ಅಪ್ಪನಂತಾಗುವುದು
ಅಪ್ಪ ನಿನ್ನ ಅರ್ಥ
ಮಾಡಿಕೊಳ್ಳಲು ತುಂಬಾ ತಡವಾಯಿತು…!
ನಮಗಾಗಿ
ಜೀವ ತೆಯುತ್ತಿರುವೆಯಂದು
ನೀನೆಂದು ಹೇಳಲಿಲ್ಲ
ನಾವಿಗ ಅವಕಾಶ ಸಿಕ್ಕಾಗಲೆಲ್ಮ
ಮಕ್ಕಳಿಗೆ ಹಂಗಿಸುತ್ತೆವಲ್ಲ
ಅಪ್ಪಾ ನಿನ್ನಂತಾಗಲು
ನಮಗಾಗುತ್ತಿಲ್ಲ….!
ನಿತ್ಯ ದುಡಿಮೆಯ
ದಣಿವನ್ನೆಲ್ಲ ನೀ
ನಮ್ಮ ಆಟ ಪಾಠಗಳಲ್ಲಿ
ಮೆರೆಯುತ್ತಿದ್ದೆಯಲ್ಲಾ
ಮಕ್ಕಳ ಜೊತೆ ಸಮಯ
ಕಳೆಯಲು ನಮಗೆ ಈಗ
ಸಮಯವೇ ಇಲ್ಲ
ಅಪ್ಪ ನಿನ್ನಂತಾಗಲೂ
ನಮಗಾಗುತ್ತಿಲ್ಲ…..!
ನಮ್ಮ ಏಳಿಗೆ ಕಂಡು
ಮಕ್ಕಳೆ ನನ್ನ ಆಸ್ತಿ
ಎಂದು ಹೆಮ್ಮೆಯಿಂದ
ಹಿಗ್ಗುತ್ತಿದ್ದೆಯಲ್ಲಾ
ಮಕ್ಕಳಿಗೆ ಆಸ್ತಿ
ಮಾಡುವ ನೆಪದಲ್ಲಿ
ಪ್ರೀತಿ ತೋರುವುದನ್ನೆ
ಮರೆತಿದ್ದೆವೆ
ಅಪ್ಪಾ ನಿನ್ನಂತಾಗಲು
ನಮಗಾಗುತ್ತಿಲ್ಲ…..!
ನಮ್ಮ ಎಳುಬೀಳುಗಳಿಗೆ
ನೀ ಭದ್ರತೆಯ ಬಂಡಾರವಾಗಿದ್ದೆಯಲ್ಲ
ಮಕ್ಕಳ ಸೋಲುಗಳಿಗೆ ಸಾಂತ್ವನ
ಹೇಳುವ ತಾಳ್ಮೆ ನಮಗಿಲ್ಲ
ಅಪ್ಪಾ ನಿನ್ನಂತಾಗಲು
ನಮಗಾಗುತ್ತಿಲ್ಲ…..!
ನಮಗೆ ನೀ
ಸರ್ವಸ್ವವೂ ಆಗಿದ್ದೆ
ನಾವೀಗ ಬರಿ ಮಕ್ಕಳ
ಅಗತ್ಯವಾಗಿದ್ದೆವೆ
ನಮ್ಮಳೊಗೆ ಕಕ್ಕುಲತೆಯಿಲ್ಲ
ಅವರೋಳಗೆ ಅನುಭಂದ ಬೆಳೆಯುವುದಿಲ್ಲ….!
ಅಪ್ಪಾ ನಿನ್ನಂತಾಗಲು
ನಮಗಾಗುತ್ತಿಲ್ಲ…..!
ನಿನೆಂದು ನಮ್ಮನ್ನ
ದೂರಮಾಡಿಕೊಂಡವನಲ್ಲ
ಕಣ್ಣರೆಪ್ಪೆಯಾಗಿ ಕಾಪಿಟ್ಟುಕೊಂಡವನು
ಪ್ರತಿಷ್ಠೆಗೆ ಮಕ್ಕಳಿಗೆ
ವಸತಿ ಶಾಲೆ ಅಟ್ಟಿ ಕೈ ತೊಳೆದುಕೊಂಡವರು ನಾವು
ಅಪ್ಪ ನಿನ್ನಂತಾಗಲೂ ನಮಗಾಗುತ್ತಿಲ್ಲ……!
ನೀನೆನೂ ಅರಿಯದ
ಒಗಟಾಗಿರಲಿಲ್ಲ
ನೀನು ತೆರೆದಿಟ್ಟ
ಪುಸ್ತಕದ ಪರಿವಿಡಿಯು
ಓದಲಾಗಲಿಲ್ಲ…..!
ಅಪ್ಪ ನಿನ್ನಂತಾಗಲೂ ನಮಗಾಗುತ್ತಿಲ್ಲ….!
ತುಂಬಾ ತಡವಾಯಿತು
ಅಪ್ಪ ನಿನ್ನ ಅರ್ಥ
ಮಾಡಿಕೊಳ್ಳಲು…..!
–ಡಾ.ನಿರ್ಮಲಾ ಬಟ್ಟಲ