ಎಲ್ಲರಂತಲ್ಲ ನಮ್ಮಪ್ಪ
ತನ್ನ ವಂಶದ ಹೆಮ್ಮೆಯ ವಾರಸುದಾರ
ಅಪ್ಪ ಅಮ್ಮನ ಒಲವಿನ ಸರದಾರ ||
ಒಡಹುಟ್ಟಿದವರ ಮೆಚ್ಚಿನ ಗೆಣೆಗಾರ
ಎಲ್ಲರ ಸುಖ ದುಃಖದಲ್ಲಿ ಆಗುವ ಪಾಲುದಾರ ||
ತಪ್ಪು ತಿದ್ದಿ ದಾರಿ ತೋರುವ ಸಲಹೆಗಾರ
ಪ್ರೀತಿಯ ಕಣಜ ತುಂಬಿರುವ ಸಾಹುಕಾರ||
ಕಟ್ಟಿದ ಎಲ್ಲರೊಡಗೂಡಿ ಸುಂದರ ಸಂಸಾರ
ಮನೆ ಎಂಬ ಹೊನ್ನ ದೇಗುಲದ ಹರಿಕಾರ ||
ಕುಡಿ ಮೀಸೆಯಲ್ಲಿ ಮನಸೆಳೆವ ಸೋಗಸುಗಾರ
ನಮ್ಮ ಅಮ್ಮನ ಮನ ಗೆದ್ದ ರಾಜಕುಮಾರ ||
ಮಕ್ಕಳ ಜೀವನಕ್ಕೆ ದೆಸೆ ತೋರಿದ ಗುರಿಕಾರ
ಬಣ್ಣದ ಕನಸುಗಳ ಚಿತ್ತಾರ ಬರೆದ ಚಿತ್ರಕಾರ||
ಅನ್ಯಾಯವ ನೋಡಿ ಸಿಡಿದೇಳುವ ಧೀರ
ಅನಾಥರ ಕಂಡರೆ ಮೃದು ಸುಕುಮಾರ||
ಬೇಡಿದ್ದೆಲ್ಲವನು ನೀಡುವ ಕರ್ಣನ ಅವತಾರ
ಎಲ್ಲರಂತಲ್ಲ ನನ್ನಪ್ಪ ಶುದ್ಧ ಬಂಗಾರ||
-ಪ್ರೊ ರಾಜನಂದಾ ಘಾರ್ಗಿ
ಬೆಳಗಾವಿ
Good
Good poem
Very nice