ಯೋಗ
ದೇಹ ಮನಸುಗಳ
ಹದಗೊಳಿಸುವ
ಆತ್ಮವನು ಪರಮಾತ್ಮನಲಿ
ವಿಲೀನಗೊಳಿಸಿ
ಪರಮಾನಂದವ
ಪಡೆಯುವ ಸಾಧನಾ…!
ದೇಹ ಮನಸುಗಳ
ಕಲ್ಮಶವ ಹೋರಹಾಕಿ
ಆತ್ಮ ಚೇತನವನೆಚ್ಚರಿಸಿ
ಆತ್ಮಬಲವ ಗಟ್ಟಿಗೋಳಿಸಿ
ಆತ್ಮ ಜ್ಞಾನದ ಬೆಳಕಲ್ಲಿ
ಜಗದ ಸೌಂದರ್ಯವನು
ತೋರುವ ಸಾಧನ…..!
ದೇಹವನು ಮಣಿಸುವ
ಕಸರತ್ತಲ್ಲ ಯೋಗ
ನಿತ್ಯ ‘ಕಾಯ’, ‘ಚಿತ್ತ’ದಲಿ
ವೃತಾಚರಣೆ ಯೋಗಿಯಾಗಲು
ದೀಪವಿ ಅಷ್ಟಾಂಗಮಾರ್ಗ ಸಾಧನೆ…..!
ಯೋಗ ,ಜೀವನದ ಶಿಸ್ತಾಗಲಿ
ಸ್ವಾಸ್ಥ್ಯ ಬದುಕಿಗೆ ಮದ್ದಾಗಲಿ
ರಾಜಕಳೆ ಮುಖದಲಿ ಹೊಳೆಯಲಿ
ಸಕಲ ಭವರೋಗಳೆಲ್ಲ ದೂರ ಸರಿಸಲು ಯೋಗವೆ
ಅಸ್ತ್ರ ವಾಗಲಿ….!
–ಡಾ. ನಿರ್ಮಲಾ ಬಟ್ಟಲ