ಜನ್ಮದಾತ
ಶಿವರಾತ್ರಿಯ ಹಗಲುಗಳು
ಮುಗ್ಧ ನಗೆಯಲಿ ಕಳೆದು
ಮಕ್ಕಳಿಗೆ ಅಮೃತವನುಣಿಸಿ
ಸ್ವಾಭಿಮಾನವನು ಮುಷ್ಟಿಯಲಿ ಬಿಗಿಹಿಡಿದೆ
ಕಾಯಕವೇ ಕೈಲಾಸವೆಂದು
ಶಿವಕೊಟ್ಟದಕ್ಕೆ ತೃಪ್ತಿಯಾಗಿ
ಯೌವನವನು ಒಂಟಿಯಾಗಿ ಕಳೆದು
ಮಕ್ಕಳಿಗೆ ಅಪ್ಪ ಅಮ್ಮನಾದೆ
ದಯಪಾಲಿಸಿದೆ ಶಿಸ್ತಿನ ಶಿಕ್ಷಣವ
ನೀಡಿದೆ ತುಲನಾತ್ಮಕ ಜೀವನ
ಧಾರೆಯರೆದೆ ಅಚಲ ಛಲವ
ಕರುಣಿಸಿದೆ ಅಪಾರ ತಾಳ್ಮೆಯ
ಭೋದಿಸಿದೆ ಕಾಯಕವೇ ಕೈಲಾಸ
ದಾಸೋಹವೇ ತೃಪ್ತಿಯ ಸಾಗರ
ಬಿತ್ತಿದೆ ಬಸವನ ಸಮತಾವಾದ
ಲಿಂಗಭೇದವ ಅಳಿಸಿ ನೀಡಿದೆ ಜ್ಞಾನ.
೯೫ರ ಅಜ್ಜ
ಮೊಮ್ಮಕ್ಕಳು ಮರಿಮೊಮ್ಮಕ್ಕಳಿಗೆ ಕಲಿಸಿದ್ದೇನು
ಕಿರುಕುಳಕೆ ಜಗ್ಗದೆ,ಬಿರುಗಾಳಿಗೆ ಬಗ್ಗದೆ
ಗುಡುಗು ಸಿಡಿಲಿಗೆ ಅಂಜದೆ ಜಗ ಮೆಟ್ಟು
“ನಾ” ಎಂಬುದ ಮರೆತು
“ನಾವು”ಎಂಬ ಭಾವದಿ ಬಾಳಿರೆಂದು
ಓ ಜನ್ಮದಾತ
ನಿನ್ನ ನೆನಹುದೇ ದಿವ್ಯ ಚೇತನಾ
ರಕ್ಷಣೆ ಯಾಗಲಿ ಸದಾ ನಿನ್ನ ಆಶೀರ್ವಾದ
–ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ
ವಿಜಯಪುರ.೫೮೬೧೦೯
ಮೊ.೮೪೦೮೮೫೪೧೦೮
ಮೊ.೯೯೦೦೪೯೩೩೨೭