ಕೊನೆಗೂ ಸೆರೆಸಿಕ್ಕ ಮಂಗ ಅರಣ್ಯಕ್ಕೆ ರವಾನೆ


e-ಸುದ್ದಿ ಮಸ್ಕಿ
ಪಟ್ಟಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ಹುಚ್ಚು ಹಿಡಿದ ಮಂಗವೊಂದು ಹತಾರು ಜನಕ್ಕೆ ಕಚ್ಚಿ ಗಾಯಗೊಳಿಸಿ ಸಾರ್ವಜನಿಕರನ್ನು ಬೆಚ್ಚಿಬಿಳಿಸಿತ್ತು. ಸಿಕ್ಕ ಸಿಕ್ಕ ಮನೆಯೊಳಗೆ ನುಗ್ಗಿ ಉಪಟಳ ನೀಡುತ್ತಿದ್ದ ಮಂಗ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದಿಂದ ಬಂದಿದ್ದ ಮಂಗ ಹಿಡಿಯುವ ತಂಡ ಬುಧವಾರ ಕಾರ್ಯಚರಣೆ ನಡೆಸಿದರು. ದೇವಿ ಗುಡಿ ಹತ್ತಿರದ ಗಿಡದಲ್ಲಿದ್ದ ಮಂಗವನ್ನು ಹಿಡಿಯಲು ಬೊನ್ ನಿರ್ಮಿಸಿ ಮಿರ್ಚಿ ಬಜಿ ಹಾಗೂ ಕಡಲೆಬೀಜ, ಬಾಳೆ ಹಣ್ಣು ಹಾಕಿ ಮಂಗವನ್ನು ಹಿಡಿಯಲಯಿತು.
ಮೂರು ನಾಲ್ಕು ದಿನದಿಂದ ರಸ್ತೆ ಮೇಲೆ ಹೋಗುವವರಿಗೆಲ್ಲ ಮಂಗ ಹಠಾತ್ ದಾಳಿ ಮಾಡಿ ಸುಮಾರು 15 ಕ್ಕೂ ಹೆಚ್ಚು ಜನರಿಗೆ ಕಡಿದು ಅವರನ್ನು ಗಾಯಗೊಳಿಸಿತ್ತು. ಇದರಿಂದಾಗಿ ಸಾರ್ವಜನಿಕರು ಅಘಾತಕ್ಕೆ ಒಳಗಾಗಿದ್ದರು.
ಅರಣ್ಯ ಇಲಾಖೆಯ ಚನ್ನಬಸವರಾಜ ಲಿಂಗಸುಗೂರು, ಉಪವಲಯ ಅರಣ್ಯಧಿಕಾರಿ ಹುಸೇನ್ ಬಾಷಾ, ಗಾರ್ಡ ಹುಲ್ಲಪ್ಪ ಇತರರು ಇದ್ದರು.

Don`t copy text!