ಬುದ್ದಿನ್ನಿಯಲ್ಲಿ ಪ್ರೌಢಶಾಲೆ ಆರಂಭಿಸಲು ಶಾಸಕರಿಂದ ಪತ್ರ

e-ಸುದ್ದಿ, ಮಸ್ಕಿ

ತಾಲೂಕಿನ ಬುದ್ದಿನ್ನಿ (ಎಸ್) ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮುಂಜೂರು ಮಾಡುವಂತೆ ಒತಾಯಿಸಿ ಶಾಸಕ ಬಸನಗೌಡ ತುರ್ವಿಹಾಳ ಶಿಕ್ಷಣ ಸಚಿವ ಸುರೇಶ ಕುಮಾರ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಬುದ್ದಿನ್ನಿ ಗ್ರಾಮಕ್ಕೆ ಪ್ರೌಢಶಾಲೆ ಮುಂಜೂರು ಮಾಡಿದರೆ ಸುತ್ತಮೂತ್ತಲಿನ 13 ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ 10 ರಿಂದ 15 ಕೀ.ಮೀ ಅಂತರದಲ್ಲಿರುವ ಪ್ರೌಢಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬುದ್ದಿನ್ನಿ ಗ್ರಾಮದಲ್ಲಿ ಪ್ರೌಢಶಾಲೆಗಾಗಿ ಶಾಲ ಕಟ್ಟಡ ಕಟ್ಟಡಲಾಗಿದೆ. ಆದರೆ ಪ್ರೌಢಶಾಲೆ ಮಂಜುರು ಇಲ್ಲದ ಕಾರಣ ಕಟ್ಟಡ ಹಾಳಾಗುವ ಸಂಭೌವಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದ್ದಾರೆ.

ಮಸ್ಕಿ ಜಲಾಶಯಕ್ಕೆ ಹೆಚ್ಚಿದ ಒಳ ಹರಿವು ಃ ಕಳೆದ ಎರಡು ದಿನಗಳ ಹಿಂದೆ ಕುಷ್ಟಗಿ ಭಾಗದಲ್ಲಿ ಮಳೆ ಸುರಿದ ಪರಿಣಾಮ ಮಸ್ಕಿ ಜಲಾಶಯಕ್ಕೆ ನೀರು ಹರಿದು ಬಂದಿದೆ.
ಮಸ್ಕಿ ಜಲಾಶಯಕ್ಕೆ 10 ಅಡಿಗಳಷ್ಟು ನೀರು ಹರಿದು ಬಂದಿದೆ. ಜಲಾಶಯ ಭರ್ತಿಗೆ ಇನ್ನೂ 18 ಅಡಿ ನೀರು ಬಾಕಿ ಇದ್ದು ಉತ್ತಮ ಮಳೆಯಾದರೆ ಜಲಾಶಯ ಭರ್ತಿಯಾಗಲಿದೆ ಎಂದು ಎಇಇ ದಾವುದ್ ತಿಳಿಸಿದ್ದಾರೆ.

 

 

Don`t copy text!