(ಮಕ್ಕಳ ಗೀತೆ)
ಮಳೆಗಾಲದಲ್ಲಿ ಪುಟ್ಟ
ಮಳೆಗಾಲ ಮತ್ತೆ ಬಂದಿತು
ಹರುಷವ ನಿತ್ಯ ತಂದಿತು
ಕೊಳೆಯಲ್ಲ ಓಡಿತು
ಇಳೆಗೆ ತಂಪನು ತಂದಿತು
ಕೊಡೆಯೊಂದು ಹಿಡಿದು
ಬೀದಿಯಲ್ಲಿ ನಡೆಯುವೆ
ರಸ್ತೆಗುಂಟ ಜಲದುಂಬಿ
ಗಟಾರು ತುಂಬಿ ಹರಿದಿದೆ
ಬೆಟ್ಟ ಗುಡ್ಡ ಹಸಿರಾಗಿ
ಝರಿ ಹರಿವು ಜೋರಾಗಿ
ಇಳಿದು ಬಂದಿತು ಕೆಳಗೆ
ಹರಿದು ಸೇರಿತು ನದಿಗೆ
ಬೆಟ್ಟದಿಂದ ಧುಮುಕಿದ
ಜಲಪಾತ ಮೋಡಿ ಮಾಡಿದೆ
ಬೆಳ್ಳಿ ನೊರೆಯ ಚೆಲ್ಲುತ
ಎಲ್ಲರ ಗಮನ ಸೆಳೆದಿದೆ
ಸಣ್ಣ ಹಳ್ಳದಲ್ಲಿ ಅಡುತ
ಕಾಗದ ದೋಣಿ ಬಿಟ್ಟೆನು
ಹಿಡಿಯಲು ಹೋದೆನಾಗ
ಜಾರಿ ಬಿದ್ದು ಬಿಟ್ಟೆನು
ಶಾಲೆಯೊಂದು ದೂರು
ನಡುವೆ ಹಳ್ಳ ಜೋರು
ಅಪ್ಪ ಬರುಲು ದಿನವೂ
ಶಾಲೆಗೆ ನಿತ್ಯ ಹಾಜರು
– ಈಶ್ವರ ಮಮದಾಪೂರ