ಮುಂಗಾರು ಮಳೆ
ಕಾರ್ಮೋಡ ಕವಿದು
ಬಿಟ್ಟೂ ಬಿಡದೆ
ಸುರಿಯುತ್ತಿದೆ ಇಂದು
ಮುಂಗಾರು ಮಳೆ…
ಕಾದ ಬೆಂದೊಡಲಿಗೆ
ಪನ್ನೀರ ಹನಿಗಳ ಸಿಂಚನ
ನಸು ನಕ್ಕಳು ಭೂತಾಯಿ
ಹಸಿರುಡಿಲು ತುಂಬಲು…
ಇಣುಕಿ ನೋಡಿದರೂ
ನೇಸರನ ಸುಳಿವಿಲ್ಲ
ಮೋಡ ಕವಿದ ಬಾನಲ್ಲಿ
ಬಾನಾಡಿಗಳ ಕಲರವ…
ರೈತರಿಗೆ ಹಬ್ಬವೋ ಹಬ್ಬ
ತನ್ನೊಡಲ ತುಂಬಿಸಿಕೊಳ್ಳಲು
ಹದಗೊಳಿಸಿದ ಮಣ್ಣಿಗೆ
ಹೊಸ ಬೀಜವನ್ನು ಬಿತ್ತುವಾಸೆ..
ಹೊತ್ತು ಹೊತ್ತಿಗೂ ಮಳೆ ಬರಲಿ
ಬಂಗಾರದ ತೆನೆ ಬೆಳೆಯಲಿ
ನಮ್ಮೆಲ್ಲರ ಒಡಲು ತುಂಬಿ ದೇಶ ಸಮೃದ್ಧಿಹೊಂದಲಿ….
–ಗೀತಾ ಜಿ ಎಸ್
ಹರಮಘಟ್ಟ ಶಿವಮೊಗ್ಗ