ಮಸ್ಕಿ : ಮುಂಬರುವ ಉಪ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಗಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ಸೂಕ್ತ ಅಭ್ಯರ್ಥಿಯನ್ನು ಹೈಕಮಾಂಡ್ ಸೂಚಿಸಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಶನಿವಾರ ಹೇಳಿದರು.
ಮಸ್ಕಿ ತಾಲೂಕಿನ ಉಮಲೂಟಿ ಗ್ರಾ.ಪಂ. ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ರಾಜೀನಾಮೆಯಿಂದ ತೆರವಾಗಿರುವ ನಮ್ಮ ಕ್ಷೇತ್ರಕ್ಕೆ ಉಪ ಚುನಾವಣೆ ಬರುವಂತ ದುಸ್ಥಿತಿ ಬಂದಿದೆ ಎಂದು ಮಲ್ಲಿಕಾರ್ಜುನ ಪಾಟೀಲ ಟೀಕಿಸಿದರು.
ಪಕ್ಷದ ಕಾರ್ಯಕರ್ತರು ಚುನಾವಣೆಯನ್ನು ಎದುರಿಸಲು ಬೂತ್ ಮಟ್ಟದಲ್ಲಿ ಸಿದ್ಧರಿರಬೇಕು. ಕಳೆದ ಬಾರಿ ಮಸ್ಕಿ ಕ್ಷೇತ್ರವೂ ಕಾಂಗ್ರೆಸ್ ವಶದಲ್ಲಿತ್ತು. ಈ ಬಾರಿಯೂ ಮತ್ತೆ ಕಾಂಗ್ರೆಸ್ ವಶಕ್ಕೆ ತೆಗೆದುಕೊಳ್ಳುವುದರಲ್ಲಿ ಯಾವುದೇ ಸಂಶಯಬೇಡ. ಪ್ರತಿಯೊಬ್ಬ ಕಾರ್ಯಕರ್ತರು ಚುನಾವಣೆಯಲ್ಲಿ ಶ್ರಮವಹಿಸಬೇಕೆಂದರು.
ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ಮಹಿಳಾ ಘಟಕದ ಅಧ್ಯಕ್ಷೆ ಬೇಗಂ ಶಾಮೀದ್‍ಸಾಬ್, ಮಹಿಬೂಬ್‍ಸಾಬ್ ಮುದ್ದಾಪೂರು, ಕಾಂಗ್ರೆಸ್ ಮುಖಂಡ ರಾಘವೇಂದ್ರ ನಾಯಕ ಗುತ್ತೇದಾರ, ಅನ್ನದಾನರಾಜಾ ನಾಡಗೌಡ, ಬಸನಗೌಡ ಮಾರಲದಿನ್ನಿ, ಬಾಪುಗೌಡ ತುರ್ವಿಹಾಳ್, ಮೌಲಾಸಾಬ್, ಅಮರೇಗೌಡ ತಿಡಿಗೋಳ್, ಹುಲಗಪ್ಪ, ಅಬೂಬ್ ತುರ್ವಿಹಾಳ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.