ತನ್ನ ಮೊಬೈಲ್‌ನಲ್ಲಿ ಚಾಟಿಂಗ ಮುಂದುವರೆಸಿದಳು ಶಿಲ್ಪಾ.
ದೀಪಾ ಬೇಗ ಬೇಗ ತನ್ನ ಎಪ್ರೊನ್ ತೆಗೆದಿಟ್ಟು ಪರ್ಸ ತೆಗೆದುಕೊಂಡು ಹೊರಗೆ ಬಂದಳು. ಹೊರಡುವ ಸಮಯದಲ್ಲಿಯೇ ಬಂದ ಒಂದು ಆಕ್ಸಿಡೆಂಟ್ ಕೇಸ್‌ನಿಂದಾಗಿ ದಿನಾಲೂ ಆರು ಗಂಟೆಗೆ ಆಕೆಯ ಸಮಯ ಮುಗಿದಿದ್ದರೂ ಇಂದು ಹೊರಡಲು ಆರುವರೆ ಆಗಿ ಹೋಗಿತ್ತು. ಹೊರಗೆ ಬರುತ್ತಿದ್ದಂತೆ ಗಾಯಾಳುವಿನ ಸಂಬAಧಿ ಒಬ್ಬರು ಬಂದು ಮಾತನಾಡಿಸಿದ್ದರಿಂದ ಮತ್ತೆ ಅವರಿಗೆ ಸಮಾಧಾನ ಮಾಡುತ್ತ, ಯಾವುದೇ ಗಂಭಿರ ಗಾಯಗಳಿಲ್ಲದ್ದರಿಂದ ಹೆದರುವ ಕಾರಣವಿಲ್ಲವೆಂದು ವಿವರಿಸಿ, ಅವರ ಆತಂಕವನ್ನು ದೂರ ಮಾಡಿ ನಡೆದುಕೊಂಡು ಬಸ್‌ಸ್ಟಾಪ್ ಹತ್ತಿರ ಬರುವಷ್ಟರಲ್ಲಿ ಅವಳ ಕಣ್ಣಮುಂದೇ ಎಳು ಗಂಟೆಯ ಬಸ್ ಹೊರಟು ಹೋಗಿತ್ತು. ಅಯ್ಯೊ ಮತ್ತೆ ಅರ್ಧ ಗಂಟೆಯ ಕಾಯುವಿಕೆ! ಅಮ್ಮ ಹೇಳಿದ ಹಾಗೆ ಬೇಗನೇ ಒಂದು ಸೆಕೆಂಡಹ್ಯಾAಡ ಕಾರ ತೆಗೆದುಕೊಂಡು ಬಿಡಬೇಕು ಎಂದು ಯೋಚನೆ ಮಾಡುತ್ತ ಬೆಂಚಿನ ಮೇಲೆ ಕುಳಿತುಕೊಂಡಳು.
ಅಮ್ಮನ ಆರ್ಥಿಕ ಸ್ಥಿತಿಯನ್ನು ಅರಿತಿದ್ದರಿಂದ ತನ್ನ ಹತ್ತಿರ ಸ್ವಲ್ಪ ಹಣ ಸಂಗ್ರಹವಾಗುವ ವರೆಗೆ ಕಾಯುವುದು ಅವಶ್ಯಕವಾಗಿತ್ತು. ಎಳು ಗಂಟೆಗೆ ಸರಿಯಾಗಿ ಬಂದ ಬಸ್ ಎರಿ ತನ್ನ ಸ್ಮಾರ್ಟಪೂನ್‌ನಲ್ಲಿ ಯಾವುದೋ ಫಿಲ್ಮ ನೋಡುತ್ತ ಕುಳಿತುಕೊಂಡಳು. ಕಿಟಕಿಯಿಂದ ಹೊರಗೆ ನೋಡಿದಾಗ ತುಂಬ ಕತ್ತಲೆಯಾಗಿದ್ದು ಗಮನಿಸಿ ಅಮ್ಮನ ಆತಂಕ ನೆನಪಿಗೆ ಬಂದು ತಂಗಿಯ ಮೊಬೈಲ್‌ಗೆ ಕರೆ ಮಾಡಿದಳು. ಎಂದಿನAತೆ ಎಂಗೇಜ ! ಮತ್ತೆ ಮರಳಿ ತನ್ನ ಯುಟೂಬ್‌ನಲ್ಲಿ ಮಗ್ನಳಾದಳು. ಯಮುನಾಪುರ್ ಕ್ರಾಸ್‌ನಲ್ಲಿ ಇಳಿದಾಗ ಆಗಲೇ ಎಂಟು ಗಂಟೆ. ಇಳಿದು ಪರಿಚಯದ ಚಿಕ್ಕ ಹೊಟೇಲ್‌ನ ಮುಂದೆ ಇಟ್ಟ ತನ್ನ ಹೊಸ ಆಕ್ಟಿವಾ ಪ್ರಾರಂಭಿಸುವಾಗ ಪರಿಚಯದ ಆ ಹೊಟೇಲಿನ ಮಾಲೀಕರಾದ ವಾಸುದೇವ ಭಟ್ಟರು ಕೇಳಿದ್ದರು. “ಯಾಕೆ ಡಾಕ್ಟರ್ ಬೇಬಿ ಇವತ್ತು ತಡ ಆಯಿತಲ್ಲಾ?” ಮೆಡಿಕಲ್ ಕಾಲೇಜಿಗೆ ಸೇರಿದಾಗಿನಿಂದ ಆಕೆಯ ಎಪ್ರಾನ್ ನೊಡಿ ಅವರು ಆಕೆಯನ್ನು ಕರೆಯುತ್ತಿದ್ದುದು ಹಾಗೇ, ಡಾಕ್ಟರ್ ಬೇಬಿ!
“ಒಂದು ಆಕ್ಸಿಡೆಂಟ್ ಕೇಸ್ ಇತ್ತು ಅಂಕಲ್, ಮುಗಿಸಿ ಬರೂಷ್ಟರಲ್ಲಿ ಬಸ್ಸ್ ಮಿಸ್ಸಾಯಿತು” ಎಂದು ಮುಗುಳುನಕ್ಕು ಹೆಲ್ಮೆಟ್ ಧರಿಸಿ ಆಕ್ಟಿವಾ ಸುರು ಮಾಡಿ ಹೊರಟಳು. ಅರ್ಧ ಕಿಲೋ ಮೀಟರ ಬರುವಷ್ಟರಲ್ಲಿ ಚುಸ್ ಎಂದು ಶಬ್ದದೊಂದಿಗೆ ಗಾಡಿ ಒಲಾಡತೋಡಗಿತು. ಘಾಬರಿಯಲ್ಲಿ ಬ್ರೆಕ್ ಹಾಕಿ ನಿಲ್ಲಿಸಿ ಸ್ಟಾö್ಯಂಡ್ ಹಾಕಿ ಕೆಳಗಿಳಿದು ನೋಡಿದಾಗ ಹಿಂದಿನ ಗಾಲಿ ಪೂರ್ಣ ಚಪ್ಪಟೆಯಾಗಿತ್ತು. ಆತಂಕದಿAದ ಆಚೆಯಿಚೆ ನೋಡಿದಾಗ ಸುತ್ತಲೂ ಕಗ್ಗತ್ತಲೆ. ದಾರಿ ನಿರ್ಜನವಾಗಿತ್ತು. ದೂರದಲ್ಲಿದ್ದ ಬೀದಿ ದೀಪದ ಹೊರತಾಗಿ ಎಲ್ಲಿಯೂ ಬೆಳಕು ಕಾಣುತ್ತಿರಲಿಲ್ಲ. ದೂರದಲ್ಲಿ ಸಾಲಾಗಿ ನಿಂತ ಮರ‍್ನಾಲ್ಕು ಲಾರಿಗಳ ಹೊರತಾಗಿ ರಸ್ತೆಯಲ್ಲಿ ಒಂದು ಹುಳ ಕೂಡಾ ಕಾಣುತ್ತಿರಲಿಲ್ಲ. ತಕ್ಷಣ ನೆನಪಿಗೆ ಬಂದಿದ್ದು ಪತ್ರಿಕೆಗಳಲ್ಲಿ, ಮೊಬೈಲ್‌ನಲ್ಲಿ ವೈರಲ್ ಆಗಿದ್ದ ಪ್ರಿಯಾಂಕಾ ರೆಡ್ಡಿ ಘಟನೆ! ಮೈ ಹೆದರಿಕೆಯಿಂದ ಸಣ್ಣಗೇ ನಡುಗಲಾರಂಭಿಸಿತ್ತು. ತಿರುಗಿ ಕ್ರಾಸ್ ಕಡೆಗೆ ಹೋದರೆ ಎನಾದರೂ ಸಹಾಯ ಸಿಗಬಹುದು ಎಂದು ಯೋಚಿಸುತ್ತ ತಿರುಗಿದಾಗ ಆ ಕತ್ತಲೆಯಿಂದ ಪ್ರತ್ಯಕ್ಷವಾದಂತೆ ಇಬ್ಬರು ಧಡಿಯರು ಮುಂದೆ ನಿಂತಿದ್ದರು.
ಅದರಲ್ಲಿ ಒಬ್ಬ “ಎನಾಯ್ತು ಮೇಡಂ ಟೈರ್ ಪಂಚರಾs,” ಎಂದು ಗೊಗ್ಗರು ಧ್ವನಿಯಿಂದ ಕೇಳಿದ.
ದೀಪಾಳ ತಲೆಗೆ ಪ್ಲಾö್ಯಶ್ ಆಗಿದ್ದು ‘ಅಯ್ಯೊ ದೇವರೇ ಪಂಚರ್ ಆಗಿದ್ದು ಇವನಿಗೆ ಹೇಗೆ ಗೊತ್ತಾಯಿತು. ಇವನೇನಾದರೂ ಮಾಡಿರಬಹುದಾ!’
ಆಕೆ ಉತ್ತರಿಸುವ ಮುಂಚೆ ಆತ ನಿಂತಿದ್ದ ಸ್ಕೂಟರ್ ತಳ್ಳುತ್ತ “ಬನ್ನಿ ಮೆಡಂ, ಅತ್ತ ಆ ಲಾರಿಗಳು ನಿಂತಿವೆಯಲ್ಲಾ ಅಲ್ಲೇ ಚಿಕ್ಕÀ ಗ್ಯಾರೇಜ್ ಇದೆ. ಅಲ್ಲಿ ಪಂಕ್ಚರ್ ತೆಗೆದುಕೊಡತಾರೆ” ಎನ್ನುತ್ತ ಮುಂದೆ ಹೊರಟಿದ್ದ.
ವಿಚಿತ್ರ ಸಂಧಿಗ್ದತೆ! ತನ್ನ ಹೊಸ ಆಕ್ಟಿವಾ ಹಿಡಿದು ಹೊರಟಿದ್ದ ಆತನನ್ನು ಹಿಂಬಾಲಿಸ ಬೇಕೊ ಅಥವಾ ಹಿಂದೆ ಓಡಿ ಜನಸಂದಣಿ ಇದ್ದ ಮುಖ್ಯ ರಸ್ತೆಯ ಕಡೆಗೆ ಹೋಗ ಬೇಕೋ ತಿಳಿಯದೇ ಕೊನೆಗೆ ಸಾವಕಾಶವಾಗಿ ಹೆಜ್ಜೆ ಇಡುತ್ತ ಪರ್ಸನಲ್ಲಿದ್ದ ಮೊಬೈಲ್ ತೆಗೆದು ಮೇಲೆಯೇ ಕಾಣಿಸಿದ ತಂಗಿಯ ಹೆಸರನ್ನು ಒತ್ತಿದಳು. ಆಚೆ ರಿಂಗ ಆಗಿದ್ದು ಕೇಳಿದಾಗ ಒಂದು ಕ್ಷಣ ಧೈರ್ಯ ಮೂಡಿತು. ಯಾರಾದರೂ ಅಪರಿಚಿತರ ಜೊತೆಗೆ ಇದ್ದಾಗ ಪೋನಿನಲ್ಲಿ ಮಾತನಾಡುವ ತಂತ್ರ ನೆನಪಿಗೆ ಬಂದಿತ್ತು. ಮೂರನೇ ರಿಂಗಗೆ ಆ ಕಡೆಯಿಂದ ಹಲೋ ಕೇಳಿಸಿತ್ತು.
“ಹಲೋ ಎಲ್ಲಿದಿ ಅಕ್ಕಾ, ಅಮ್ಮ ಆವಾಗಿಂದ ಗೇಟ ಮುಂದೆ ನಿಂತಿದ್ದಾರೆ. ಯಾಕಿಷ್ಟು ಲೇಟು?” ತಂಗಿಯ ದ್ವನಿ ಕೇಳುತ್ತಿದ್ದಂತೆ ಅಳು ಉಕ್ಕಿ ಬಂದಿತ್ತು. ಆದರೂ ತಡೆದುಕೊಂಡು “ಎನಿಲ್ಲ ಸ್ಕೂಟರ ಪಂಕ್ಚರ್ ಆಗಿದೆ. ರಸ್ತೆಯಲ್ಲಿ ಯಾರೂ ಇಲ್ಲ. ಯಾರೊ ಇಬ್ಬರು ಸ್ಕೂಟರ್ ತಳ್ಳಿಕೊಂಡು ಹೋಗ್ತಾ ಇದ್ದಾರೆ. ಎನ್ ಮಾಡಬೇಕು ತಿಳಿತಿಲ್ಲ. ಹೆದರಿಕೆ ಆಗ್ತಾ ಇದೆ.” ಮಾತು ಮುಗಿಯುತ್ತಿದ್ದಂತೆ ಬಿಕ್ಕು ಗಂಟಲು ದಾಟಿ ಹೋರಗೆ ಬಂದಿತ್ತು.
“ಅಯ್ಯೋ ಮೊದಲೇ ಪೊನ್ ಮಾಡಬೇಕಿತ್ತು. ನಾ ಯಾರನ್ನಾರ‍್ರೂ ಕರಕೊಂಡ ಬಂದಿರ್ತಿದ್ದೆ. ಒಂದ ಕೆಲಸಾ ಮಾಡು ಆ ತರ ಎನಾದ್ರು ಡೌಟ್ ಬಂದ್ರೆ ನಾನು ಮೊನ್ನೆ ಅಮೆಜಾನ್‌ನಿಂದ ತರಸಿದ್ದೆನಲ್ಲಾ ಆ ಎಮರ್ಜನ್ಸಿ ಸಾಧನ ಅದನ್ನು ನಿನ್ನ ಪರ್ಸನಲ್ಲೊಂದು ಹಾಕಿದ್ದಿನಿ. ಅದನ್ನು ಹೊರಗೆ ತೆಗೆದು ವಾಯರ್ ಎಳೆದು ಬಿಡು ಅವರು ಹೆದರಿ ಓಡಿ ಹೋಗಬಹುದು. ಅಷ್ಟರಲ್ಲಿ ನಾನೂ ಬಂದು ಬಿಡುತ್ತೇನೆ. ಹೆದರ ಬೇಡ ಧೈರ್ಯ ತೊಗೊ ಪೋನ್‌ನಲ್ಲಿ ಹಾಗೆ ಮಾತಾಡ್ತಾ ಇರು” ಎನ್ನುತ್ತ ಅಮ್ಮಾ ಅಮ್ಮಾ ಎಂದು ಕರೆದಿದ್ದು ಕೇಳಿಸಿತು. ಪರ್ಸ್ನಲ್ಲಿ ತಡಕಾಡಿದಾಗ ದಪ್ಪ ಕೊಳವೆಯಂತಹ ಸಾಧನ ಕೈಗೆ ಸಿಕ್ಕಿತ್ತು. ಅದನ್ನು ಗಟ್ಟಿಯಾಗಿ ಕೈಯಲ್ಲಿ ಹಿಡಿದು ಮತ್ತೆ ರಸ್ತೆಯಲ್ಲಿ ಯಾರಾದರೂ ಬರುತ್ತಾರೆನೋ ಎಂದು ನೋಡುತ್ತ ಸಾವಕಾಶವಾಗಿ ಎಚ್ಚರಿಕೆಯಿಂದ ಹೆಜ್ಜೆ ಹಾಕತೊಡಗಿದಳು. ಆ ಇಬ್ಬರೂ ಸ್ಕೂಟರ್ ತೆಗೆದುಕೊಂಡು ಲಾರಿಗಳ ಪಕ್ಕದಲ್ಲಿದ್ದ ಕಗ್ಗತ್ತಲೆಯ ಸಂದಿಯತ್ತ ಹೊರಳಿದಾಗ ಆಕೆಯ ದೈರ್ಯ ಕುಂದಿಹೋಗಿತ್ತು. ಕಾಲುಗಳಲ್ಲಿ ನಡುಕ ಹುಟ್ಟಿತ್ತು. ದೈರ್ಯ ತಂದುಕೊAಡು ಏನಾದರೂ ಆಗಿದ್ದು ಆಗಲಿ ಎಂದು ಆ ಕೊಳವೆಯ ಕೊನೆಗೆ ಇದ್ದ ವೈರನ್ನು ಎಳೆದಾಗ ಆ ಕೊಳವೆ ಜೀವಂತಗೊAಡು ಜೋರಾಗಿ ಪೋಲಿಸ್ ಸೈರನ್ ತರದ ಧ್ವನಿ ಹೊರ ಹೊಮ್ಮತೊಡಗಿತು. ಆಕ್ಟಿವಾ ಹಿಡಿದು ಹೊರಟಿದ್ದ ದಾಂಡಿಗರು ಎನೂ ತಿಳಿಯದೆ ಕಂಗಾಲಾಗಿ ಅತ್ತಿತ್ತ ನೋಡತೊಡಗಿದರು. ಸ್ಕೂಟರ ಆಸೆ ಬಿಟ್ಟು ಹಿಂದಕ್ಕೆ ಒಡ ಬೇಕೊ ಅಥವಾ ಅಲ್ಲಿಯೇ ಬೇರೆ ಎನಾದರೂ ಸಾಧ್ಯತೆ ಇದೆ ಎಂದು ಯೋಚಿಸುವುದರಲ್ಲಿ ಕೊನೆಯ ಲಾರಿಯಿಂದ ಒಬ್ಬ ವ್ಯಕ್ತಿ ಇಳಿದು ಧ್ವನಿ ಬಂದತ್ತ ನೋಡತೊಡಗಿದ್ದ. ದೂರದಲ್ಲಿ ಬೀದಿ ದೀಪದ ಅಡಿಯಲ್ಲಿ ಸ್ಕೂಟಿ ಕಾಣಿಸಿತು. ಮನದಲ್ಲಿ ಸ್ವಲ್ಪ ದೈರ್ಯ ತುಂಬಿಕೊAಡು ನಿಂತು ನೊಡುವಷ್ಟರಲ್ಲಿ ಸ್ಕೂಟಿಯ ಮೇಲೆ ವಾಚಮನ್‌ನ ಮಗ ಸೋಮ ಕಾಣಿಸಿದ್ದ. ಮುಳುಗುತ್ತಿದ್ದವಳಿಗೆ ಹುಲ್ಲು ಕಡ್ಡಿಯ ಆಸರೆ ಸಿಕ್ಕಂತೆ ರಸ್ತೆಯತ್ತ ಜೋರಾಗಿ ಓಡಿದಳು. ಓಡಿ ಬರುತ್ತಿದ್ದ ದೀಪಾಳನ್ನು ನೋಡಿ ಆತ ಸ್ಕೂಟಿ ನಿಲ್ಲಿಸಿ “ಎನಾಯಿತು ಅಕ್ಕಾ? ನೀವು ಬರುವುದು ಲೇಟಾಯಿತು ಎಂದು ಅಮ್ಮಾ ಕ್ರಾಸ್‌ವರೆಗೆ ಹೋಗಿ ನೋಡಿ ಬಾ ಅಂತ ಕಳಿಸಿದರು” ಅಂದ. ಆಕೆ ಮಾತನಾಡಲು ಧ್ವನಿ ಹೊರಡದೇ ಸುಮ್ಮನೆ ತನ್ನ ಆಕ್ಟಿವಾದತ್ತ ಕೈ ಮಾಡಿದಳು. “ಪಂಕ್ಚರ್” ಅಷ್ಟೇ ಕಷ್ಟಪಟ್ಟು ಹೇಳಲು ಸಾಧ್ಯವಾಗಿದ್ದು. ನಂತರ ಆತನ ಕೈಯಿಂದ ಸ್ಕೂಟಿ ಇಸಿದುಕೊಂಡು “ಆಕ್ಟಿವಾ ನೀನು ತಗೊಂಡು ಬಾ ನಾನು ಸ್ಕೂಟಿ ತೆಗೆದುಕೊಂಡು ಹೊಗ್ತಿನಿ”ೆ ಎಂದು ಹೇಳುತ್ತ. ಹಿಂದೆ ತಿರುಗಿ ನೋಡು ದೈರ್ಯ ಸಾಲದೇ ಮುಂದೆ ಹೊರಟು ಬಿಟ್ಟಿದ್ದಳು. ಸೋಮು ಆಕ್ಟಿವಾ ಹತ್ತಿರ ಬಂದಾಗ ಅದು ರಸ್ತೆಯ ದಂಡೆಗೆ ಅನಾಥವಾಗಿ ನಿಂತಿತ್ತು. ಮಗಳ ದಾರಿ ಕಾಯುತ್ತ ನಿಂತಿದ್ದ ವೈದೇಹಿ ಆತಂಕ ತಡೆಯಲಾರದೆ ಹೊರಗೆ ಕಾಣಿಸಿದ ಸೋಮನನ್ನು ಕರೆದು ಶಿಲ್ಪಾಳ ಸ್ಕೂಟಿ ಕೀ ಕೊಟ್ಟು ಮುಖ್ಯ ರಸ್ತೆಯವರೆಗೆ ಹೋಗಿ ದೀಪಾಳ ಜೊತೆಗೆ ಬರುವಂತೆ ಕಳುಹಿಸಿದ್ದರು. ತಾಯಿಯ ಹೃದಯಕ್ಕೆ ಆರನೇಯ ಜ್ಞಾನೇಂದ್ರಿಯ ಇರುತ್ತದೊ ಎನೋ!
ಮನೆಗೆ ಬರುವಷ್ಟರಲ್ಲಿ ದೀಪಾಳ ಹೃದಯದ ಬಡಿತ ಸ್ಥಿಮಿತಕ್ಕೆ ಬಂದಿತ್ತು. ಮೊದಲೇ ಆತಂಕದಿAದ ಕಾಯುತ್ತಿದ್ದ ತಾಯಿಗೆ ಹೆಚ್ಚಿಗೆ ಏನೊ ಹೇಳದೇ ಬರಿ ಆಕ್ಟಿವಾ ಪಂಕ್ಚರ್ ಆಗಿದ್ದರಿಂದ ಬರಲು ತಡವಾಗಿದ್ದು ಸೋಮ ಬಂದಿದ್ದರಿAದ ಅನೂಕೂಲವಾಯಿತು ಎಂದು ಹೇಳುತ್ತ ತನ್ನ ಕೋಣೆಯತ್ತ ನಡೆದಳು. ಮನಸ್ಸು ಭಾರವಾಗಿತ್ತು. ಸ್ವಚ್ಚವಾಗಿ ಗಗನದಲ್ಲಿ ಹಾರುತ್ತ ಮೇಲೆರಲು ಬಯಸುತ್ತಿದ್ದ ಹಕ್ಕಿಯ ರೆಕ್ಕೆಯಲ್ಲಿ ಮುಳ್ಳು ಚುಚ್ಚಿದಂತಾಗಿತ್ತು. ಇನ್ನೂ ಎಷ್ಟು ದಿನ ಈ ಆರು ಗಂಟೆಯ ಬೇಡಿಯನ್ನು ತೊಟ್ಟು ಓಡುವುದು? ಹಾಗೆ ಬೇಡಿ ತೊಟ್ಟು ಓಡುತ್ತ ಗುರಿ ಮುಟ್ಟಲು ಸಾಧ್ಯವೇ? ಸ್ತಿçÃಯಾಗಿ ಹುಟ್ಟಿದ್ದಕ್ಕೆ ಇಷ್ಟು ದೊಡ್ಡ ಬೆಲೆ ತೆರಬೇಕೆ? ಆಶೆ ಆಕಾಂಕ್ಷೆಗಳನ್ನು ಸುಟ್ಟುಕೊಳ್ಳಬೇಕು ಅಥವಾ ಪ್ರಿಯಾಂಕಾ ರೆಡ್ಡಿಯ ಹಾಗೆ ದುರುಳರಿಂದ ದೇಹ ಸುಟ್ಟು ಹೋಗಬೇಕು! ಆ ಮಹಾತ್ಮಾ ಹೇಳಿದ ಸ್ವಾತಂತ್ರö್ಯ ನಮ್ಮ ದೇಶಕ್ಕೆ ಸಿಕ್ಕು ಸ್ತಿçÃಯರೂ ಮಧ್ಯರಾತ್ರಿಯಲ್ಲಿ ಒಬ್ಬಂಟಿಯಾಗಿ ಮನೆಗೆ ಮರಳಲು ಯಾವಾಗ ಸಾಧ್ಯವಾಗುವದೊ? ಯೋಚನೆಗಳ ತಂತಿÉ ತಂಗಿಯ ಪ್ರವೇಶದಿಂದ ಕತ್ತರಿಸಿತ್ತು. “ಅಕ್ಕಾ ಎನೂ ತೊಂದರೆ ಆಗಲಿಲ್ಲ ಅಲ್ಲಾ? ಅಮ್ಮಾ ಸೋಮನ್ನ ಕಳಿಸಿದ್ದು ಒಳ್ಳೆಯದೇ ಆಯ್ತು. ನಾನೇ ಬರೋಣ ಅಂತ ಹೊರಟಿದ್ದೆ. ಅಷ್ಟರಲ್ಲಿ ಅಮ್ಮ ಅವನನ್ನು ಕಳಿಸಿದ್ದರು” ಅಂದಾಗ ನಗುತ್ತ “ಅವ ಬರೂಷ್ಟರಲ್ಲಿ ನಾನು ನೀ ಕೊಟ್ಟಿದ್ದ ಸೈರನ್ ಬಾರಿಸಿ ಬಿಟ್ಟಿದ್ದೆ. ಆದರೂ ಸ್ವಲ್ಪ ಟೆನ್‌ಶನ್ ಆಗಿತ್ತು. ಏನಾದರೂ ಆಗ್ಲಿ ನಾಳೆಯಿಂದ ಸ್ವಲ್ಪ ಬೇಗ ಹೊರಡತಿನಿ ಇಲ್ಲದಿದ್ದರೆ ಅಮ್ಮ ಟೆನ್‌ಶನ್ ಮಾಡ್ಕೊತ್ತಾರೆ” ಎಂದು ಆಕೆಯ ಆತಂಕ ಕಡಿಮೆಗೊಳಿಸಿದಳು. ಆದರೂ ಅವಳ ಮನಸ್ಸಿನಲ್ಲಿ ಬ್ರೇಕಿಂಗ ನ್ಯೂಸ್‌ಗಳಿಗಾಗಿ ಕಾಯುವ ಹಸಿದ ಚಾನಲ್‌ನವರಿಗೆ ನಾಳೆ ಸಿಗಬೇಕಿದ್ದ ಬಿಸಿ ಸುದ್ದಿ ತಪ್ಪಿದಂತಾಯಿತು ಎಂದು ಮನಸ್ಸಿನ ಮೂಲೆಯಲ್ಲಿ ಒಂದು ವ್ಯಂಗ್ಯ ಹಾಯ್ದು ಹೋಯಿತು.
-ಪ್ರೊ. ರಾಜನಂದಾ ಘಾರ್ಗಿ
ಪ್ರಾಧ್ಯಾಪಕಿ (ನಿವೃತ್ತ)
ಬೆಳಗಾವಿ
Excellent Story Prof Rajananda Ghargi madam
ಧನ್ಯವಾದಗಳು
Good story
Good story
Super
Very nice