ಗಜಲ್
ಮಂಗಳಕೆ ಇಟ್ಟ ಕಾಲು ಅಂಗಳಕೆ ಇಡಲು ಹಿಂಜರಿಯುತಿದೆ
ಒಲವ ಕೊಟ್ಟ ಹೆಗಲಿಗೆ ಇಂದು ಹೆಗಲು ಕೊಡಲು ಹಿಂಜರಿಯುತಿದೆ
ಅನುರಾಗದಲಿ ಹೆತ್ತು ಹೊತ್ತ ಉಸಿರುಗಳು ಅನಾಥವಾಗಿವೆ
ಒಡಲಲಿ ಹೊರಳಾಡಿದ ಜೀವ ಮಣ್ಣು ಹಾಕಲು ಹಿಂಜರಿಯುತಿದೆ
ಮುದ್ದಾಡಿ ಚಂದಿರ ತೋರಿಸಿದ ಲಾಲಿ ಹಾಡು ಮೂಕವಾಗಿದೆ
ಕೈತುತ್ತು ಉಣಿಸಿದ ಕೈಗೆ ಮುತ್ತು ನೀಡಲು ಹಿಂಜರಿಯುತಿದೆ
ಕುಸುಮಗಳು ನಲಿಯುತಿದ್ದವು ಸೋದರ ಜೊತೆ ಈಗ ಮಂಕಾಗಿವೆ
ದುಂಬಿಯು ಬಿರಿದ ಸುಮದ ಮಕರಂದ ಹೀರಲು ಹಿಂಜರಿಯುತಿದೆ
ವಿಶ್ವವೇ ಮೌನವಾಗಿದೆ ಇದೆಂತಹ ದುರಿತಕಾಲ “ಪ್ರಭೆ”
ಬೌದ್ಧ ಪೌರ್ಣಮಿ ಕಿರಣಕೆ ಸಾಗರ ಉಕ್ಕಲು ಹಿಂಜರಿಯುತಿದೆ
–ಪ್ರಭಾವತಿ ಎಸ್ ದೇಸಾಯಿ ವಿಜಯಪುರ
ಪ್ರಸ್ತುತ ಕಾಲಕ್ಕೆ ಹೊಂದುವ ಗಜ಼ಲ್ ಅಮ್ಮ.. ಸೂಪರ್.