ಹೀಗಿದ್ದರು ನಮ್ಮಪ್ಪ
ನಮ್ಮಪ್ಪಗ ಹೆಂಗ ಗೊತ್ತಾಕ್ಕಿತ್ತೋ ಏನೋ, ಸಾಹಿತಿಗಳು ನಮ್ಮನೆ ಖಾಯಂ ಅತಿಥಿಗಳು.
ಒಂದ ಸಾರಿ ಶಿವರಾಮ ಕಾರಂತರು ಧಾರವಾಡಕ್ಕ ಬಂದಿದ್ದರು. As usual ಸಂಜೀಕ ಮನೀಗ ಕರಕೊಂಡ ಬಂದರು. ಒಬ್ಬ ಹೆಸರಾಂತ ಸಾಹಿತಿಗಳು ಧಾರವಾಡದಾಗ M A ಮಾಡತಾ ಇದ್ದರು. ಅವರ ಹೆಸರ ಇಲ್ಲಿ ಬೇಡಾ ಅನಿಸುತ್ತೆ. ಅವರು ಕಾರಂತರನ್ನ ಸಂಜೀಮಟಾ ಹುಡಕ್ಯಾಡಿ ಸಂಜೀಕ ಕಣವೀಯವರ ಮನೀಗೆ ಹೋಗಿ ಕೇಳ್ಯಾರ ಕಾರಂತರ ಎಲ್ಲಿ ಅದಾರಂತ. Kanavi sir said very profound. This episode both Kanavi Sir & this man had said in many occasions.
ನೋಡಪಾ ಎಲ್ಲಾ ಸಾಹಿತಿಗಳಿಗೆ lodging & boarding ಅಂದ್ರ ಕಮ್ಮಾರನ ಮನೀ. ಅವರ ಮನ್ಯಾಗ ಅನ್ನಪೂರ್ಣೆ ಅದಾಳ ಮತ್ತ ಆ ಮನೀ ಸಾಹಿತಿಗಳ ಮಂದಿರ. ಅಲ್ಲಿಗೆ ಹೋಗು ಕಾರಂತರು ಸಿಗತಾರ. ಬರೊಬ್ಬರಿ ರಾತ್ರಿ ಎಂಟ ಆಗಿತ್ತೂ ಅವರು ಬಂದರು. ಕಾರಂತರನ್ನ ನೋಡಿ ಭಾಳ ಖುಶಿ ಆತ ಅವರಿಗೆ. ನಮ್ಮಪ್ಪನ & ನಮ್ಮವ್ವನ ಕಾಲ ಬಿದ್ದ ಅತ್ತ ಬಿಟ್ಟರು. ನಾ ಆವಾಗ mostly 9th ಓದತಾ ಇದ್ದೆ.
ನಮ್ಮನಿಗೆ ಬರದೇ ಇರದ ಸಾಹಿತಿಗಳು ಬಹುಶಃ ಕರ್ನಾಟಕದಾಗ ಯಾರೂ ಇಲ್ಲ.
ಅದು 1975-76 ಅನಿಸುತ್ತೆ. ನಾನು 5th standard ಇರಬೇಕು. ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ಹೊಸದಾಗಿ ಕಟ್ಟಿದ್ರು. ನೆಹರೂ ಸ್ಟೇಡಿಯಂ ಅಂತ ಹೆಸರು. ಮೊಟ್ಟ ಮೊದಲು ಅಂತ ರಣಜೀ ಪಂದ್ಯ ಆಯೋಜಿಸಲಾಗಿತ್ತು. ಜಿ. ಆರ್. ವಿಶ್ವನಾಥ ಕ್ಯಾಪ್ಟನ್. ಎದುರಾಳಿ ಯಾರು ಅನ್ನೋದು ಮರೆತು ಹೋಗಿದೆ.
ಅಪ್ಪಾ ಕ್ರಿಕೆಟ್ ನೋಡಬೇಕು ಅಂದೆ. ಅವತ್ತು ಬಹುಶಃ ಶನಿವಾರ ಅನಿಸುತ್ತೆ. ನಡೀ ಅಂತ ಸೈಕಲ್ ಮ್ಯಾಲ ಕರಕೊಂಡ ಹೊರಟರು. ಆವಾಗ ಈಗಿನ ಥರಾ ಬಸ್ ಸೌಕರ್ಯ ಅಷ್ಟಾಗಿ ಇರಲಿಲ್ಲ. ಬೆಳಿಗ್ಗೆ 7 ಘಂಟೇಕ್ಕ ಮನೀ ಬಿಟ್ಟಿವಿ. ದಾರಿ ಒಳಗ CBT ಹಂತೇಕ ಇರೋ ಜನತಾ ಹೋಟೆಲದಾಗ ದೋಸೆ ತಿಂದವಿ.
ನಮ್ಮಪ್ಪಾ ಎಂಥಾ enterprising character ಅಂದ್ರ 20 KM ಸೈಕಲ್ ಮ್ಯಾಲ ಕರಕೊಂಡ ಹೋದರು. 9:30 ಕ್ಕ ಸ್ಟೇಡಿಯಂ ಮುಟ್ಟಿದಿವಿ. ಬರೀ 2 ರೂಪಾಯಿ ಟಿಕೇಟ. ತುಗೊಂಡ ಒಳಗ ಹೋಗಿ ಕುಂತಿವಿ. ಒಂದ ಎರಡ ತಾಸ ಕುಂತ ನೋಡಿದಿವಿ. ಚುಮ್ಮರಿ ಮಿರ್ಚಿ ಭಜಿ ಒಳಗ ಬಂದಿದ್ವು. ತಿಂದಾಯ್ತು. ಆಮ್ಯಾಲ ಬ್ಯಾಸರ ಬಂತ. ಅಪ್ಪಾ ಹೋಗೂಣ ನಡಿ ಅಂದೆ. ವಾಪಸ ಬರಾಕತ್ತಿದ್ವಿ. ಬೆಟ್ಟಾ ನೋಡಿ ಅಲ್ಲೇನೈತಿ ಅಂತ ಕೇಳಿದೆ. ಅದು ನೃಪತುಂಗ ಬೆಟ್ಟ ಅನ್ನೂದ ಆಮ್ಯಾಲ ಗೊತ್ತಾತು.
ನೋಡತೀಯೇನೋ ಅಂತ ಕೇಳಿದಾ. ಹೂಂ ಅಂದೆ. ಹಂಗ ಬೆಟ್ಟಾ ಹತ್ತಿಸದಾ. ಏರ ಇದ್ದ ಕಡೆ ಇಳದ ನಡಕೊಂಡ ಹೋದವಿ. ಇನ್ನೂ ಚುಲೋ ನೆನಪೈತಿ ಅಪ್ಪಾ ಭಾಳ ತೇಕಾಕತ್ತಿದ್ದ.
ಮೇಲೆ ನಿಂತು ಎಲ್ಲಾ ತೋರಿಸಿದಾ. ಒಂದ ತಾಸ ಅಲ್ಲೇ ಓಡಾಡಿ enjoy ಮಾಡಿ ವಾಪಸ್ ಬಂದಿವಿ. ಇನ್ನೂ ನೆನಪಿನಂಗಳದಲ್ಲಿ ಹಸಿರಾಗಿದೆ. ಯಾವುದಕ್ಕೂ ಇಲ್ಲದ ಅನ್ನದ ಅಪ್ಪ, ನಮಗೆ ತನ್ನೆಲ್ಲಾ ಪ್ರಪಂಚವನ್ನು ಧಾರೆ ಎರೆದ ಅಪ್ಪ ನಮ್ಮಿಂದ ಏನೂ ಆಪೇಕ್ಷಿಸದೇ ಹೋಗಿ ಬಿಟ್ಟ.
ದೇವಸ್ಥಾನದಲ್ಲಿ ದೇವರು ಕಾಣದಿದ್ದಾಗ ಅಪ್ಪನ ಹೆಗಲ ಮೇಲೆ ಕುಳಿತು ದೇವರನ್ನು ನೋಡಿದ ನಮ್ಮ ಧಡ್ಡತನಕ್ಕೆ ಏನೆನ್ನಬೇಕು. ದೇವರ ಹೆಗಲ ಮೇಲೆ ಕುಳಿತಿದ್ದೇವೆ ಎನ್ನುವದನ್ನು ಮರೆತು ಅನ್ಯ ದೇವರನ್ನು ನೋಡುವ ಧಾವಂತಕ್ಕೆ ಹುಚ್ಚುತನಕ್ಕೆ ಇನ್ನೂ ಉತ್ತರ ಹುಡುಕುತ್ತಲಿರುವೆ.
–ವಿಜಯಕುಮಾರ ಕಮ್ಮಾರ
9741 357 132