ಒಲವು ಧಾರೆ
ಕೈ ಬೀಸಿ ಕರೆವ
ನಿನ್ನೆಡೆಗೆ
ಸಾಗಿ ಬರುವ ತವಕ….!
ಧುಮ್ಮಿಕ್ಕಿ ಹರಿಯುವ
ನೀನ್ನೊಲವ ಧಾರೆ ಯಲಿ
ನಾನು ಜಗಮರೆತ ಭಾವುಕ….!
ಆಗಸದಿ ಜಾರಿ
ಎಲ್ಲ ಎಲ್ಲೆ ಮೀರಿ
ನೀ ಬರಲು ಏನೋ ಪುಳಕ….!
ನೀ ಸಾಗಬೇಕ
ನಾ ನೋಡಬೇಕು
ಪ್ರೀತಿ ಅದೆಷ್ಟು ಚುಂಬಕ….!
ಹಾಲ್ನೋರೆಯಧಾರೆ
ನನ್ನೆದೆಯು ಸೂರೆ
ಮುತ್ತು ಹನಿಗಳ ಜಳಕ….!
ಸಿಗಲಾರೆ ನೀ ಬಿಡಲಾರೆ ನಾ
ಕಟ್ಟಿವೆ ನಾನು ಕಾವ್ಯ
ನೀನಿಗ ರಾಗ ಬೆರೆತು ಗಮಕ….!
ನಿನ್ನ ಚೆಲುವ ನನ್ನೊಲವ
ಬೆರೆಸಿ ಬಿಡಿಸಿದೆ ಚಿತ್ರ
ನೋಡು ನೀ ನಿನ್ನಷ್ಟೇ ಮೊಹಕ….!
–ಡಾ. ನಿರ್ಮಲಾ ಬಟ್ಟಲ
ಸೊಗಸಾದ ರಚನೆ, ವರ್ಣಿಸಲಸಾಧ್ಯವಾದ ಸೊಬಗನ್ನು ಮನದಲ್ಲಿ ಬಣ್ಣಿಸಿಕೊಂಡು ಹುಟ್ಟಿದ ಭಾವನಾತ್ಮಕ, ರಸಮಯ ಪದಗಳನ್ನು ಕವಿತೆಯಲ್ಲಿ ಕಟ್ಟಿಕೊಟ್ಟಿದ್ದೀರಿ. ಅಭಿನಂದನೇಗಳು ರಿ