ಮುಂಗಾರು ಮಳೆಯ-ಸವಿನೆನಪುಗಳು

 

ಮುಂಗಾರು ಮಳೆಯ-ಸವಿನೆನಪುಗಳು

ಮುಂಗಾರು ಮಳೆ ಬಂತೆಂದರೆ ಸಾಕು, ಬಿರು ಬಿಸಿಲಿನ ಹೊಡೆತಕ್ಕೆ ತತ್ತರಿಸಿದ ಪ್ರಕೃತಿ ಮದು ಮಗಳಂತೆ ಶೃಂಗಾರಗೊಂಡು ನೋಡುಗರ ಮನಸ್ಸಿಗೆ ಆಹ್ಲಾದಕರವಾಗಿರುತ್ತದೆ.ಎಲ್ಲೆಂದರಲ್ಲಿ ಹರಿಯುವ ನೀರನ್ನು ನೋಡುವುದೇ ಚೆಂದ.ಮೈದುಂಬಿ ಹರಿಯುವ ನದಿಗಳು, ಭೋರ್ಗರೆದು ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದೇ ಸೊಗಸು..

ಮಳೆ ರೈತನ ಜೀವನಾಡಿ.
ಮಳೆಯಲ್ಲಿ ನೆನೆಯುವುದು ಅವರಿಗೆ ಹೊಸತೇನೂ ಅಲ್ಲ.ಹೊಲದಲ್ಲಿ ಕೆಲಸ ಮಾಡುತ್ತಾ ಇದ್ದಾಗಲೇ ಮತ್ತೆ ಮತ್ತೆ ಮಳೆ ಬಂದರೆ ಓಡಿ ಹೋಗಿ ಮರದ ಕೆಳಗೆ ನಿಲ್ಲುತ್ತೇವೆ…

ಮದುವೆಗೆ ಮೊದಲು ಅಂದರೆ ನಾನು ಕಾಲೇಜು ಮುಗಿಸಿದ ನಂತರ ಮನೆಯಲ್ಲೇ ಇದ್ದೆ.ಮುಂಗಾರು ಮಳೆ ಶುರುವಾಗಿತ್ತು.ಅಪ್ಪ ಇಂದು ಜೋಳ ಬಿತ್ತಲು ತಿಳಿಸಿದ್ದರು.ಎಲ್ಲರೂ ಎತ್ತಿನ ಗಾಡಿಯಲ್ಲಿ ಹೊರೆಟೆವು.ಸೊಂಟಕ್ಕೆ ಮಡಿಲು ಕಟ್ಟಿ ಅದರಲ್ಲಿ ಜೋಳದ ಜೊತೆ ಗೊಬ್ಬರವನ್ನು ಬೆರೆಸಿ ಹಾಕಿಕೊಂಡು ಕೂರಿಗೆಯನ್ನು ಹಿಡಿದುಕೊಂಡು ಬಿತ್ತಲುಆರಂಭಿಸಿದೆವು.ಎಂದೂ ಬಿತ್ತಿರಿದ ನನಗೆ ತುಂಬಾ ಭಯ ಆಗ್ತಾ ಇತ್ತು.ಕೂರಿಗೆಯ ಜೊತೆ ಓಡಾಡಬೇಕಿತ್ತು,ಕಲಿಯುವ ಉತ್ಸಾಹವೂ ಇತ್ತು.ಒಂದೆರಡು ಗಂಟೆ ಆಗಿರಬಹುದು, ಸುತ್ತಲೂ ಮೋಡ ಆವರಿಸಿತು. ಪಡುಲವಣ ದಿಕ್ಕಿನಲ್ಲಿ ದೂರದಲ್ಲೇ ಮಳೆ ಗಾಳಿಯ ಸಮೇತ ಬರುತ್ತಿರುವುದು ಕಾಣಿಸುತ್ತಿದೆ.ಸೊಂಟಕ್ಕೆ ಕಟ್ಟಿರುವ ಮಡಿಲನ್ನು ಬಿಚ್ಚಿ ಓಡೋಡಿ ನೇರಲೆ ಮರದ ಕೆಳಗೆ ನಿಂತೆವು…ಗೋಣೀ ಚೀಲದ ಗೊಪ್ಪೆಗಳನ್ನು ತಲೆಯಮೇಲೆ ಹಾಕಿಕೊಂಡು ನಿಂತೆವು.ಮಳೆ ಜೋರಾಗಿ ಬಂತು.ಅರ್ಧ ಆಗಲೇ ನೆನೆದು ಬಿಟ್ಟಿದ್ದೆವು.ಛಳಿಗೆ ಮೈಯೆಲ್ಲಾ ನಡುಗುತ್ತಿತ್ತು.ಮಳೆ ನಿಲ್ಲುವ ಸೂಚನೆ ಕಾಣಲಿಲ್ಲ.ಮಳೆಯಲ್ಲೇ ನೆನೆಯುತ್ತಾ ಬರುತ್ತಿದ್ದೆವು ಜೋರಾದ ಮಳೆ ಸುರಿದು ಹಾದಿಯಲ್ಲೆಲ್ಲಾ ನೀರು ಹರಿಯುತ್ತಿತ್ತು.ನಿಧಾನವಾಗಿ ಕೆರೆಯನ್ನು ದಾಟಿ ಮನೆಗೆ ಬಂದು ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡಿ ಕಾಫಿ ಕುಡಿದು ಸುರಿಯುವ ಮಳೆಯನ್ನು ನೋಡುತ್ತಾ ಕುಳಿತೆ..

ಗೀತಾ ಜಿ ಎಸ್
ಹರಮಘಟ್ಟ, ಶಿವಮೊಗ್ಗ

Don`t copy text!