ಪ್ರೇಮ ಕವಿ

 

ಪ್ರೇಮ ಕವಿ

ಎಲ್ಲರೂ ನಿನ್ನ
ಬಂಡಾಯದ ಕವಿ
ಎಂದರೂ….
ನನಗೆ ಮಾತ್ರ ನೀ
ಪ್ರೇಮ ಕವಿ
ಬೆಟ್ಟದಲ್ಲಿ ಸುಳಿದಾಡ
ಬೇಡೆಂದು
ಅದೆಷ್ಟು ಪ್ರೀತಿಯಿಂದ
ನೀ ಅಂಕೆ ಹಾಕಿದ್ದೆ….!
ನಿನ್ನ ಮಾತು ಮೀರಲು
ಮನಸ್ಸಾದರೂ ಹೇಗೆ
ಬಂದಿತು ನನ್ನಂತ ಕಾವ್ಯ
ಪ್ರೇಮಿಗೆ….!
ಪದಗಳೊಳಗೆ
ತುಂಬಿತುಳುಕಿಸಿದ
ಪ್ರೀತಿಯ ಭಾವಗಳ
ಅನುಸಂಧಾನ ಗೊಳಿಸುತ್ತ
ನನ್ನೊಳಗೆ ನಾನು
ಆನಂದವಾಗಿದ್ದೆ….!
ನೀ ಬರೆದ ಪದ್ಯ ಕೆ
ಹೊಸ ರಾಗ ಬೆರೆಸುತ
ಗುನುಗುತ ನನ್ನೊಳಗೆ
ನನ್ನ ಮರೆತಿದ್ದೆ….!
ಚೆಲುವಾದ ಹೂವೆಂದ
ನಿನ್ನ ಹೋಗಳಿಕೆಗೆ
ನಾ ಸೊತಿದ್ದೆ….!
ಕಾವ್ಯದಿಂದ ನೀ ನನ್ನ
ಗೆದ್ದಿದ್ದೆ…!
ನಾ ಮೈ ಮರೆಯುತ್ತೇನೆ
ನಿನ್ನ ಕಾವ್ಯ ಕಲ್ಪನೆಗೆ…!
ಮೊಲದ ಹಿಂಡಿನ ಸುಕೋಮಲ
ಸ್ಪರ್ಶಕ್ಕೆ….!
ನೀ ಬರೆದ ಈ ಪ್ರೇಮಕಾವ್ಯ
ಪ್ರತಿ ಭಾವಜೀವಿ
ಹೆಣ್ಣಿಗದು ಮೊದಲ
ಪ್ರೇಮ ಪತ್ರ…..!
(ಡಾ.ಸಿದ್ದಲಿಂಗಯ್ಯ ಅವರಿಗೊಂದು ನುಡಿ ನಮನ)

ಡಾ. ನಿರ್ಮಲಾ ಬಟ್ಟಲ

Don`t copy text!