ಗೊಲ್ಲಾಳೇಶ್ವರ ಜಯಂತಿ

ಗೊಲ್ಲಾಳೇಶ್ವರ ಜಯಂತಿ

e-ಸುದ್ದಿ ಸಿಂಧನೂರು

ಗುರುವಾರ ಸಂಜೆ 5.00 ಗಂಟೆಗೆ ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಬಸವ ಕೇಂದ್ರದಲ್ಲಿ ಹನ್ನೆರಡನೇ ಶತಮಾನದ ವೀರ ಕುರುಬ ಗೊಲ್ಲಾಳೇಶ್ವರರ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಸವಕೇಂದ್ರದ ಜಿಲ್ಲಾಧ್ಯಕ್ಷರಾದ ಶರಣ ವೀರಭದ್ರಪ್ಪ ಕುರಕುಂದಿ  ಮಾತನಾಡಿ ವೀರ ಕುರುಬ ಗೊಲ್ಲಾಳೇಶ್ವರರು ಹನ್ನೆರಡನೇ ಶತಮಾನದ ಬಸವಣ್ಣನವರ ಜೋತೆಯಲ್ಲಿ ಇದ್ದವರು ಬಹಳ ಭಕ್ತಿವಂತರು ಹೌದು,ಕುರಿಯ ಇಕ್ಕಿಯನ್ನು ಲಿಂಗವೆಂದು ಭಾವಿಸಿ ಕುರಿಯ ಹಾಲನ್ನು ಲಿಂಗಯ್ಯನಿಗೆ ಎರೆಯುತ್ತಿದ್ದರು, ನಿಜವನ್ನು ಅರಿತು ಕಲ್ಯಾಣಕ್ಕೆ ಹೊಗಿ ಅನುಭಾವದಲ್ಲಿ ಬೆರೆತು ಮಹಾನುಭಾವಿಗಳು,ಅವರ ಹತ್ತು ವಚನಗಳು ಲಭ್ಯವಾಗಿವೆ ಎಂದರುು.

ಬಸವ ಕೇಂದ್ರದ ಮಾಜಿ ಅಧ್ಯಕ್ಷ ಗುಂಡಪ್ಪ ಬಳಿಗಾರ್, ಪಂಪನಗೌಡ, ವೀರಭದ್ರಗೌಡ,ಗೊವಿಂದರಾಜ, ಶಾಂತಪ್ಪ,ಕೆರೆಗೌಡ,ವೀರನಗೌಡ,ಮುದ್ದನಗೌಡ, ಹುಲುಗಪ್ಪ,ಚಾಕದಸಾಬ್, ಮಲ್ಲಿಕಾರ್ಜುನ, ಪಂಪಯ್ಯಸ್ವಾಮಿ ಸಾಲಿಮಠ ಮತ್ತಿತರರು ಉಪಸ್ಥಿತರಿದ್ದರು.


 

Don`t copy text!