ನಾನೆಂದೂ ನೋಡದ ನನ್ನ ಪ್ಪ…

ನಾನೆಂದೂ ನೋಡದ ನನ್ನ ಪ್ಪ…

ಇಂದು ವಿಶ್ವ- ಅಪ್ಪಂದಿರ ದಿನ .ಅಪ್ಪನ ಬಗ್ಗೆ ಏನು ಬರೆಯಲಿ..? ನವಮಾಸಗಳವರೆಗೆ ನನ್ನ ಬರುವಿಕೆಗೆ ಕಾದು, ನಾ ಭೂಮಿಗೆ ಬಂದ ದಿನ ಸಂತಸಪಟ್ಟು, ತನ್ನೆದೆಯ ಮೇಲಿರಿಸಿಕೊಂಡು ನಕ್ಕ ನನ್ನಪ್ಪ, ತನ್ನ ಕೆಲಸ ಮುಗಿಯಿತೆಂದು ಎರಡು ಮಾಸಗಳಲ್ಲಿ ಆಕಾಶದಲ್ಲಿ ಲೀನವಾದ. ನನ್ನನ್ನು ಕಣ್ತುಂಬ ನೋಡಿದ ನಮ್ಮಪ್ಪನನ್ನು ನಾನೆಂದೂ ನೋಡಲಿಲ್ಲ. ಅವನ ಪ್ರತಿರೂಪ- ಪ್ರತಿನಿಧಿಯಾಗಿ, ಅವನ ಸದಾಶಯಗಳನ್ನು ಪೂರ್ಣವಾಗಿಸುತ್ತ, ಅವನ ಹೆಸರು ಮರೆಯಾಗದಂತೆ ನಾನಿದ್ದೇನೆ ಇಂದು. ನನ್ನ ಮೈ- ಮನಗಳಲ್ಲಿ ತುಂಬಿಕೊಂಡಿರುವ ಅಗೋಚರ ಶಕ್ತಿ ನನ್ನಪ್ಪ…ಅವನಿಗೊಂದು ಸಲಾಂ.

-🙏ಹಮೀದಾ ಬೇಗಂ ಸಂಕೇಶ್ವರ

Don`t copy text!