ಆಳಾಗಿ ದುಡಿದು ಅರಸನಾಗಿ ಬದುಕಿದ ಅಪ್ಪ

 

ಆಳಾಗಿ ದುಡಿದು ಅರಸನಾಗಿ ಬದುಕಿದ ಅಪ್ಪ

ರಾಜರ ರಾಜಾ ಬರತಾನೊ
ರವಿಯಾ ತೇಜಿ ಬರತಾನೊ

ಜೋಡು ಗುಂಡಿಗೆಯಾ ಎದೆಗಾರ
ಗಂಡರ ಗಂಡ ಗುರಿಕಾರ

ಸಾವಿರ ಮಂದಿಗು ಬಗ್ಗದಾತ
ಸಾವೆದುರು ಬಂದರು ಜಗ್ಗದಾತ

ದಡಿಯಾ ದೋತರ ಎಡಗೈಲಿ
ಹುರಿಮೀಸಿ ತಿರಿವ್ಯಾನ ಬಲಗೈಲಿ

ದುಷ್ಟರ ಕಂಡಾರ ಹತ್ತುಲಿ ಅವತಾರ
ನಿಷ್ಠೆಯ ಬಿಡದಂತ ಸರದಾರ

ನಡಿಯುವ ಖದರು ಹುಲಿಯಂಗ
ಮಾತಿನ ಗತ್ತು ದೊರೆಯಂಗ

ರಗುತದ ಬೆವರ ಹರಿಸಾನೊ
ಬದುಕಿಗೆ ಬೆಳಕ ತುಂಬ್ಯಾನೊ

ತುಂಬಿದ ತೆನಿಯಂತ ಗುಣದಾತ
ಕಬ್ಬಿನ ಸವಿಯಂತ ಮನದಾತ

ಬರತಾನೊ ಓ,ಬರತಾನೊ
ರಾಜರ ರಾಜ ಬರತಾನೊ

ಎಂಟೆದೆ ಬಂಟ ಬರತಾನೊ
ದಂಡಿನ ಒಡೆಯಾ ಬರತಾನೊ

ರಾಜರ ರಾಜಾ ಬರತಾನೊ
ರವಿಯಾ ತೇಜಿ ಬರತಾನೊ.

ರೇಣುಕಾ ಕೋಡಗುಂಟಿ

Don`t copy text!