ಮಸ್ಕಿ: ತಾಲೂಕಿನ ಹಾಲಾಪೂರ ಗ್ರಾ.ಪಂ. ವ್ಯಾಪ್ತಿಯ ಶಂಕರನಗರ ಕ್ಯಾಂಪಿನಲ್ಲಿ 40 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಬಿಜೆಪಿ ಮುಖಂಡರಾದ ಜಿ. ವೆಂಕಟೇಶ್ವರರಾವ್ ಹಾಗೂ ಗ್ರಾಮಸ್ಥರು ಶನಿವಾರ ಭೂಮಿ ಪೂಜೆ ನೇರವೇರಿಸಿದರು.
ಜಿ.ವೇಂಕಟೇಶ್ವರ್‍ರಾವ್ ಮಾತನಾಡಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ರಸ್ತೆಗಳ ಸಮಸ್ಯೆ ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಸೋಳ್ಳೆಗಳು ಹೆಚ್ಚಾಗಿ ಜನರು ತೊಂದರೆ ಪಡುತ್ತಿದ್ದರು. ಇದೀಗ ಸರ್ಕಾರದಿಂದ ನಮ್ಮ ಗ್ರಾಮದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿದೆ ಇದರಿಂದ ನಮ್ಮ ಗ್ರಾಮದ ಸಮಸ್ಯೆಗಳಿಗೆ ಬೇಗ ಮುಕ್ತಿ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಸವರಾಜ, ಪಿ.ರಾಮರಾವ್, ಕೆ.ಮುರಳಿಕೃಷ್ಣ, ಗುಜಲ್, ಅಂಬರೀಶ್, ಜಗದೀಶ್, ಶ್ರೀನಿವಾಸ, ಆಂಜೀನೇಯ್ಯ ನಾಯಕ, ಹನುಮಂತ, ಕೆ.ವೇಣು, ರಾಮು, ಪರಮೇಶಿ ಸೇರಿದಂತೆ ಇತರರು ಇದ್ದರು.