e-ಸುದ್ದಿ ಮಸ್ಕಿ
ಜು.21 ಸೋಮವಾರ ತಾಲೂಕಿನ ಪ್ರಮುಖ ನಗರಗಳಾದ ಮಸ್ಕಿ, ಬಳಗಾನೂರು, ತುರ್ವಿಹಾಳ ಗ್ರಾಮಗಳಲ್ಲಿ ಯೋಗ ದಿನವನ್ನು ಆಚರಿಸಲಾಗುವುದು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮತ್ತು ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಹೇಳಿದ್ದಾರೆ.
ಮಸ್ಕಿಯ ಭ್ರಮರಾಂಬ ದೇವಸ್ಥಾನದಲ್ಲಿ, ಬಳಗಾನೂರಿನ ಮರಿ ಬಸವಲಿಂಗ ಪ್ರಾಥಮಿಕ ಶಾಲೆಯ ಆವರಣದಲ್ಲಿ, ತುರ್ವಿಹಾಳದ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ 5-45 ರಿಂದ 7 ಗಂಟೆ ವರೆಗೆ ಯೋಗವನ್ನು ಕಲಿಸಲಾಗುತ್ತದೆ. ಕಾರ್ಯಕ್ರಮವನ್ನು ಮಸ್ಕಿ ಬಿಜೆಪಿ ಪಕ್ಷದವತಿಯಿಂದ ಆಯೋಜಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.