ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಬ್ದಾರಿ-ಕವಿತಾ.ಆರ್

e-ಸುದ್ದಿ ಮಸ್ಕಿ
ಪ್ರತಿನಿತ್ಯ ಹಾಳಾಗುತ್ತಿರುವ ಪರಿಸರವನ್ನು ಸಂರಕ್ಷಣೆ ಮಾಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ತಹಶೀಲ್ದಾರ್ ಕವಿತಾ ಆರ್. ಹೇಳಿದರು.
ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರ ಕಚೇರಿ ಆವರಣಲ್ಲಿ ಕಂದಾಯ ದಿನಾಚರಣೆ ನಿಮಿತ್ತ ಗುರುವಾರ ಸಸಿ ನೆಡುವ ಮೂಲಕ ಹಸಿರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ಪ್ರತಿಯೊಂದು ಜೀವಿಯ ಉತ್ತಮ ಆರೋಗ್ಯಕ್ಕೆ ಉತ್ತಮ ಗಾಳಿ ಬೇಕು. ಆದರೆ, ಇವತ್ತು ನಾವು ಮರ ಗಡಿಗಳನ್ನು ಕಡಿದು ಪರಸರ ಹಾಳು ಮಾಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಂದಾಯ ದಿನಾಚರಣೆಯನ್ನು ಕಂದಾಯ ಇಲಾಖೆ ಸಿಬ್ಬಂದಿಯಿಂದ ಸಸಿ ನೆಡುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ನೌಕರರು ಕೇವಲ ಕಚೇರಿ ಕೆಲಸಕ್ಕೆ ಮಾತ್ರ ಸಿಮಿತವಾಗದೆ ಇಂತಹ ರಚನಾತ್ಮಕ ಕೆಲಸಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದರಿಂದ ಇತರರಿಗೂ ಇದು ಮಾದರಿಯಾಗಲಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ತಹಶೀಲ್ದಾರ್ ಕಚೇರಿ ಶಿರಸ್ತೆದಾರ ಸಯ್ಯದ್ ಅಕ್ತರ್‍ಅಲಿ ಕಂದಾಯ ಅಧಿಕಾರಿ ಶರಣಗೌಡ. ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಕಾಶ್‍ಸೌದ್ರಿ, ರೀಯಾನಾ ಬೇಗಂ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

Don`t copy text!