ಸಾಧಕ ಮಹಿಳೆ ಸುಮಂಗಲಮ್ಮ

ಸಾಧಕ ಮಹಿಳೆ ಸುಮಂಗಲಮ್ಮ

೨೧ ನೇ ಶತಮಾನದಲ್ಲೂ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ಧ್ವನಿ ಮೊಳಗುತ್ತಿರುತ್ತದೆ. ಅದು ನಿಜಾ ಕೂಡ.
ಇತಿಹಾಸದ ಕಡೆ ಮುಖ ಮಾಡಿದಾಗ ನಮಗೆ ಅನೇಕ ಮಹಿಳೆಯರ ಸಾಧಕ ಚರಿತ್ರೆ ಮುಖಾಮುಖಿ ಯಾಗುತ್ತದೆ. ಅಂತಹ ಚರಿತ್ರೆಯಲ್ಲಿ ಮೊದಲ ಹೆಸರು ೧೨ ನೇ ಶತಮಾನದ ಧೀರ ಮಹಿಳೆ ಅಕ್ಕಮಹಾದೇವಿ. ವೀರವಿರಾಗಿಣಿ, ಎಲ್ಲಿಯ ಶಿವಮೊಗ್ಗ ಜಿಲ್ಲೆ, ಎಲ್ಲಿಯ ಬಸವಕಲ್ಯಾಣ, ಎಲ್ಲಿಯ ಶ್ರೀಶೈಲದ ಕದಳಿ ಇವುಗಳನ್ನು ಸಂಗಮಗೊಳಿಸಿಕೊಳ್ಳುವದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ೧೨ ನೇ ಶತಮಾನದಲ್ಲಿ ಕರ್ನಾಟಕದ ಚಿತ್ರ ಊಹಿಸಿಕೊಳ್ಳಿ. ಕಾಂಕ್ರೀಟ್ ನಗರಗಳಿರಲಿಲ್ಲ. ಬರೀ ಕಾಡು ಕಾಡು. ಎಲ್ಲಿ ನೋಡಿದಲೆಲ್ಲ ಕಾಡು. ಅದು ಬಿಟ್ಟರೆ ಬರೀ ಹಳ್ಳಿಗಳು. ಅಂತಹ ಕಾಲದಲ್ಲಿ ಅಕ್ಕಮಹಾದೇವಿ ಮನೆ ಬಿಟ್ಟು ಚನ್ನಮಲ್ಲಿಕಾರ್ಜುನನ ನಂಬಿ. ಬಸವಣ್ಣನ ಕಲ್ಯಾಣಕ್ಕೆ ಬಂದಳಲ್ಲ. ಬಂದಾಗ ಅಕ್ಕನನ್ನು ಯಾರು ರತ್ನಗಂಬಳಿ ಹಾಸಿ ಸ್ವಾಗತಿಸಲಿಲ್ಲ. ಅನುಭವ ಮಂಟಪದಲ್ಲಿ ಎಂತೆಂತೆಹ ಪರೀಕ್ಷೆ. ಅದು ಅಲ್ಲಮಪ್ರಭುಗಳಿಂದ,  ಪ್ರಭುಗಳ ಪ್ರಶ್ನೆಗಳಿಗೆ ಅಕ್ಕನ ಉತ್ತರಗಳು ನಡೆದ ಸಂವಾದ ಅದೊಂದು ಅನನ್ಯ. ಅಪ್ರತಿಮ.‌ ಮಹಿಳಾ ಸಂಕುಲ ಹೆಮ್ಮೆ ಪಡುಬಹುದಾದ. ಅಕ್ಕನ ವಾರಸುದಾರರು ನಾವು ಎಂದು ಹೇಳಿಕೊಳ್ಳಲು ಮಹಿಳೆಯರು ಹಿಂಜರಿಯಬಾರದು. ಎಂಬ ಆಶಯದಿಂದ ಮಹಿಳೆಯೊಬ್ಬರ ಜೀವನ ಕತೆಯನ್ನು ನೋಡೋಣ.

ಸುಮಂಗಲ ಅಕ್ಕ-ಸುಮಂಗಲ ಅಮ್ಮ
ರಾಜ್ಯದಲ್ಲಿ ಅತ್ಯಂತ ಮಳೆಯ ವಂಚಿತ ಜಿಲ್ಲೆ ಚಿತ್ರದುರ್ಗ. ಅದೊಂದು ಬೆಂಗಾಡು ಪ್ರದೇಶ. ನೀರಿಗಾಗಿ ಸಾಕಷ್ಟು ಪರಿತಪಿಸಿದ ಜಿಲ್ಲೆ ಚಿತ್ರದುರ್ಗ ಜಿಲ್ಲೆ. ಈ ಜಿಲ್ಲೆಯಲ್ಲಿ ಬಿ.ಜಿ.ಕೆರೆ ಎಂಬ ಸಣ್ಣ ಹಳ್ಳಿ. ಈ ಹಳ್ಳಿಯ ಕಥಾನಾಯಕಿ ನಮ್ಮ ಸುಮಂಗಲ ಅಕ್ಕ- ಸುಮಂಗಲಮ್ಮ.
ಸುಮಂಗಲಮ್ಮ ಲಿಂಗಾಯತ ಸಮಾಜದ ಮಹಿಳೆ. ಗಂಡ ವೀರಭದ್ರಪ್ಪ. ೭೦ ಎಕರೆ ಭೂಮಿ ಉಳ್ಳ ಶ್ರೀಮಂತರು. ಆ ಊರಿನಲ್ಲಿ ವೀರಭದ್ರಪ್ಪನನ್ನು ಜನ ಸಾಹುಕಾರ ಅಂತಲೇ ಕರೆಯುತ್ತಿದ್ದರು. ಹುಟ್ಟು ಶ್ರೀಮಂತರಾಗಿದ್ದರು ವೀರಭದ್ರಪ್ಪ ಮತ್ತು ಸುಮಂಗಲಮ್ಮರಲ್ಲಿ ಎಳ್ಳಷ್ಟು ಗರ್ವ ಇರಲಿಲ್ಲ. ಕೃಷಿ ಸಾಧಕರಾಗಿ ಸರಳ ಜೀವನ ನಡೆಸಿದ ನಿಜ ಶರಣರು.
ಮಹಿಳಾ ಸಂಘಟನೆ

ಲಿಂಗಾಯತ ಸಮಾಜದ ಮಹಿಳೆಯರು ಮನೆಯ ಕೆಲಸಕ್ಕೆ ಮೀಸಲು. ಸಮಾಜದಲ್ಲಿ ಹೊರಗೆ ಬಂದವರಲ್ಲ. ಕುಟುಂಬ ನಿರ್ವಹಣೆ ಮಾಡುವಲ್ಲಿ ಇತರರನ್ನು ವಾತ್ಸಲ್ಯದಿಂದ ಕಾಣುವದು ಲಿಂಗಾಯತ ಮಹಿಳೆಯರ ಸಂಸ್ಕಾರ.
ಸುಮಂಗಲಮ್ಮ ಮನೆಯಲ್ಲಿ ಉತ್ತಮ ಸಂಸ್ಕಾರ ನೀಡುತ್ತ. ಸಮಾಜಮುಖಿ ಯಾದವರು. ಮಹಿಳೆಯರನ್ನು ಸಂಘಟಿಸಿ ಅವರಲ್ಲಿ ಆತ್ಮ ಬಲ ತುಂಬಿದರು. ವಿಶೇಷವಾಗಿ ರೈತ ಮಹಿಳೆಯರನ್ನು ಸಂಘಟಿಸಿ ಉತ್ತಮ ಕೃಷಿ ಮಾಡುವದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಿ ಯಶಸ್ವಿಯಾದವರು.
ಕೃಷಿಯಲ್ಲಿ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಸುಮಂಗಲಮ್ಮ ಬರದ ನಾಡಿನ ಭಾಗೀರಥಿ  ಎಂತಲೇ ಪ್ರಸಿದ್ದರ.

ರೇಷ್ಮೆ ಸಾಕಾಣಿಕೆ ಮಾಡಿ ಅದರಿಂದ ಲಾಭಗಳಿಸಿ ಕೇಂದ್ರ ಸರ್ಕಾರದಿಂದ ಪುರಸ್ಕಾರ ಪಡೆದ ಮಹಿಳೆ. ನೀರಿನ ಅಭಾವ ನೀಗಿಸಲು ಗಟಾರದ ನೀರಿನಿಂದ ಮರು ಬಳಕೆ ಮಾಡು ಕೃಷಿ ಮಾಡಬಹುದು ಎಂದು ತೊರಿಸಿ ಸೈ ಎನಿಸಿಕೊಂಡವರು.

ಸುಮಂಗಲಮ್ಮನವರಿಗೆ ತೀರ್ಥಹಳ್ಳಿಯ ಪುರುಷೋತ್ತಮ ರಾಯರ ಮಡದಿ ಶಾಂತಕ್ಕ ಆದರ್ಶ. ಅವರ ಒಡನಾಟದಿಂದ ಭಾರತೀಯ ಕಿಸಾನ್ ಸಂಘದ ಸಂಪರ್ಕ. ಭಾರತೀಯ ಕಿಸಾನ ಸಂಘ ದೇಶಭಕ್ತಿ ಮತ್ತು ಭೂಮಿಗೆ ವಿಷ ಹಾಕದೆ ಭೂಮಿ ಉಳಿಸುವ ಸಂಘಟನೆ. ಇದರ ಮುಖಾಂತರ ಕೃಷಿಕ ಮಹಿಳೆಯರನ್ನು ಸಂಘಟಿಸಿ ಕೃಷಿ ಸಮೃದ್ದಿಗಾಗಿ ಹಗಲಿರುಳು ಶ್ರಮಿಸಿದ್ದಾರೆ.

೪೦ ವರ್ಷಗಳ ಹಿಂದೆ ಕೃಷಿ ಚಟುವಟಿಕೆಗಾಗಿ ಟ್ರ್ಯಾಕ್ಟರ್ ಬಳಸುವದನ್ನು ಕಲಿತ ಮೊಟ್ಟಮೊದಲ ಮಹಿಳೆ ಎಂಬ ಅಭಿದಾನ ಸುಮಂಗಲಮ್ಮನವರಿಗಿದೆ. ಟ್ರ್ಯಾಕ್ಟರ್ ಚಾಲನೇ ಮಾಡುವದನ್ನು ಕಲಿತು ಅದರ ಸಹಾಯದಿಂದ ಭೂಮಿ ಉಳುವ, ಬಿತ್ತನೆ ಮಾಡುವ, ಧವಸ ಧಾನ್ಯಗಳನ್ನು ಸಾಗಣೆ ಮಾಡುವದನ್ನು ಕಲಿತುಕೊಂಡಿದ್ದಳು. ಕರ್ನಾಟಕ ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಪಡೆದ ಮೊದಲ ಮಹಿಳೆ ಸಮಂಗಲಮ್ಮ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.

ಕೃಷಿ ಚಟುವಟಿಕೆಯ ಸಾಧನೆಗಾಗಿ ಸುಮಂಗಲಮ್ಮ ಉತ್ತರ ಭಾರತದ ಅನೇಕ ರಾಜ್ಯಗಳಿಗೆ ಭೇಟಿ ‌ನೀಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬಿಜಿ ಕೆರೆಯ ತಮ್ಮ ಹೊಲದಲ್ಲಿ ಕುರಿ ಸಾಕಣಿಕೆ, ಗಂಧದ ಬೆಳೆ, ವಿಶೇಷ ವಾಗಿ ಹುಣಸೆ ಮತ್ತು ನುಗ್ಗಿ ಬೆಳೆ ಬೆಳೆದು ರಾಜ್ಯದಲ್ಲಿ ಹೆಸರು ವಾಸಿಯಾಗಿದ್ದಾರೆ.

ತಮ್ಮ ಹೊಲದಲ್ಲಿದ್ದ ತೆಂಗಿನ ಮರಗಳಿಂದ ನೀರಾ ಇಳಿಸುವಾಗ ಅಬಕಾರಿ ಅಧಿಕಾರಿಗಳು ತಡೆಹೊಡ್ಡಿದ್ದಾಗ ಸಮರ್ಥವಾಗಿ ಅಧಿಕಾರಿಗಳೊಂದಿಗೆ ವಾದ ಮಾಡಿದ ದಿಟ್ಟ ಮಹಿಳೆ.
ವಸುಂಧರ ಕೃಷಿ ಫಾರ್ಮ ಹೌಸ್   ಮಾಡಿ ಆದರ್ಶ ಕೃಷಿ ಮಹಿಳೆಯಾಗಿದ್ದರು. ತಮ್ಮ ಹೊಲದಲ್ಲಿ ನಿತ್ಯವೂ ೫೦ ಜನ ದುಡಿಯುತ್ತಿದ್ದರು. ಅವರಿಗೆಲ್ಲ ಊಟ, ತಿಂಡಿ, ಚಾ ಮಾಡಿ ಸಮಯಕ್ಕೆ ಸರಿಯಾಗಿ ಪೂರೈಸಿ ಅನ್ನಪೂರ್ಣೆಯಾಗಿದ್ದರು. ಸುಮಂಗಲಮ್ಮ ನಿರ್ಗವಿಯಾಗಿದ್ದರು. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಕೃಷಿಯ ಜತೆಗೆ ಸಾಹಿತ್ಯದ ನಂಟಿತ್ತು. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಆಡಳಿತ, ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿವೆ.

೧೦ ವರ್ಷಗಳ ಹಿಂದೆ ಮಸ್ಕಿಗೆ ಆಗಮಿಸಿ ಇಲ್ಲಿನ ಕೃಷಿ ಕರಿಗೆ ಪಾಠ ಮಾಡಿದ್ದು ಇನ್ನೂ ನನ್ನ ಸ್ಮೃತಿ ಪಠಲದಲ್ಲಿ ಅಚ್ಚೊತ್ತಿದೆ.
ಕಳೆದ ಮೂರುದಿ‌ಗಳ ಹಿಂದೆ ಸುಮಂಗಲಮ್ಮ ತಮ್ಮ ೬೮ ನೇ ವಯಸ್ಸಿನಲ್ಲಿ ಹೃದಯ ಘಾತದಿಂದ ದೇಹ ತ್ಯಾಗ ಮಾಡಿದ್ದಾರೆ. ಅವರು ಪ್ರಾಪಂಚಿಕ ಜೀವನದಿಂದ ಕಣ್ಮರೆಯಾಗಿದ್ದರು ಅವರ ಸಾಧನೆ, ಅವರ ಚಟುವಟಿಕೆ ಸದಾ ನಮಗೆಲ್ಲ ಆದರ್ಶ.

-ವೀರೇಶ ಸೌದ್ರಿ ಮಸ್ಕಿ

(ಚಿತ್ರ ಕೃಪೆ- ಸಂವಾದ)

Don`t copy text!