ದಾನವೇ ದೈವ
(ಭಾಮಿನಿ ಷಟ್ಪದಿಯಲ್ಲಿ)
ಅನ್ನ ಜೀವವು ಕಾಳು ಬದುಕದು
ಚಿನ್ನ ಕೇವಲ ನೋಟ ವೈಭವ
ಖಿನ್ನ ಮನಸಿನ ಹಸಿದ ಒಡಲಿಗೆ ದಾನ ದೈವವವೋ…..!!
ಭಿನ್ನ ಬೇಡಾ ಕೊಟ್ಟ ಕೈಗೇ
ಚೆನ್ನ ರೂಪದು ದಿವ್ಯ ನಡೆತೆಗೆ
ಕನ್ನ ಬೇಡಾ ಹರಿಸು ಕೈಗೇ ಸ್ವರ್ಗ ನಿನಗೆಲವೋ……!!
ಶಬ್ದ ಮುರುಟಿವೆ ರೋಗ ಹಬ್ಬಿದೆ
ಕಬ್ಬ ಕಾವ್ಯವು ಹಸಿವು ಹೊತ್ತಿವೆ
ಹಬ್ಬ ಹಳಸಿ ನಾಲ್ಕು ಗೋಡೆಯು ಜೈಲು ನಿರ್ಮಿಸಿವೇ….!!
ನಬ್ಬು ಮೂಡಿ ಹಗಲು ಹಾಡೀ
ತಬ್ಬಿ ರಾತ್ರಿಯ ಕವಳಿ ಬಿದ್ದರು
ಮಬ್ಬಿನಲ್ಲಿಯೇ ಮುಳುಗಿ ನವೆದರು ತಣಿಯದಾಹಸಿವೂ…..!!
ಆವ ಕೊಟ್ಟರು ದೈವ ದರ್ಶನ
ಬವಣೆ ಕಂಡು ಗುರುವು ಮಠಗಳು
ನವಣೆ ಕಾಳೂ ಜೀವವಾಯಿತು ಕರಿಯ ಕಾವಳದೀ…..!!
ಪವನ ಸಾಕ್ಷಿ ಮನದ ಮಿಡಿತವು
ಕವನ ಕಟ್ಟಿ ಪಾಡಿ ಪೊಗಳುವೆ
ದವನ ಪೂವನು ಮುಡಿಸಿ ಚರಣಕೆ ಶರಣು ಗುರುದೇವಾ……!!
ಒಪ್ಪಿ ದಾನವ ಹರಿಸಿ ಬೇಡುವೆ
ಕಪ್ಪು ತುಂಬಿದ ನಾಡ ನಭದಲಿ
ತಪ್ಪಿ ಬೇಡಾ ಕರಿಯ ಬಾವುಟ ನನ್ನ ನಾಡಿನಲೀ……!!
ರೆಪ್ಪೆ ವಿಡದೇ ಬೇಡಿಕೊಳ್ಳುವೆ
ಮುಪ್ಪುವಿರದಾ ವರವ ನೀಡೋ
ನೆಪ್ಪುವಿರಲೀ ನನ್ನ ನಾಡಿಗೆ ಹೆಗುರು ದೇವಾ……!!
–ಯಮುನಾ.ಕಂಬಾರ
ರಾಮದುರ್ಗ
( ಕರೋನಾ ಕಾಲದಲ್ಲಿ ಬಡವರಿಗೆ ಕಾಳು ದಾನ ಮಾಡಿದ ಮಠದ ಸ್ವಾಮಿಜಿಗಳ ಕುರಿತು)
ಶರಣೂ ಶರಣಾರ್ಥಿ ಯಮುನಾ ಕುಂಬಾರ್ ಶರಣರಿಗೆ, ಕನ್ನಡ ಹಿರಿತನದ ಸಾಹಿತ್ಯದಲ್ಲಿ ವಚನ ಸಾಹಿತ್ಯದ ಕೊಡುಗೆ ಅಪಾರ. ದಾನದ ಕುರಿತಾಗಿ ಬಹಳ ಚೆನ್ನಾಗಿ ಬರೆದಿದ್ದೀರಾ…
ದಾನ ಎಂಬುದರಕಿಂತ ದಾಸೋಹ ಎಂದು ಓದಿದರೆ ವೊಳ್ಳೇ ಅರ್ಥನೀಡುತ್ತಲಿದೆ.
ಶರಣು ಶರಣಾರ್ಥಿ ssss
ಭಕ್ತಿ ಪೂರ್ವಕವಾಗಿ, ಅಭಿಮಾನ ಪೂರ್ವಕವಾಗಿ ಬರೆದಿದ್ದೀರಿ ಮೇಡಂ.