ಮಸ್ಕಿಯಲ್ಲಿ ಕೌಶಲ್ಯ ಮತ್ತು ಪ್ರಗತಿ ಕೇಂದ್ರದ ತರಬೇತಿ ಕಾರ್ಯಗಾರ


e-ಸುದ್ದಿ, ಮಸ್ಕಿ
ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನ ಆವರಣದ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ (ರಿ) ಕಲ್ಬುರ್ಗಿ ವತಿಯಿಂದ ಮತ್ತು ತಾಲೂಕಿನಲ್ಲಿ ಗ್ರಾಮ್ಸ್‍ಸಂಸ್ಥೆ ಲಿಂಗಸೂಗೂರು ಸಂಯುಕ್ತಾಶ್ರಯದಲ್ಲಿ ರಾಮಕೃಷ್ಣ ಆಶ್ರಮದಲ್ಲಿ ತಾಲೂಕಿನ ಗ್ರಾಮವಾರು ಪ್ರಗತಿ ಕೇಂದ್ರ ಹಾಗೂ ಕೌಶಲ್ಯ ಹೊಲಿಗೆ ತರಬೇತಿ ನೀಡುವ ಸಂಪನ್ಮೂಲ ಶಿಕ್ಷಕಿಯರ ಒಂದು ದಿನದ ತರಬೇತಿ ಶಿಬಿರ ಕಾರ್ಯಕ್ರಮಕ್ಕೆ ಮಸ್ಕಿ ಗಚ್ಚಿನ ಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳು ಗುರುವಾರ ಚಾಲನೆ ನೀಡಿದರು
ನಿರ್ದೇಶಕರಾದ ವೀರೇಶ್ ಇಲ್ಲೂರ್ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗ ಸರ್ವ ರೀತಿಯಲ್ಲಿ ಹಿಂದುಳಿಯಬಾರದು ಮತ್ತು ಆದಷ್ಟು ಬೇಗ ಈ ಭಾಗದಲ್ಲಿ ಬದಲಾವಣೆಯಾಗಬೇಕೆಂದು ಸರ್ಕಾರ ವಿಶೇಷ ಯೋಜನೆ ತಯಾರಿಸಿದೆ ಎಂದರು.
ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಅವರು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ (ರಿ) ಕಲ್ಬುರ್ಗಿ ಅಧ್ಯಕ್ಷರಾಗಿದ್ದು ಹತ್ತು ಹಲವು ಯೋಜನೆ ರೂಪಿಸಲಾಗಿದೆ. ಮುಂದಿನ ಮೂರು ವರ್ಷದಲ್ಲಿ ಈ ಭಾಗ ಸಂಪೂರ್ಣವಾಗಿ ಬದಲಾಗುತ್ತದೆ ಎಂದರು.
ತಾ.ಪಂ.ಸದಸ್ಯ ಹಾಗೂ ಲಿಂಗಸುಗೂರು ವಿಕಾಸ ಅಕಾಡಮಿ ಸಂಚಾಲಕ ಗವಿಸಿದ್ದಪ್ಪ ಸಾಹುಕಾರ್, ಬಿಜೆಪಿ ಮುಖಂಡ ಬಸನಗೌಡ ಪೆÇಲೀಸ್ ಪಾಟೀಲ್ ಮಾತನಾಡಿದರು.
ರಾಮಕೃಷ್ಣ ಆಶ್ರಮದ ಸಿದ್ದು ಜೀ, ಅಮರೇಶ ಹರಸುರು, ಹನುಮೇಶ ನಾಯಕ, ದೇವರಾಜ ಮಡಿವಾಳ, ಇಂದ್ರಪಾಷಾ, ಪ್ರಮೀಳಾ ದಾಸರ, ಗಾಳಿ ದುರುಗಮ್ಮ ಹಾಗೂ ಇತರರು ಭಾಗವಹಿಸಿದ್ದರು.

Don`t copy text!