ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ
e-ಸುದ್ದಿ, ಇಳಕಲ್ಲ
ಕವಿ. ಡಾ. ಸಿದ್ದಲಿಂಗಯ್ಯ ನವರು ವಿದ್ಯಾರ್ಥಿ ಜೀವನದ ಹೋರಾಟ ಮುರಿತು ಸಿದ್ದಣ್ಣ ಆಮದಿಹಾಳ ಮಾತನಾಡಿದರು.
ಇಳಕಲ್ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಡಾ.ಸಿದ್ದಲಿಂಗಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು..
ಮಹಾದೇವ ಕಂಬಾಗಿ ಸರ್ ಡಾ.ಸಿದ್ದಲಿಂಗಯ್ಯರವರ ಜೀವನಧಾರಿತ ಊರುಕೇರಿ ಕೃತಿ ಕುರಿತು ಮಾತನಾಡಿದರು, ನಗರಸಭೆ ಅಧ್ಯಕ್ಷರಾದ ಆ.ಶೋಭಾ ಆಮದಿಹಾಳ ಕವಿಗಳ ದಲಿತ ಸಾಹಿತ್ಯ ಕೊಡುಗೆ ತಿಳಿಸಿದರು, ಪ್ರೋ.ಕೆ.ಎ.ಬನ್ನೆಟ್ಟಿ ಸರ ಡಾ.ಸಿದ್ದಲಿಂಗಯ್ಯ ನವರು ದಲಿತರ ವಿಮೋಚನೆಗಾಗಿ ಮತ್ತೆ ಹುಟ್ಟಿ ಬಾ ಎಂದು ಕರೆ ನೀಡಿದರು,
ಮಹಾಂತೇಶ ಗಜೇಂದ್ರಗಡ ಮಾತನಾಡಿ ತಮ್ಮೊಡನೆ ಭೇಟಿ ಮಾಡಿದ ವಿಷಯವನ್ನು ಹಂಚಿಕೊಂಡರು, ಗೀರಿಶ ಅಚನೂರ ಡಾ.ಸಿದ್ದಲಿಂಗಯ್ಯ ರವರ ಬಂಡಾಯ ಸಾಹಿತ್ಯ, ದಲಿತರ ಕ್ರಾಂತಿಕಾರಿ ಕವನಗಳ ಕುರಿತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆ.ಮಂಜುನಾಥ ಹೊಸಮನಿ, ಬಸವರಾಜ ಮಠದ, ಶಾಸ್ತ್ರಿ, ರಮೇಶ. ಚಿತ್ರಗಾರ ಇತರರು ಭಾಗವಹಿಸಿದ್ದರು.