ಯೋಗ ಭಾರತೀಯರ ಜೀವನ ಶೈಲಿ-ಪ್ರತಾಪಗೌಡ ಪಾಟೀಲ

ಯೋಗ ಭಾರತೀಯರ ಜೀವನ ಶೈಲಿ-ಪ್ರತಾಪಗೌಡ ಪಾಟೀಲ

e-ಸುದ್ದಿ, ಮಸ್ಕಿ

ಇಂದು ಮಸ್ಕಿಯಲ್ಲಿ ಭಾರತೀಯ ಜನತಾ ಪಾರ್ಟಿ ಮಸ್ಕಿ ಮಂಡಲ ವತಿಯಿಂದ 7ನೇ ವರ್ಷದ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಯೋಗಗುರು ಆನಂದ್ ಪತ್ತರ ಜೀ ಯೋಗಾಸನದ ಮಾಡಿಸಿ ಆರೋಗ್ಯದ ಕಾಳಜಿ ಕುರಿತು ಮಾತನಾಡಿದರು.

ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ ಕರೊನಾ ಸಂಕಷ್ಟ ಕಾಲದಲ್ಲಿ ಎಲ್ಲರೂ ಜೀವ ಭಯದಿಂದ ಬದುಕು ಪರಿಸ್ಥಿತಿ ಬಂದಿದೆ. ಪ್ರತಿಯೊಬ್ಬರು ಭಯ ಪಡದೆ ಯೋಗಾಸನ, ಮಿತವಾದ ಪೌಷ್ಟಿಕ ಆಹಾರ ಸೇವನೆಯಿಂದ ಜೀವನ ನಿರ್ವಹಣೆ ಮಾಡಲು ತಿಳಿಸಿದರು.

ಪುರಾತನ ಕಾಲದಿಂದಲೂ ಭಾರತೀಯ ಪರಂಪರೆಯಲ್ಲಿ ಬೆರೆತು, ಬೆಳೆದ ಯೋಗ, ಜೀವನದ ಭಾಗವಾಗಿದ್ದ ಆರೋಗ್ಯ ಕಲೆ. ಇದು ಜಗತ್ತಿಗೆ ಭಾರತದ ಕೊಡುಗೆ. ದೇಹ ಮತ್ತು ಪ್ರಜ್ಞೆಯನ್ನೊಂದುಗೂಡಿಸಿ ಸದೃಢ ಆರೋಗ್ಯ ನೀಡುವ ಯೋಗವನ್ನು ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿಯವರು ಇಡೀ ವಿಶ್ವಕ್ಕೆ ಪರಿಚಯ ಮಾಡಿಸಿಕೊಟ್ಟರು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು, ಸಾರ್ಥಕ ಜೀವನವನ್ನು ನಡೆಸೋಣ ಎಂದರು.

ರಾಮಕೃಷ್ಣ ಆಶ್ರಮದ ಸಿದ್ದು ಜೀ  ಸುಖಮುನಿಯಪ್ಪ ನಾಯಕ ಪ್ರಕಾಶ ಧಾರಿವಾಲ್ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ಹಾಗೂ ವಿಶ್ವ ಯೋಗ ದಿನಾಚರಣೆ ಆಚರಿಸಲು ಬಂದಿರುವ ಊರಿನ ಪ್ರಮುಖರು ಉಪಸ್ಥಿತಿ ಇದ್ದರು.

Don`t copy text!