ಅಪ್ಪ
ವಿಸ್ತರಿಪ ಆಗಸದ ಭಾವ ಅಪ್ಪ
ರಸದೊಳಗಣ ರುಚಿಯ ಭಾವ ಅಪ್ಪ
ಮೋಡದೊಳಗಿನ ಮಂಜ ಹನಿ ಅಪ್ಪ
ಮರದಡಿಯ ನೆರಳ ಭಾವ ಅಪ್ಪ
ಪಕ್ವತೆಯ ಪರಿಪೂರ್ಣ ರೂಪ ಅಪ್ಪ
ದೂರದೃಷ್ಟಿಯ ವಿಚಾರರೂಪ ಅಪ್ಪ
ಸೃಷ್ಟಿಯ ಸಕಲ ಮೂರ್ತ ರೂಪ ಅಪ್ಪ
ಮಗುವಿನಾ ಶ್ರೇಷ್ಠತೆಯ ಕೀರ್ತಿರೂಪ ಅಪ್ಪ
ವಿಶ್ವ ರೂಪದ ಪ್ರತಿರೂಪ ಅಪ್ಪ
ಕನಸಿನಾಸೆಗೆ ರೆಕ್ಕೆ ರೂಪ ಅಪ್ಪ
ತನುಮನದಾಸರೆಯ ಅನುರೂಪ ಅಪ್ಪ
ಬೆಟ್ಟದಾ ಭವ್ಯತೆಯ ಪ್ರತಿರೂಪ ಅಪ್ಪ
ಎದೆಯಲಿ ಧೈರ್ಯದಾ ದಿವಿಗೆ ಇಟ್ಟ ಅಪ್ಪ
ಹೆಜ್ಜೆ ಹೆಜ್ಜೆಗೆ ಧರ್ಮಮಾರ್ಗತೋರಿದ ಅಪ್ಪ
ಯಾರ ಹಂಗು ಇರದಂತೆ ಬೆಳೆಸಿದ ಅಪ್ಪ
ಕಾಯಕದಿ ಬದುಕುವಾ ದಾರಿ ತೋರಿದ ಅಪ್ಪ.
–ಸವಿತಾ. ಮಾಟೂರ. ಇಲಕಲ್ಲ.