e-ಸುದ್ದಿ ಮಸ್ಕಿ
ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಗೆ ಮಸ್ಕಿ ತಾಲೂಕು ಅಧ್ಯಕ್ಷರಾಗಿ ವಿಜಯ ಬಡಿಗೇರ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷ ಸಿ.ಎಚ್.ರವಿಕುಮಾರ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಜಾಕೋಬ್ ಮಸ್ಕಿ, ಶೇಟಪ್ಪ ಮಾರಲದಿನ್ನಿ, ಕಾರ್ಯದರ್ಶಿಯಾಗಿ ಶಂಕ್ರಣ್ಣ ಅಡ್ಡದಾರಿ, ಸಂಘಟನಾ ಕಾರ್ಯದರ್ಶಿಯಾಗಿ ಆಂಜನೇಯ ಖಜಾಂಚಿಯಾಗಿ ಹನುಮಂತ ಉಪ್ಪಾರ ಅವರುಗಳನ್ನು ಆಯ್ಕೆ ಮಾಡಿದ್ದಾರೆ.
ಜಿಲ್ಲಾ ಅಧ್ಯಕ್ಷ ರವಿಕುಮಾರ, ಗೌರವ ಅಧ್ಯಕ್ಷ ಮಲ್ಲನಗೌಡ ರಾಂಪೂರು, ರಾಜ್ಯ ಮುಖಂಢ ಅಮೀನ ಪಾಷ ದಿದ್ದಿಗಿ ಮಾತನಾಡಿ ಸಂಘಟನೆಯ ರೂಪರೇಷೆ ತಿಳಿಸಿದರು.