ಅಪ್ಪನ ಪ್ರೀತಿಗಿಂತ ಹೆಚ್ಚು ಏನಿದೆ
ಹೌದು ಅಪ್ಪ ಅಂದ್ರ ಹಾಗೇನೆ. ಅದ್ಭುತ ಅನುಭವ ನೀಡುವ ಮಹಾನ ಶಕ್ತಿ. ಪ್ರತಿಯೊಂದು ಹಂತದಲ್ಲೂ ಮಗಳ ಮೇಲೆ ಪರಿಣಾಮ ಬೀರುವ ವ್ಯಕ್ತಿ. ಅವನು ಮಕ್ಕಳ ಲಾಲನೆ ಪೋಷಣೆಯ ಪ್ರೀತಿಯ ಸಂಕೇತ ಎಂದೇ ಹೇಳಬೇಕು. ಮಗಳು ಅತ್ತರೆ ಅವಳಿಗಿಂತ ಅಪ್ಪ ನೋವು ಅನುಭವಿಸುತ್ತಾರೆ..ನೋವಂಡರು ಹೊರ ಜಗತ್ತಿಗೆ ಗೊತ್ತಿಲ್ಲದ ಹಾಗೆ ಇರುವವರು ಅಪ್ಪ. ತಾಯಿ ತನ್ನ ಮಡಿಲಲ್ಲಿ 9 ತಿಂಗಳ ಕಾಲ ಹೊತ್ತು ಹೆತ್ತರೆ, ತಂದೆ ತನ್ನ ಮಗುವನ್ನು ಎತ್ತಿಕೊಂಡು ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸಿ ಬಿಡುವರು.
ಯೋಚನೆ ಯೋಜನೆ ಮಗುವಿನ ಬೆಳವಣಿಗೆ ಎಲ್ಲವೂ ತನ್ನ ಮನದಲ್ಲೇ ರೂಪಿಸುವ ಮಹಾನ್ ಚೇತನ ಅಪ್ಪ. ಆಕಾಶದ ಹಾಗೆ ನೋಡಿದರೆ ಸಾಕು ವಿಶಾಲ ಹೃದಯದ ಅಪ್ಪ ಕೆಲವು ಸಲ ಆಲದ ಮರದ ಹಾಗೆ ಕಂಡಿದ್ದು ಸತ್ಯ ಸಂಗತಿ.
ತಾಯಿಯ ಪ್ರೀತಿಯ ಜೊತೆಗೆ ಅಪ್ಪ ಶಿಸ್ತುಬದ್ಧತೆ ಜೀವನ ಶೈಲಿ ಕಲಿತರೆ ಅದೇ ಬದುಕಿನ ನೂರಾರು ವರ್ಷಗಳ ಕಾಲ ಪಾಠವಾಗುತ್ತದೆ .
ತಾಯಿ ಜೊತೆಗೆ ಸಲುಗೆ ಇದ್ರೂ ಅಪ್ಪನ ಮೇಲೆ ಪ್ರೀತಿಯ ಜೊತೆಗೆ ಗೌರವ ಭಕುತಿ ಇರುತ್ತದೆ. ಉಸಿರು ಹಾಗೂ ಹೆಸರು ಕೊಟ್ಟು ಜೊತೆಗೆ ಭವಿಷ್ಯದ ದೃಷ್ಟಿಯಿಂದ ನೋಡಿದರೆ ಸಾಕು ವೈಶಿಷ್ಟ್ಯತೆ ತನ್ನ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕೃತಿಯ ಜೊತೆಗೆ ಗಟ್ಟಿಯಾಗಿ ಹಿಡಿದು ನಿಲ್ಲುವ ಕೃಪೆ ಅಭಯ ಹಸ್ತ ಅಂದ್ರೆ ಅದು ಅಪ್ಪ. ಅಂತಃಕರಣದ ನೋಟ ಸೂಕ್ಮ ಮನೋಭಾವ ಎಲ್ಲವು ಅದ್ಭುತ.
–ಕವಿತಾ ಮಳಗಿ, ಕಲಬುರ್ಗಿ