ಅಪ್ಪ.
ಅಪ್ಪನೆಂದರೆ ಅವ್ವನಾಗಿ ನಿಂತಿರುವ
ನವಮಾಸ ಹೊತ್ತು ನೋವನ್ನುಣ್ಣದೆ ಇರಬಹುದು
ಹೆಗಲ ಮೇಲೆ ಕಷ್ಟದ ಭಾರವನೆತ್ತಿಕೊಂಡು
ಎದೆಯ ಮೇಲೆ ನನ್ನ ಒರಗಿಸಿಕೊಂಡು
ನೋವನ್ನೆಲ್ಲ ಮರೆವ ಮುದ್ದು ಅಪ್ಪ
ದೈವರೂಪದ ಸ್ವರೂಪಿ
ಕಣ್ಣಿಗೆ ಕಾಣುವ ದೇವನೆನೋ ಇವನು
ಎಲ್ಲವು ಬೇಡಿದಾಕ್ಷಣ ವರವಾಗಿ ಕೊಡುವನು
ಹೂವಿನಂತೆ ಮುಗ್ದವಾಗಿ ಸಾಕಿ
ಮುಳ್ಳು ಕಂಡೊಡನೆ ಓಡೋಡಿ ಬರುವ
ಪಾದಕೆಳಗೆ ಮುಳ್ಳು ಚುಚ್ಚದಂತೆ ತನ್ನ ಅಂಗೈಯಲಿ
ಮಗಳ ಪಾದವನು ಇರಿಸುವ
ಇವನೆ ಇರಬಹುದೇನೊ ಎಲ್ಲದಕೂ ಮಿಗಿಲಾಗಿ
ಅಪ್ಪ ಮಗಳೆಂದರೆ ಹಾಲು ಸಕ್ಕರೆ
ಅಪ್ಪನಿಗೆ ಮಗಳು ತಾಯಿಯಾಗಿ
ಮಗಳಿಗೆ ಅಪ್ಪನು ಅವ್ವನಾಗಿ
ಒಬ್ಬರನ್ನೊಬ್ಬರುನು ನೋಡಿದರೆ ಅತ್ಯದ್ಭುತವೇ ಸರಿ
–ಶ್ರೀಮತಿ ಉಮಾಸೂಗೂರೇಶ ಹಿರೇಮಠ