ಸಾಹುಕಾರ

ಸಾಹುಕಾರ

ಸರಳ ಸಹಜ ನಿರಾಡಂಬರದ ಮೂರ್ತ ರೂಪ
ಮಕ್ಕಳು ಮೊಮ್ಮಕ್ಕಳ ಪ್ರೀತಿಯ ಪ್ರತಿ ರೂಪ

ಅಚ್ಚುಕಟ್ಟು ಶಿಸ್ತು ಮೈಗೂಡಿಸಿದ ಧೀರ
ಧೈರ್ಯ ಆತ್ಮಸ್ಥೈರ್ಯ ಕಲಿಸಿದ ವೀರ

ನಮ್ಮ ಜೀವನಕೆ ಮಾರ್ಗ ತೋರುವ ಆದರ್ಶ ಶಿಕ್ಷಕ
ಭೂತಾಯಿಯ ಒಡಲಲ್ಲಿ ದುಡಿಯುವದೇ ಕಾಯಕ

ದಿಟ್ಟ ನೇರ ನಡೆ ನುಡಿಯ ಕಲೆಗಾರ,
ಸಾಧಿಸಿ ತೋರುವ ಸ್ಪೂರ್ತಿಯ ಛಲಗಾರ

ನ್ಯಾಯ ನೀತಿಗೆ ನಿಷ್ಠುರ ಸಲಹೆಗಾರ
ಅಮರವಾಡಗಿಯ ಅರಳಿ ಸಾಹುಕಾರ

ದಣಿವರಿಯದ ಧಣಿ
ನಮ್ಮ ಭಾಗ್ಯದ ಖಣಿ

ನಿಮ್ಮ ಪಡೆದ ನಾವು ಧನ್ಯ
ಅಪ್ಪ,
ತಮ್ಮ ಜನುಮ ದಿನಕೆ
ನನ್ನ ತೊದಲು ನುಡಿ ಕವನ.

-ಸುನೀತಾ ಅಂಗಡಿ ಇಲಕಲ್ಲ

 

One thought on “ಸಾಹುಕಾರ

Comments are closed.

Don`t copy text!