ಉಸಿರಾಟದ ತೊಂದರೆ ನಿವಾರಿಸಲು ಆಕ್ಸಿಜನ್ ಕಾನಸ್ಟ್ರಟೇಟರ್ ಕಿಟ್ ವಿತರಣೆ


e-ಸುದ್ದಿ, ಮಸ್ಕಿ
ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಉಸಿರಾಟದ ತೊಂದರೆ ಇರುವವರಿಗಾಗಿ ತಕ್ಷಣ ಅನುಕೂಲವಾಗಲಿ ಎಂದು ತಾಲೂಕಿನ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ 17 ಆಕ್ಸಿಜನ್ ಕನಸ್ಟ್ರೇಟೇಟರ್ ಮಶಿನಗಳನ್ನು ವಿತರಸಿಲಾಗಿದೆ ಎಂದು ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು.
ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಆಸ್ಪತ್ರೆಗೆ 2 ಮಶಿನ್ ಗಳನ್ನು ಹಸ್ತಾಂತರಿಸಿ ಮಾತನಾಡಿದರು. ಕರೊನ ಸೊಂಕು ಇಳಿಮುಖ ಕಂಡರು ಜನರು ಅಲಕ್ಷ್ಯ ಮಾಡಬಾರದು. ಸರ್ಕಾರದ ನಿಯಮದಂತೆ ಸಮಾಜಿಕ ಅಂತರ ಕಪಾಡಿಕೊಂಡು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಸುರಕ್ಷಿತವಾಗಿರಬೇಕು. ಎಂದರು.
ಮಸ್ಕಿ-3, ತುರ್ವಿಹಾಳ-3, ಮೆದಕಿನಾಳ-2, ಸಂತೆಕೆಲ್ಲೂರು-2, ಪಾಮನಕಲ್ಲೂರು -2, ತೊರಣದಿನ್ನಿ-2 ಸರ್ಕಾರಿ ಆಸ್ಪತ್ರೆಗಳಿಗೆ ಮಶಿನ್ ಗಳನ್ನು ಸರ್ಕಾರೇತರ ಸಂಸ್ಥೆಯಿಂದ ನೆರವು ಪಡೆದುಕೊಂಡು ಕೊಡಲಾಗುತ್ತಿದೆ ಎಂದು ಶಾಸಕ ಬಸನಗೌಡ ತುರ್ವಿಹಾಳ ತಿಳಿಸಿದರು.
ಮೆದಕಿನಾಳ ಸರ್ಕಾರಿ ಆಸ್ಪತ್ರೆಯ ವೈದ್ಯ ಮಲ್ಲಿಕಾರ್ಜುನ ಇತ್ಲಿ ಮಾತನಾಡಿ ಉಸಿರಾಟದ ತೊಂದರೆ ಇರುವವರಿಗೆ ತಾತ್ಕಲಿಕವಾಗಿ ಅವರಿಗೆ ಆಮ್ಲಜನಕ ಕೊಡುವ ಮೂಲಕ ಅಪಾಯದಿಂದ ಪಾರು ಮಾಡಬಹುದು. ಕೇವಲ್ ಕರೊನಾ ರೋಗಿಗಳಿಗೆ ಅಷ್ಟೇ ಅಲ್ಲದೆ ಉಸಿರಾಟದ ಸಮಸ್ಯೆ ಇರುವ ದಮ್ಮು, ಅಸ್ತಮಾ ಇರುವವರಿಗೂ ಆಮ್ಲಜನಕ ಸರಬರಾಜು ಮಾಡುವ ಯಂತ್ರ ಸಹಕಾರಿಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

Don`t copy text!