e-ಸುದ್ದಿ ಮಸ್ಕಿ
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರಿ ನ್ಯೂವ್ ಪವರ್ ಕಂಪನಿಯಿಂದ ಅಂಬ್ಯೂಲೇನ್ಸ್‍ನ್ನು ಉಚಿತವಾಗಿ ಕೊಡಲಾಗಿದೆ ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅಂಬ್ಯೂಲೇನ್ಸ್ ಸೇವೆಗೆ ಹಸಿರು ನಿಶಾನೆ ತೋರಿಸಿ ಚಾಲನೇ ನೀಡಿದರು. ಕರೊನಾದಂತ ಸಂಕಷ್ಟ ಕಾಲದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ನೆರವು ಅಗತ್ಯವಾಗಿದ್ದು ಮಸ್ಕಿ ಆಸ್ಪತ್ರೆಗೆ ಅಂಬ್ಯೂಲೇನ್ಸ್ ಕೊಟ್ಟಿರುವದಕ್ಕೆ ಕಂಪನಿಯ ಕಾರ್ಯವನ್ನು ಶಾಘ್ಲಿಸಿದರು.
ರಿ ನ್ಯೂವ್ ಪವರ ಕಂಪನಿಯ ವ್ಯವಸ್ಥಾಪಕ ಅಶ್ರಫ್ ಮಾತನಾಡಿ ಕೊವಿಡ ಸಂದರ್ಭದಲ್ಲಿ ಅಂಬ್ಯೂಲೇನ್ಸ್ ಸೇವೆ ಅಗತ್ಯವಾಗಿದೆ ಇದರ ಸದುಪಯೋಗವಾಗಲಿ ಎಂದರು.
ಡಾ.ಬಸವಶ್ರೀ, ಡಾ.ಮೌನೇಶ, ಡಾ.ಮಲ್ಲಿಕಾರ್ಜುನ ಇತ್ಲಿ, ಪುರಸಭೆ ಸದಸ್ಯ ಎಂ.ಅಮರೇಶ, ಮುದಕಪ್ಪ, ಕೃಷ್ಣ ಚಿಗರಿ ಹಾಗೂ ಇತರರು ಇದ್ದರು.