ಹುಕ್ಕೇರಿ ತಾಲೂಕಿನಲ್ಲಿ ಉಕ್ಕೇರಿದ ಮುಂಗಾರು ಮಳೆ ರಾಜ್ಯ ಮಟ್ಟದ ಕಾವ್ಯಧಾರೆ ‘

ಹುಕ್ಕೇರಿ ತಾಲೂಕಿನಲ್ಲಿ ಉಕ್ಕೇರಿದ ಮುಂಗಾರು ಮಳೆ ರಾಜ್ಯ ಮಟ್ಟದ ಕಾವ್ಯಧಾರೆ ‘

e-ಸುದ್ದಿ, ಹುಕ್ಕೇರಿ

ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ(ರಿ) ಬೆಳಗಾವಿ ಜಿಲ್ಲಾ ಘಟಕದ ಸಹಯೋಗದಲ್ಲಿ ಮೊದಲ ಬಾರಿಗೆ ಹುಕ್ಕೇರಿಯ ತಾಲೂಕು ಘಟಕವು ‘ ಸಂಸ್ಕೃತಿ ಮತ್ತು ಕೃಷಿ ಮಾಸದ’ ವಿಶೇಷತೆಯುಳ್ಳ ರಾಜ್ಯ ಮಟ್ಟದ ‘ ಮುಂಗಾರು ಮಳೆ ‘ ಶೀರ್ಷಿಕೆಯ ಸ್ವ ರಚನೆ ಕವನ ವಾಚನ ಸ್ಪರ್ಧೆಯನ್ನು ದಿನಾಂಕ 20:06:2021ರ ರವಿವಾರ ಸಂಜೆ 3:30 ರಿಂದ 7: 30 ರವರೆಗೆ ಹಮ್ಮಿಕೊಳ್ಳಲಾಗಿತ್ತು. ಹುಕ್ಕೇರಿ ತಾಲೂಕು ಘಟಕದ ಗೌರವಾಧ್ಯಕ್ಷರಾದ ಶ್ರೀಪಾದ ಕುಂಬಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ


“ಎರಡು ಸಾವಿರ ವರ್ಷಗಳ ಇತಿಹಾಸ ಕನ್ನಡ ಸಾಹಿತ್ಯಕ್ಕೆ ಇದೆ. ಗದ್ಯ ಪದ್ಯ ಗಳ ಪ್ರಕಾರದಲ್ಲಿ ಇಂದು ವಿಶಾಲವಾಗಿ ಬೆಳೆದು ನಿಂತ ಈ ಭಾಷೆ ಹಲವು ವೈವಿಧ್ಯತೆಯ ಪ್ರಕಾರಗಳ ಕೊಂಬೆಗಳಿಂದ ಹೆಮ್ಮರವಾಗಿದೆ. ಅದರಲ್ಲೂ ಕಾವ್ಯ ಪ್ರಕಾರದಲ್ಲಿ ಇಂದು ‘ ಆಡು ಮುಟ್ಟದ ಸೊಪ್ಪಿಲ್ಲ ಕಾವ್ಯ ಪ್ರಕಾರದಲ್ಲಿ ಬರೆಯದ ವಿಷಯ ವಸ್ತುವಿಲ್ಲ , ಕಾವ್ಯ ರಚನೆಯ ಒಂದು ನಾಣ್ಯದ ಎರಡು ಮುಖವೆಂದರೆ ದರ್ಶನ ಮತ್ತು ವರ್ಣ. ಇದರ ಮೂಲಕ ಹೃದಯದ ಶಕ್ತಿಯಿಂದ ಕಾವ್ಯಾಮೃತ ಮೂಡಿ ಬರುತ್ತದೆ. ಈ ಹೃದಯದ ಕಣ್ಣು ತೆರೆದರೆ, ಕವನದ ಮೂಲಕ ವಿಶ್ವದ ಕಣ್ಣು ತೆರೆಯುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯು ಕಾವ್ಯ ಪ್ರಕಾರದಿಂದ ಸಮೃದ್ಧವಾಗಿ ಬೆಳೆದಿದೆ. ಇದರ ತಳಹದಿಯ ಕಾರ್ಯಕ್ರಮ ಬೆಳಗಾವಿ ಜಿಲ್ಲಾಯ ತಾಲೂಕು ಘಟಕದ ಪ್ರತಿಮಾಸದ ಸಂಸ್ಕೃತಿ ಮತ್ತು ಕೃಷಿ ಆಧಾರಿತ ಮುಂಗಾರು ಮಳೆಯ ಸ್ವ ರಚನೆ ಹಾಗೂ ಕವನ ವಾಚನ ರಾಜ್ಯ ಮಟ್ಟದ ಕವನ ಸ್ಪರ್ಧೆ. ಇದು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಯ ಮತ್ತೊಂದು ಸಾಹಿತ್ಯ ಕೃಷಿಯ ಮೈಲುಗಲ್ಲು” ಎಂದು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯಲ್ಲಿ ಉಣ ಬಡಿಸಿದರು.
ಈ ಸುಂದರ ಸೃಷ್ಟಿಯ ನಿರ್ಮಾತೃ ಬ್ರಹ್ಮ, ಆದರೆ ಈ ನಾಡಿನ ಭಾಷೆಯ ಏಳಿಗೆ ಹಾಗು ನಾಡಿನ ಏಳು ಬೀಳುಗಳ , ಸೌಂದರ್ಯ ಸಡಗರ ಸುವಿಸ್ತಾರದ ಒಡಲಿನ ಅದಮ್ಯ ಚೇತನವೇ ಕವಿಯೆಂಬ ನೂತನ ಬ್ರಹ್ಮ. ಕವಿ ಸೃಷ್ಟಿಯ ಪ್ರತಿರೂಪ . ಅಂತೆಯೇ ಈ ಸಿದ್ದೇಶ್ವರ ಸಾಹಿತ್ಯ ವೇದಿಕೆಯು ಇಂತಹ ಕವಿ ಬ್ರಹ್ಮರ ಸಮ್ಮಿಲನಗಳಿಂದ ಕೂಡಿದ ವೇದಿಕೆಯಾಗಿ ಬೆಳೆಯುತ್ತಿರುವ ಮೊಳಕೆಯ ಸಿರಿಯಾಗಿದೆ. ‘ ‘ಅವಶ್ಯಕತೆಯೆ ಅನ್ವೇಷಣೆಯ ತಾಯಿ’ ಎಂಬಂತೆ ಅನೇಕ ಉದಯೋನ್ಮಕ ಕವಿಗಳ ಅವಶ್ಯಕತೆಯ ಅನ್ವೇಷಣೆಯ ತಾಯಿಯಾಗಿ ಸಮಾನ ಮನಸ್ಕರಿಂದ ಕ್ರಿಯಾಶೀಲತೆಯಿಂದ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪಸರಿಸುತ್ತಿದೆ ಎಂದು ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷರು, ಖ್ಯಾತ ಅಂಕಣಕಾರರು,ಗಜಲ್ ಮತ್ತು ಕವನಗಳ ಕವಯತ್ರಿ, ಶ್ರೀಮತಿ ಗಿರಿಜಾ ಮಾಲಿ ಪಾಟೀಲ ರವರು ತಮ್ಮ ಅತಿಥಿ ನುಡಿಗಳಲ್ಲಿ ತಿಳಿಸಿದರು.
ಇಂದಿನ ದಿನಗಳಲ್ಲಿ ತಂತ್ರಜ್ಞಾನ ವಿಜ್ಞಾನ ಬರದಿಂದ ಬೆಳೆಯಿತ್ತಿದೆ ಅದರೊಟ್ಟಿಗೆ ಸಾಹಿತ್ಯವು ಬೆಳೆಯುವಂತಾಗ ಬೇಕು. ಜ್ಯೋತಿಯಿಂದ
ಜ್ಯೋತಿಗಳನ್ನು ಬೆಳಗುವಂತೆ, ಸಾಹಿತ್ಯವೆಂಬ ಜ್ಯೋತಿಯನ್ನು ಹೊತ್ತಿಸಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಶ್ರೀಮಂತಿಕೆಯನ್ನು ರಾಜ್ಯದ ವ್ಯಾಪಿ ಸಾಹಿತ್ಯ ಕೃಷಿಯನ್ನು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಮಾಡುತ್ತಿದೆ . ಅಲ್ಲದೆ ಸಾಹಿತ್ಯದ ಅರಿವು ಮೂಡಿಸುತ್ತಾ, ಪ್ರತಿ ಮಾಸದಲ್ಲಿ ವಾರಕ್ಕೆ ಎರಡು ಮೂರು ಕಾರ್ಯಕ್ರಮಗಳನ್ನು ಆನ್ಲೈನ್ ಮೂಲಕ ಯಶಸ್ವಿಯಾಗಿ ನಡೆಸುತ್ತಾ ಬಹಳ ಕಡಿಮೆ ಸಮಯದಲ್ಲಿ ಮುಂದುವರಿಯುತ್ತಿದೆ. ಜ್ಞಾನವು ಮತ್ತೊಂದು ಜ್ಞಾನವನ್ನು ಬೆಳಗುವಂತೆಯಾದರೆ ಮಾತ್ರ ಸಾರ್ಥಕತೆ ಸಾಧ್ಯ . ಈ ಜ್ಞಾನದ ಸಾರ್ಥಕತೆಯನ್ನು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಬೆಳಗಾವಿಯ ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ವಿಜೇತೆ, ಶ್ರೀಮತಿ ಹಮೀದ ಬೇಗಂ ಅವರು ತಮ್ಮ ಅತಿಥಿ ನುಡಿಯಲ್ಲಿ ತಿಳಿಸಿದರು.

ಮುತ್ತು ಕಳೆದುಕೊಂಡ ಚಿಪ್ಪಿನಂತಾಗ ಬೇಡ
ರಸವಿರದ ಕಬ್ಬಿನ ಸಿಪ್ಪೆಯಂತಾಗ ಬೇಡ
ಜೀವ ಕಳೆದು ಹೋದ ದೇಹದಂತಾಗ ಬೇಡ
ಅನುಭವದ ಮುತ್ತಿನ ಗುರು ಕರುಣೆಯಲ್ಲಿದೆ ಜೀವನದ ಸುಸಾರ ಇದುವೆ ಈ ನಿಮ್ಮ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಹುಕ್ಕೇರಿ ತಾಲೂಕು ಘಟಕದ ಸಾಹಿತ್ಯ ರಥದ ಮಹತ್ವ ವಿಚಾರ, ಆ ನಿಟ್ಟಿನಲ್ಲಿ ಈ ವೇದಿಕೆಯು ಅನೇಕ ಸಾಹಿತ್ಯ ದಿಗ್ಗಜರಿಂದ ಕೂಡಿ ಸಾಹಿತ್ಯ ಕೃಷಿಯನ್ನು ನಡೆಸುತ್ತಾ ಬಂದಿದೆ. ಮುಂದಿನ ದಿನಗಳಲ್ಲೂ ಇನ್ನು ಹೆಚ್ಚಿನ ಶ್ಲಾಘನೀಯ ಕೆಲಸ ಮಾಡುವ ಪಣದೊಂದಿಗೆ ಮುಂದುವರಿಯುತ್ತಿದೆ ಎಂದು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಕುಂಬಾರ್ ಅವರು ಅಧ್ಯಕ್ಷರ ನುಡಿಯಲ್ಲಿ ತಿಳಿಸಿದರು.

ಮುಂಗಾರು ಮಳೆಯ ಕಾಲ ಅರಸಿಕರನ್ನು , ರಸಿಕರನ್ನಾಗಿಸಿ ಕವಿಯಾಗಿಸುವ ಮಳೆ. ಅಲ್ಲದೆ ಕನ್ನಡ ಸಾಹಿತ್ಯದಲ್ಲಿ ಪಂಪನ ಆದಿಯಾಗಿ, ಪ್ರಸ್ತುತದವರೆಗು ಮಳೆಯನ್ನು ಕುರಿತು ರಚಿಸಿದಿರುವ ಕವಿಗಳೆಯಿಲ್ಲ, ಇಂದಿನ ಈ ಮುಂಗಾರು ಮಳೆ ಶೀರ್ಷಿಕೆಯ ಕವನ ರಚನೆ ವಾಚನ ಚರಿವಿತ ಹಾಗು ಚರಿವರ್ಣದಿಂದ ಕೂಡಿತು ಕಾರಣ ಇಲ್ಲಿ ಕಾವ್ಯವನ್ನು ಕಟ್ಟಿದ ಕವಿಮನಗಳು , ಕವಿತೆಯ ಆಯಾಮಗಳನ್ನು ತಲುಪುವಂತೆ ಸಾಧನೆಯಿತು. ಕೆಲವು ಕಡೆ ಒಂದೆರೀತಿಯ ಪದ ಬಳಕೆ ಬರುವುದಕ್ಕಿಂತ ವಿವಿಧ ಪದಗಳಿಂದ ವಿವಿಧ ಮಜುಲುಗಳಲ್ಲಿ ಮಾಡಿ ಬಂದರೆ ಮಾತ್ರ ಕವ್ಯಾದ ಒಡಲು , ಸಾರ, ಭಾವ ಮಹತ್ವ ಪೂರ್ಣವಾಗಿರುತ್ತದೆ. ಕವಿ ಮನಸ್ಸುಗಳು ಸ್ವಭಾಷೆಯ, ಇತರ ಭಾಷೆಯ ಕವಿತೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವ ತುಡಿತ ಇರಬೇಕು ಎಂದು ಕಾರ್ಯಕ್ರಮದ ನಿರ್ಣಾಯಕರು ಆದ, ಜಿಲ್ಲೆಯ ಹಿರಿಯ
ಖ್ಯಾತ ಸಾಹಿತಿಗಳಾದ, ಮೌಲ್ಯಾಧಾರಿತ ವ್ಯಕ್ತಿತ್ವಗಳಾದ, ಮೂರು ಕವನ ಸಂಕಲನ ಬರೆದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗಳನ್ನು ಪಡೆದಿರುವ ಶ್ರೀ ಮತಿ ಪ್ರೇಮ ತಾಹಸೀಲ್ದಾರ್ ಅವರು ಅರವತ್ತಕ್ಕೂ ಹೆಚ್ಚು ಕವಿಗಳ ಕವಿತೆ ರಚನೆ ವಾಚನ ಆಲಿಸಿ, ತಮ್ಮ ನಿರ್ಣಾಯಕ ನುಡಿಯಲ್ಲಿ ತಿಳಿಸಿದರು .
ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರು, ಕ್ರಿಯಾಶೀಲರು, ಉತ್ಸಾಹಿಗಳು ಶಿಸ್ತಿನ ಸಿಪಾಯಿಗಳು ಉತ್ತಮ ಸಂಘಟಕರೂ ಆದ ಶ್ರೀಮತಿ ಆಶಾ ಯಮಕನಮರಡಿಯವರು ಮಾತನಾಡಿ ತಾಲೂಕು ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲೆಂದು ಹಾರೈಸಿದರು. ಪ್ರತಿಯೊಬ್ಬರ ಸಾಹಿತ್ಯ ದಾಹವನ್ನು ತಣಿಸುವ ಇಂತಹ ಒಂದು ಸಾಹಿತ್ಯ ವೇದಿಕೆಯನ್ನು ರಾಜ್ಯ ಮಟ್ಟದಲ್ಲಿ ಹುಟ್ಟು ಹಾಕಿ , ಯಶಸ್ವಿಯಾಗಿ ಮುನ್ನಡೆಸುತ್ತಾ, ಸಾಹಿತ್ಯ ತೇರನ್ನು ನಡೆಸುತ್ತಿರುವ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅವರು ಪ್ರತಿಮಾಸದ ಸಂಸ್ಕೃತಿ ಮತ್ತು ಕೃಷಿ ಕವಿಗೋಷ್ಠಿಯನ್ನು ಹುಕ್ಕೇರಿ ತಾಲೂಕಿನಲ್ಲಿ ಆಯೋಜಿಸಲು ಅನುವು ಮಾಡಿಕೊಟ್ಟಿರುವುದು ಸಂತಸವನ್ನು ತಂದಿದೆ ಎಂದು ತಮ್ಮ ನುಡಿಯಲ್ಲಿ ತಿಳಿಸಿದರು.
ಹುಕ್ಕೇರಿ ತಾಲೂಕಿನ ಶ್ರೀ ಭಾಸ್ಕರ್ ಮಾನೆ, ಶ್ರೀಮತಿ ಲಲಿತಾ ಹಿರೇಮಠ್, ಶ್ರೀಮತಿ ಶೈಲಜಾ ಮಠಪತಿ, ಶ್ರೀಮತಿ ದೀಪಾಲಿ ಕುಂಬಾರ, ಕುಮಾರಿ ಸರಿತಾ ಪಾಟೀಲ ಇನ್ನು ಮುಂತಾದ ಕವಿ/ ಕವಯತ್ರಿಯರು ಪ್ರತಿನಿಧಿಸಿದ್ದರು. ಇದಲ್ಲದೆ ಕರ್ನಾಟಕದ ಬೆಳಗಾವಿ, ವಿಜಯಪುರ, ಚಿತ್ರದುರ್ಗ, ಮಂಡ್ಯ, ಹಾಸನ, ಮೈಸೂರು, ಬೆಂಗಳೂರು, ಕಲ್ಬುರ್ಗಿ, ಶಿವಮೊಗ್ಗ, ಹಾವೇರಿ ಮೊದಲಾದ ಜಿಲ್ಲೆಗಳ ಕವಿ / ಕವಯತ್ರಿಗಳು ಪ್ರತಿನಿಧಿಸಿ, ಸ್ವರಚಿತ ಮುಂಗಾರು ಮಳೆ ಶೀರ್ಷಿಕೆಯ ರಾಜ್ಯ ಮಟ್ಟದ ಕವನ ವಾಚನ ಮಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಶ್ರೀಮತಿ ಗೀತಾ ಬಸಲಿಂಗೋಳ ಇವರ ಅಚ್ಚುಕಟ್ಟಾದ ನಿರೂಪಣೆಯಲ್ಲಿ ಕಾರ್ಯಕ್ರಮ ನಡೆದು ಬಂದರೆ, ಶ್ರೀಮತಿ ಸಂಗೀತ ಕುಂಬಾರ ಅವರು, ಸುಮಧುರ ಕಂಠದಿಂದ ಬಸವಣ್ಣನವರ ವಚನವನ್ನು ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥನೆ ಮಾಡಿದರು. ಶ್ರೀ ಭಾಸ್ಕರ ಮಾನೆಯವರು ಕಾರ್ಯಕ್ರಮದ ಗಣ್ಯರು ಹಾಗು ಕವಿ ಮನಗಳನ್ನು ಹೃದಯ ತುಂಬಿ ಸ್ವಾಗತಿಸಿದರು. ಶ್ರೀ ಧರ್ಮರಾಜ್ ಕುಂಬಾರ್ ಅವರು ಕಾರ್ಯಕ್ರಮದ ವಂದನಾರ್ಪಣೆಯನ್ನು ನಡೆಸಿ ಕೊಟ್ಟರು. ಕೊನೆಯಲ್ಲಿ ಕಾರ್ಯಕ್ರಮ ಬಹಳ ಅಚ್ಚುಮೆಚ್ಚಾಗಿ , ಶಿಸ್ತಿನಿಂದ ಮೂಡಿ ಬಂತು ಎಂದು ಕವಿಮನಗಳ ಅನಿಸಿಕೆಯ ಸಿಹಿನುಡಿಯಲ್ಲಿ ತೇಲಿ ಬಂತು.

ಕೃಪೆ-ವಿಚಾರ ಮಂಟಪ ಸಾಹಿತ್ಯ ಜಾಲ

Don`t copy text!