ಹೂತು ಹೋದನು

ಹೂತು ಹೋದನು

ಹೂತು ಹೋದನು
ಕಪ್ಪು ನೆಲದ
ಕೆಂಪು ಕವಿ
ಉಸಿರಲಿ ಹೊಸತು
ಕಾಣುತ
ಬಿರುಕು ಭೂಮಿಯ
ದಲಿತ ಪೈರು
ಒಣಗಿ ಹೋಯಿತು
ಸೋಂಕಿಗೆ
ಜ್ವಾಲೆ ಎದ್ದು
ಕ್ರಾಂತಿ ಕನಸು
ಕಮರಿ ಹೋಯಿತು
ದೀಪವು
ಹಾದಿಯದನು
ಹೊಲೆ ಮಾದಿಗರ
ಸ್ಪೂರ್ತಿ ಚಿಲುಮೆ
ಸೋತವರ
ಸತ್ತು ಹೋದನು
ಕಪ್ಪು ಹುಡುಗ
ಜೀವ ಚಿಗುರಿತು
ಕಾವ್ಯದಿ
ನಡೆದ ದಾರಿ
ಎಷ್ಟು ದುರ್ಗಮ
ಸೋಲು ನೋವೇ
ಜೀವನ
ಇಲ್ಲವಾದನು
ಸಿದ್ಧಲಿಂಗಯ್ಯ
ಜ್ಯೋತಿ ಹೊತ್ತಿತು
ಊರ ಕೇರಿಯುು

ಡಾ ಶಶಿಕಾಂತ ಪಟ್ಟಣ

Don`t copy text!