ಉರಿಯುಂಡ ಕರ್ಪೂರ

ಉರಿಯುಂಡ ಕರ್ಪೂರ

ಹಸಿವಾದೊಡೆ ಭಿಕ್ಷಾನ್ನಗಳುಂಟು ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು ಶಯನಕ್ಕೆ ಹಾಳು ದೇಗುಲಗಳುಂಟು ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು
ಬಡತನವನ್ನೇ ಹಾಸಿಕೊಂಡು, ಬಡತನವನ್ನು ಹೊತ್ತುಕೊಂಡು, ಬಡತನದಲ್ಲಿಯೇ ಹುಟ್ಟಿ, ಬಡತನವೇ ಉಸಿರಾಗಿಸಿರಕೊಂಡು, *ಬಡತನಕ್ಕೆ ಬೆವರಿಳಿಸಿದ* ಮಹಾನ್ ಸಾಧಕನಾದ ಸಾಧಕನೊಬ್ಬನ ಕಿರು-ಪರಿಚಯ ಇದಾಗಿದೆ.

ಅತ್ಯಂತ ಕಡುಬಡತನದ ಮುಳಗುಂದದ ರಾಮಪ್ಪ ಅರಳಿಕಟ್ಟಿ ಹಾಗೂ ತಿಪ್ಪವ್ವ ಅರಳಿಕಟ್ಟಿ ಇವರ ಪುಣ್ಯ ಗರ್ಭದಲ್ಲಿ ಪರಶುರಾಮ ಜನಿಸಿದರು.ಇವರೇ ಇಂದಿನ ಕಥಾನಾಯಕ.-
*ಪರಶುರಾಮ.ರಾಮಪ್ಪ. ಅರಳಿಕಟ್ಟಿ. ಇವರು 9-3 -1971 ರಲ್ಲಿ ಜನ್ಮ ತಾಳಿದರು. ಪ್ರಾಥಮಿಕ ಶಿಕ್ಷಣ MKBS No–1 ಹಾಗೂ ಮಾಧ್ಯಮಿಕ ಶಿಕ್ಷಣ ಮುಳಗುಂದ SJJM Comp,Jr, Collegeನಲ್ಲಿ ಮಾಡಿದರು. ಸಂದರ್ಭದಲ್ಲಿ ಶ್ರೀಮತಿ ಶೇಡದ(ಮಠಪತಿ)ಶಿಕ್ಷಕಿ ಹೆತ್ತ ತಾಯಿಗಿಂತ ಹೆಚ್ಚು ಹಾರೈಕೆಯಿಂದ ಶಿಕ್ಷಣವನ್ನು ಕೊಟ್ಟರು ತದನಂತರ ಶ್ರೀ ಸಿಎಚ್ ಗೊಂದಿ, ಶ್ರೀ ಭದ್ರಾಪುರ ಪ್ರಾಥಮಿಕ ಶಿಕ್ಷಣದಲ್ಲಿ ಸಹಾಯ ಮಾಡಿದರೆ ಮಾಧ್ಯಮಿಕ ಶಿಕ್ಷಣದಲ್ಲಿ ಶ್ರೀ ಹುರಳಿ ಸರ್ ಹಾಗೂ ಶ್ರೀ ಜಿ.ಆರ್.ಗದಗ ಹಾಗೂ ಶಿಕ್ಷಕ ವೃಂದ ಅವರನ್ನು ಅಂಗೈಯಲ್ಲಿಟ್ಟುಕೊಂಡು ಬೆಳೆಸಿದರು. ಶಿಕ್ಷಣದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದೊಂದಿಗೆ ಪರಶುರಾಮನಿಗೆ ಬಹಳ ಕಿತ್ತು ತಿನ್ನುವ ಬಡತನ. ಆದರೂ ಶಿಕ್ಷಕರ ಸಹಾಯದಿಂದ ಅವರ ಮನೆಗೆಲಸವನ್ನು ಮಾಡಿಕೊಂಡು, ಅವರ ಮನೆಯಲ್ಲಿಯೇ ಇದ್ದು ಊಟ ಮಾಡಿ ಶಾಲೆಯನ್ನು ಮುಂದುವರಿಸಿದರು. ಪದವಿಪೂರ್ವ ಹಾಗೂ ಪದವಿ ಶಿಕ್ಷಣಕ್ಕಾಗಿ ಗದಗ ನಗರಕ್ಕೆ ಬಂದರು. ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದರು. ಆದರೆ ತಿನ್ನಲು ವಾಸ್ತವ್ಯ ಮಾಡಲು ಪರಿತಪಿಸುವಂತಾಯಿತು. ಆದರೂ ಎದೆಗುಂದಲಿಲ್ಲ.

ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು, ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು ಎನ್ನುವ ಅಕ್ಕಮಹಾದೇವಿಯ ವಚನದಂತೆ ಬದುಕಲು ನಿರ್ಧರಿಸಿದ ಬಾಲಕನಿಗೆ ದೇವರಂತೆ ಬಂದವರು ಡಾಕ್ಟರ್ ಜೋಗಳೇಕರ. ಇವರು ಮನೆಯಲ್ಲಿ ಪರಶುರಾಮನಿಗೆ ಊಟ ವಸತಿ ಹಾಗೂ ಕಾರ್ಯಾಲಯದಲ್ಲಿ ನೋಡಿಕೊಂಡು ಹೋಗುವಂತೆ ಕೆಲಸ ಹೇಳಿದರು.1985–86ರಲ್ಲಿ ತಾಯಿಯೊಂದಿಗೆ ಕೂಲಿಕೆಲಸಕ್ಕೆ ಹೋಗುತ್ತಿದ್ದರು ಅಷ್ಟೇ ಅಲ್ಲದೆ ಹಿರಿಯ ಗೆಳೆಯರೊಂದಿಗೆ ಗೋವಾಕ್ಕೆ ಕೆಲಸಕ್ಕೆ ಹೋಗುತಿದ್ದರು. ಚಿಕ್ಕ ಬಾಲಕನಾದ ಪರಶುರಾಮನಿಗೆ ಕಾಂಕ್ರೀಟ್ ಹಾಕುವ ಕೂಲಿಕಾರ್ಮಿಕರು ಕೈಯಲ್ಲಿ ಕೆಲಸ ಮಾಡುವಂತಾಯಿತು ಅಂಗಾಲು ಮತ್ತು ಅಂಗೈಗಳಲ್ಲಿ ರಂಧ್ರಗಳು ಆಗಿ ಅವುಗಳಲ್ಲಿ ಸಿಮೆಂಟು ಉಸುಕು ಇರುತ್ತಿತ್ತು. ಆತನ ಹಿರಿಯ ಗೆಳೆಯರು ಮೇಣದ ಬತ್ತಿಯನ್ನು ತೆಗೆದುಕೊಂಡು ರಂಧ್ರಗಳ ಮೇಲೆ ಹಾಕಿ ನಂತರ ಸ್ವಲ್ಪ ಸಮಯದ ನಂತರ ಮೇಣ ಗಟ್ಟಿ ಆಗುತ್ತಿತ್ತು. ತದನಂತರ ಮೇಣ ಸಹಿತ ಉಸುಕು ಸಿಮೆಂಟ್ ಹೊರತೆಗೆಯುತ್ತಿದ್ದರು ಅವರು ಕಂಡುಕೊಂಡ ಉಚಿತವಾದ ಉಪಚಾರ ವಾಗಿತ್ತು. ಬಡ ಭಾರತ ಹಲವು ಯೋಜನೆಗಳನ್ನು ಮೆಟ್ಟಿನಿಂತು ಕಠಿಣಾತಿಕಠಿಣ ಸಮಸ್ಯೆಗಳನ್ನು ಎದುರಿಸಿದರು ಗೋವಾದಿಂದ ಬಿಟ್ಟು ಓಡಿ ಬರಲಿಲ್ಲ ಕಾರಣವಾಗಿದೆ ಶಿಕ್ಷಣಕ್ಕೆ ತುಂಬುವುದು ಕುಟುಂಬಕ್ಕೆ ಆಶ್ರಯ ನೀಡುವುದಾಗಿತ್ತು.

1992ರಲ್ಲಿ BSc ಪದವಿ ಮುಗಿಸಿದ ಮೇಲೆ ಮತ್ತೆ ಗೋವಾ ಹಾಗೂ ಸ್ಥಳೀಯ ರಸ್ತೆ ಕಾಮಗಾರಿ ಒಡ್ಡು ಹಾಕುವುದು ಮುಂತಾದ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಎಂದಿಗೂ ಮನಸ್ಸಿನಲ್ಲಿ ಬಡತನ, ತಂದೆ, ತಾಯಿಗಳನ್ನು ಶಪಿಸಿದವನಲ್ಲ. ಈತನ ಕಾರ್ಯಕ್ಷಮತೆಯನ್ನು ಕಂಡು ಇವರ ಆತ್ಮೀಯ ಗುರುಗಳು ಹಾಗೂ ಆರಾಧ್ಯ ದೈವ ನಂತಿರುವ ಶ್ರೀ ಎ.ಜಿ. ಕುಲಕರ್ಣಿಯವರು ಹಾಗೂ ರಘುರಾಜ ಜಾಗೀರದಾರ. ಎಲ್ಐಸಿ ಏಜೆಂಟರನ್ನಾಗಿ ಕಾಯಕ ಪ್ರಾರಂಭಿಸಿದರು. 1993 ರಲ್ಲಿ ಸೈಕಲ್ ಮೇಲೆ ಹಳ್ಳಿಹಳ್ಳಿಗೆ ತಿರುಗಿ ಎಲ್.ಐ.ಸಿ ಮಾಡಲಾರಂಭಿಸಿದರು 1993ರಲ್ಲಿಯೇ ಕೋಟಿ ವೀರರಾಗಿ ಸಾಧನೆ ಮಾಡಿ ತೋರಿಸಿದರು. ಇಂತಹ ಅತ್ಯಂತ ಕ್ರಿಯಾಶೀಲ, ಬುದ್ಧಿವಂತ, ಚಾಣಾಕ್ಷ ಯುವಕನನ್ನು ಶ್ರೀಎ.ಜಿ. ಕುಲಕರ್ಣಿಯವರು( LICಅಭಿವೃದ್ಧಿಅಧಿಕಾರಿ) ಸಂಪೂರ್ಣ ಪ್ರೋತ್ಸಾಹ ನೀಡಿ ತಮ್ಮ ಪ್ರೀತಿ, ಜ್ಞಾನವನ್ನು ದಾನಮಾಡಿ ಅತ್ಯಂತ ಉನ್ನತಮಟ್ಟಕ್ಕೆ ಇವರನ್ನು ಮೇಲೆತ್ತಿದರು.

ಸಾದಿಸುವ ಛಲ ಇರುವವ ಹಿಮಾಲಯ ಪರ್ವತದ ತುತ್ತತುದಿಯನ್ನು ಮೆಟ್ಟಿ ನಿಲ್ಲಬಲ್ಲ ಎಂಬುದಕ್ಕೆ ಪರಶುರಾಮ್ ಅರಳಿಕಟ್ಟಿ ಜೀವಂತ ಉದಾಹರಣೆಯಾಗಿದ್ದಾರೆ. ಇವರ ಸಾಧನೆಗೆ ಪ್ರೇರಣೆಯಾಗಿ ನಿಂತವರು ಲಿಂಗೈಕ್ಯ ಶ್ರೀ ಸಿ.ಬಿ. ಬಡ್ನಿ ಶ್ರೀ ಶಿವಣ್ಣ ನೀಲಗುಂದ, ಶ್ರೀ ಬಸವರಾಜ ವಾಲಿ,ಜಿನೈಕ್ಯ ಆರ್ ಎನ್ ದೇಶಪಾಂಡೆ ಧಣಿ,ಶ್ರೀ ಎಂ.ಬಿ.ಬಡ್ನಿ.ಶ್ರೀ ಎಂ.ಡಿ.ಬಟ್ಟೂರ,ಶ್ರೀ.ಪಿ.ಎ.ವಂಟಕರ ಹಾಗೂ ಸ್ಥಳೀಯ ಗುರು ಹಿರಿಯರು ಮತ್ತು ಎಲ್ಲ ಸಂಘ ಸಂಸ್ಥೆಯ ನೌಕರರು. 1993 ರಿಂದ 2021 ರ ಸಾಲಿನವರೆಗೆ ಅಂದರೆ ಇಂದಿನ ವರೆಗೂ ಎಲ್ಐಸಿಯಲ್ಲಿ ಸತತ 28 ವರ್ಷಗಳು ಕೂಡ ಕೋಟಿವೀರಾಗಿ ಸಾಧನೆ ಮಾಡಿದ ವಿಭಾಗಮಟ್ಟದ ಏಕೈಕ ಎಲ್ಐಸಿ ಏಜೆಂಟರಾಗಿ ದ್ದಾರೆ ಇವರ ಕಾರ್ಯದಕ್ಷತೆಯನ್ನು ಕಂಡು M,D,R,T, USA (Million Doller Round Table Member) ಗೌರವಿಸಲ್ಪಟ್ಟಿದ್ದಾರೆ.

ಈ ಸಾಧನೆಯಿಂದ ಅವರನ್ನು ಅಮೇರಿಕಾ ದಲ್ಲಿ ನಡೆಯುವ ಹಲವಾರು ಸಭೆ ಸಮಾರಂಭಗಳಿಗೆ ಉತ್ತರ ಕರ್ನಾಟಕದ ಏಕೈಕ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಕಳಿಸಿಕೊಡಲಾಗಿದೆ.2005, 2006,2013,2018,2020 ದಿಲ್ಲಿ ಅಮೇರಿಕಾದ Denver,Sanfransico,California ಗಳ ಸಮಾರಂಭ ಸಮ್ಮೇಳನಗಳಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದು ಒಂದು *ಅಸಾಧಾರಣ ಸಾಧನೆ* ಸರಿ ಎಂದು ಹೇಳಬಹುದು.
ಇಷ್ಟೆಲ್ಲಾ ಸಾಧನೆ ಮಾಡಿದರೂ ಅವರಲ್ಲಿ ಕಿಂಚಿತ್ತು ಅಹಂ ಗರ್ವ ಸೊಕ್ಕು ದುಡ್ಡಿನ ದಿಮಾಕು ಕಂಡುಬರುವುದಿಲ್ಲ ಹಿಂದೆ ಕೂಲಿನಾಲಿ ಮಾಡುವಾಗ ಹೇಗಿದ್ದರೋ ಹಾಗೆ ಇಂದು ಕೂಡ ಅತ್ಯಂತ ಸರಳ, ಸಜ್ಜನಿಕೆಯ ಸಾಕಾರ ಮೂರ್ತಿ ಆಗಿದ್ದಾರೆ ಇಂದು ಕೋಟ್ಯಾಂತರ ಆಸ್ತಿಯನ್ನು ಗಳಿಸಿದ್ದರೂ ಇಂದಿಗೂ ಹಿಂದಿನದನ್ನು ಮರೆತಿಲ್ಲ.

ಸಮಾಜಕ್ಕೆ ಏನನ್ನಾದರೂ ಕೊಡಬೇಕೆಂದು ಆಸೆ ತನ್ನಿಂದ ತಾನೇ ಮೂಡಿಬಂದಿದೆ. ಸಹಾಯ ಸಹಕಾರ ನೀಡುವಲ್ಲಿಅವರ ಧರ್ಮಪತ್ನಿ ಶ್ರೀಮತಿ ಜಯಶ್ರೀ.ಪರಶುರಾಮ.ಅರಳಿಕಟ್ಟಿ ಇವರ ಉದಾರಗುಣ ದೊಡ್ಡದಾಗಿದೆ

ಸತಿಪತಿಗಳಲ್ಲಿ ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಶರಣರಿಗೆ ಎನ್ನುವ ಕಾಯಕ ದಾಸೋಹ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಪ್ರೀತಿ ವರ್ಷ ಮುಳಗುಂದ ಪಟ್ಟಣದಲ್ಲಿ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಜಾತ್ರೆಗೆ ಕಾಣಿಕೆ,ಒಂದು ದಿನದ ದಾಸೋಹ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಹಾಗೆಯೇ ಶಾಲಾ-ಕಾಲೇಜು, ಕಚೇರಿಗಳಿಗೆ ಕಾಣಿಕೆ ನೀಡುತ್ತಿದ್ದಾರೆ.

ಇಷ್ಟೆಲ್ಲಾ ಸಾಧನೆ ಹಾಗೂ ಸ್ಥಿತಿವಂತರಾಗಿದ್ದರೂ ಅವರ ಮನೋಭಾವ ಮೊದಲಿನಂತೆ ಇದೆ. ಅವರು ಇಂದಿಗೂ ಸುಖದಸುಪ್ಪತಿಗೆಯಲ್ಲಿ ಹೊರಳಾಡಿದವರಲ್ಲ. ಐಷಾರಾಮಿ ಜೀವನ ಬಯಸಿದವರಲ್ಲ. ಸುಖಕ್ಕಿಂತ ಕಷ್ಟವನ್ನು ಬಯಸುವ ಶ್ರಮಜೀವಿ ಕಾಯಕಜೀವಿ ಯಾಗಿದ್ದಾರೆ.

ಮನೆ ಮನೆ ತಪ್ಪದೇ ಕೈಯೊಡ್ಡಿ ಬೇಡುವಂತೆ ಮಾಡಯ್ಯ, ಬೇಡಿದೊಡೆ ಇಕ್ಕದಂತೆ ಮಾಡಿಯ್ಯ. ಇಕ್ಕಿದೊಡೆ ನೆಲಕ್ಕೆ ಬೀಳುವಂತೆ ಮಾಡಯ್ಯ. ನೆಲಕ್ಕೆ ಬಿದ್ದೊಡೆ ನಾನೆತ್ತಿಕೊಂಬುದಕ್ಕೆ ಮುನ್ನವೇ ಶುನಿ ಎತ್ತಿಕೊಂಬಂತೆ ಮಾಡಯ್ಯ ಚೆನ್ನಮಲ್ಲಿಕಾರ್ಜುನಯ್ಯ.

ಶ್ರೀಯುತರು ಕಳೆದ ಆರು ವರ್ಷಗಳಿಂದ ಎಲ್.ಐ.ಸಿ ಅತ್ಯುನ್ನತ ಹಾಗೂ ಗೌರವಾನ್ವಿತ ಪದವಿಯಾದ ಚೇರ್ಮನ್ಸ್ ಕ್ಲಬ್ ಸದಸ್ಯರಾಗಿದ್ದಾರೆ.
*ಸಾಧಿಸಬೇಕೆನ್ನುವ ಸಾಧಕನಿಗೆ ಬಡತನ ಎಂದೂ ಶಾಪವಲ್ಲ*

*ಭವಿಷ್ಯವು ಅಂಗೈಯಲ್ಲಿ ಇಲ್ಲ ಮುಂಗೈಯಲ್ಲಿ*

*ನಡೆದಷ್ಟು ದಾರಿ ಇದೆ ಪಡೆದಷ್ಟೂ ಭಾಗ್ಯವಿದೆ ಇದುವೇ ಜಗತ್ತು ನಮಗೆ ಕೊಡುವ ದಿವ್ಯ ಸಂದೇಶವಾಗಿದೆ*

ರವೀಂದ್ರ. ಆರ್. ಪಟ್ಟಣ.
ಮುಳಗುಂದ—–ರಾಮದುರ್ಗ
*9481931842

Don`t copy text!