e-ಸುದ್ದಿ ಮಸ್ಕಿ
ಕವಿ. ಡಾ ಸಿದ್ಧಲಿಂಗಯ್ಯ ಅವರ ಸಾಹಿತ್ಯದಲ್ಲಿ ನೊಂದವರ ದನಿ ಅಡಗಿದೆ. ಸ್ವತಃ ನೋವುಂಡ ಸಿದ್ದಲಿಂಗಯ್ಯನವರು ವ್ಯವಸ್ಥೆಯ ವಿರುದ್ಧ ಬಂಡಾಯ ಬಡಿದೆಬ್ಬಿಸಿ ಸಂಘಟನೆಗೆ ಹೊಸ ರೂಪ ಕೊಟ್ಟಿದ್ದರು ಎಂದು ದಲಿತ ಕವಿ ಸಿ.ದಾನಪ್ಪ ಸ್ಮರಿಸಿಕೊಂಡರು.
ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಇತ್ತಿಚೀಗೆ ಅಗಲಿದ ಡಾ.ಸಿದ್ದಲಿಂಗಯ್ಯ ಮತ್ತು ಪ್ರೋ.ವಸಂತ ಕುಷ್ಟಗಿ ಅವರಿಗೆ ಶುಕ್ರವಾರ ಅಕ್ಷರ ಸಾಹಿತ್ಯ ವೇದಿಕೆ ಮತ್ತು ಕೊಡುಗುಂಟಿ ಪ್ರಕಾಶನದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಂಡಾಯ ಸಾಹಿತ್ಯ ಸಂಘಟನೆಯ ಮುಂಚುಣಿಯಲ್ಲಿದ್ದ ಸಿದ್ದಲಿಂಗಯ್ಯನವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರೆದ ಶ್ರೇಷ್ಟ ಕವಿ ಎಂದು ಸಿ.ದಾನಪ್ಪ ಬಣ್ಣಿಸಿದರು. ಜಿಲ್ಲಾ ಕಾಸಪ ನಿಕಟ ಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಸಿದ್ದಲಿಂಗಯ್ಯನವರು ಹೊಸ ದಾರಿ ತೋರಿಸಿದ್ದರು ಎಂದರು.
ಸಾಹಿತಿಗಳಾದ ಗುಂಡುರಾವ್ ದೇಸಾಯಿ, ಅಮರೇಶ ಪಾಟೀಲ, ವರದೇಂದ್ರ, ಪರುಶುರಾಮ ಕೊಡಗುಂಟಿ, ಪ್ರಭುದೇವ ಸಾಲಿಮಠ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಘನಮಠದಯ್ಯ
ಸಾಲಿಮಠ ಮಾತನಾಡಿದರು.