ಲಿಂಗಸಗೂರು ಸಿಂಧನೂರು ಹೆದ್ದಾರಿ ಬದಿಗಳಲ್ಲಿ ಬೇಕಾ ಬಿಟ್ಟಿ ರಸ್ತೆ ಅಗೆತ ಗುತ್ತಿಗೆದಾರರಿಗೆ ನೋಟೀಸ್ ಜಾರಿ!

e-ಸುದ್ದಿ ಮಸ್ಕಿ
ವಾಹನ ಸವಾರರ ಅನೂಕೂಲಕ್ಕಾಗಿ ಹಾಗೂ ರಸ್ತೆ ಅಪಘಾತಗಳನ್ನು ತಡೆಗಟ್ಟುವುದಕ್ಕಾಗಿ ಸರ್ಕಾರ ಪ್ರತಿ ವರ್ಷ ರಸ್ತೆಗಳ ನಿರ್ವಹಣೆಗಾಗಿ ಕೋಟ್ಯಾಂತ ಹಣ ಖರ್ಚು ಮಾಡುತ್ತಿದೆ. ಆದರೆ ನೆಟ್ಟಗಿರುವ ರಸ್ತೆಗಳನ್ನು ಅಗೆದು ಹೆದ್ದಾರಿ ಪ್ರಾಧಿಕಾರ ನಿಗದಿಪಡಿಸಿರುವ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಕಂಪನಿಯವರು ಕೇಬಲ್ ಅಳವಡಿಕೆ ಮಾಡುತ್ತಿರಿವುದರಿಂದ ಜೀವ ಭಯದಲ್ಲಿ ಸಂಚಾರ ಮಾಡುವಂತಾಗಿದೆ.
ಲಿಂಗಸಗೂರು-ಸಿಂಧನೂರು ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆ ಬದಿಗಳಲ್ಲಿ ಸರ್ಕಾರ ಖಾಸಗಿ ಟೆಲಿಕಾಂ ಕಂಪನಿಗೆ ಕೇಬಲ್ ಅಳವಡಿಸಲು ಅನುಮತಿ ನೀಡಿದೆ. ಆದರೆ ಕೇಬಲ್ ಕಂಪನಿಯ ಗುತ್ತಿಗೆದಾರರು ಮಾತ್ರ ಹೆದ್ದಾರಿ ಪ್ರಾಧಿಕಾರ ನಿಗದಿಪಡಿಸಿರುವ ನಿಯಮಗಳನ್ನು ಗಾಳಿಗೆ ತುರಿ ಮನಸ್ಸೋ ಇಚ್ಛೆಯಂತೆ ರಸ್ತೆ ಅಗೆದು ಕೇಬಲ್ ಅಳವಡಿಕೆ ಮಾಡುತ್ತಿದ್ದಾರೆ, ಇದರಿಂದ ರಸ್ತೆಗಳಲ್ಲಿ ಸಂಚಾರ ಮಾಡುವ ವಾಹನ ಸವಾರರು ಜೀವ ಕೈಯಲ್ಲಿಡಿದು ರಸ್ತೆಯಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಹನ ಸವಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ನಿರ್ಲಕ್ಷ್ಯ: ಹೆದ್ದಾರಿ ಬದಿಗಳಲ್ಲಿ ಅಳವಡಿಸುತ್ತಿರುವ ಟೆಲಿಕಾಂ ಕೇಬಲ್ ಹೆದ್ದಾರಿ ಪ್ರಾಧಿಕಾರ ನಿಗದಿ ಮಾಡಿರುವ ಅಳತೆಯಂತೆ ರಸ್ತೆ ಬದಿಯಲ್ಲಿ ಅಳವಡಿಸಬೇಕು ಎಂಬ ನಿಯಮ ವಿಧಿಸಿ ಅನುಮತಿ ನೀಡಿದೆ ಆದರೆ ಗುತ್ತಿಗೆದಾರರು ಮಾತ್ರ ಇದ್ಯಾವುದನ್ನು ಲೆಕ್ಕಿಸದೇ ಹೆದ್ದಾರಿ ಬದಿಯ ಒಂದೇರಡು ಅಡಿಯಲ್ಲಿ ಕೇಬಲ ಅಳವಡಿಸುತ್ತಿದ್ದಾರೆ. ಅಲ್ಲದೇ ಸಂಭಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದು ಗುತ್ತಿಗೆದಾರರಿಗೆ ಸೂಚಿಸಿದರೂ ಸಹ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಇದರಿಂದ ವಾಹನ ಸಂಚಾರ ಮಾಡಲು ತೊಂದರೆ ಪಡುವಂತಾಗಿದೆ.
————————-

ರಾಷ್ಟ್ರೀಯ ಹಾಗೂ ರಾಜ್ಯಹೆದ್ದಾರಿ ಬದಿಗಳಲ್ಲಿ ಖಾಸಗಿ ಕಂಪನಿಯವರು ಅಳವಡಿಸುತ್ತಿರುವ ಟೆಲಿಕಾಂ ಕೇಬಲನಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೂ ತಂದರೂ ಗುತ್ತಿಗೆದಾರರು ಮಾತ್ರ ಕೆಲಸವನ್ನು ಸ್ಥಗಿತ ಮಾಡದೆ ನಿಯಮ ಉಲ್ಲಂಘಿಸಿ ಕೇಬಲ ಅಳವಡಿಸುತ್ತಿದ್ದಾರೆ
-ಬಾಲಸ್ವಾಮಿ ಜಿನ್ನಾಪೂರು, ದಲಿತ ಸಂರಕ್ಷ ಸಮಿತಿ ಜಿಲ್ಲಾಧ್ಯಕ್ಷ,
—————————–

ಮಸ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಟೆಲಿಕಾಂ ಕಂಪನಿಯವರಿಗೆ ಶರತ್ತುಗಳನ್ನು ಪಾಲಿಸಿಕೊಂಡು ಕೇಬಲ ಅಳವಡಿಸಲು ಅನುಮತಿ ನೀಡಿದ್ದೇವೆ. ಹೆದ್ದಾರಿಯಲ್ಲಿ ಸಂಚಾರ ಮಾಡುವ ಸವಾರರಿಗೆ ತೊಂದರೆಯಾಗದಂತೆ ಕೇಬಲ ಅವಳಡಿಸಬೇಕು ಇಲ್ಲದಿದ್ದರೆ ಗುತ್ತಿಗೆದಾರರ ಇಎಂಡಿ ಮೊತ್ತವನ್ನು ಜಪ್ತಿ ಮಾಡಿಕೊಂಡು ಕ್ರಮ ಕೈಗೊಳುವುದಾಗಿ ನೋಟೀಸ್ ಸಹ ನೀಡಿದ್ದೇವೆ.
-ವೀಜಯಕುಮಾರ ಪಾಟೀಲ್,ಎಇಇ. ಹೆದ್ದಾರಿ ಪ್ರಾಧಿಕಾರ ಹುನುಗುಂದ ವಿಭಾಗ,

Don`t copy text!