ಕೊಚ್ಚಿಹೋದ ಹಿರೇ ಹಳ್ಳದ ಸೇತುವೆ, ಭೇಟಿ ನೀಡದ ಅಧಿಕಾರಿಗಳು

ಮಸ್ಕಿ;ಸತತ ಮಳೆಯಿಂದ ತಾಲೂಕಿನ ಬಳಗಾನೂರು ಪಟ್ಟಣದ ಹಿರೇ ಹಳ್ಳದ ಸೇತುವೆ ಕೊಚ್ಚಿಹೋಗಿದ್ದು ನಾರಾಯಣ ನಗರಕ್ಯಾಂಪ್ ಸೇರಿದಮತೆ ಸುತ್ತಮೂತ್ತಲಿನ ಹಲವಾರು ಗ್ರಾಮಗಳ ಜನತೆ ಅಗತ್ಯ ವಸ್ತುಗಳ ಪಡೆಯಲು ಬಳಗಾನೂರಿಗೆ ಬರಲು ಪರದಾಡುತ್ತಿದ್ದಾರೆ.
ಹಿರೇ ಹಳ್ಳದ ಸೇತುವೆ ಕೊಚ್ಚಿಹೋಗಿ ಸಂಪರ್ಕ ಕಳೆದುಕೊಂಡು ವಾರ ಕಳೆದರೂ, ಸಂಬಂಧಿಸಿದ ಅಧಿಕಾರಿಗಳು ಇತ್ತ ಮುಖ ಹಾಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಸ್ಕಿ ನಾಲಾ ಜಲಾಶಯ ಒಳ ಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಅ.12 ರವಿವಾರ ಸುಮಾರು 1600 ಕ್ಯುಸೆಕ್ ಅ.14 ಮಂಗಳವಾರ ಸುಮಾರು 1700 ಕ್ಯುಸೆಕ್ ಹೆಚ್ಚು ನೀರು ಹಿರೇ ಹಳ್ಳಕ್ಕೆ ಹರಿದು ಬಂದು ಸೇತುವೆಯ ಎರಡು ಭಾಗ ಕುಸಿದು ಹೋಗಿದೆ.


ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮೂರು ದಿನಗಳ ನಂತರ ಭೇಟಿ ನೀಡಿ ಜಿಲ್ಲಾಧಿಕಾರಿಗಳೊಡನೆ ದೂರವಾಣಿಯಲ್ಲಿ ಮತನಾಡಿ ಶೀಘ್ರದಲ್ಲಿ ದುರಸ್ಥಿಗೊಳಿಸಿ ಎಂದು ಸೂಚಿಸಿದ್ದರು. ಜಿಲ್ಲಾಧಿಕಾರಿಗಳು ಇದುವರೆಗೂ ಯಾವ ಅಧಿಕಾರಿಯನ್ನು ಕಳಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಹಳ್ಳಕ್ಕೆ ಹಾಕಲಾಗಿರುವ ಬೋರ್‍ವೆಲ್ ಕೋಚ್ಚಿಹೋಗಿ ಕುಡಿಯುವ ನೀರು ಸರಬರಾಜು ಮಾಡಲು ಪಂ.ಪಂ ಅಧಿಕಾರಿಗಳು ಹರಸಹಾಸ ಪಡುತ್ತಿದ್ದಾರೆ.
ಸೇತುವೆಯ ಕೊನೆ ಭಾಗದಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಹೆಚ್ಚಿನ ನೀರು ಹರಿಯುವದನ್ನು ತಡೆದು ಸೇತುವೆಯ ಮೇಲೆ ಜನ ಸಂಚಾರಕ್ಕೆ ಪಟ್ಟಣ ಪಂಚಾಯತಿ ಅಧಿಕಾರಿಗಳು ಅನುಕೂಲ ಮಾಡಿಕೊಡುತ್ತಿದ್ದಾರೆ.
ಈಗಲಾದರೂ ಭೇಟಿ ನೀಡಿದ ಮಾಜಿ ಶಾಸಕರು, ಗಣ್ಯರು, ಹಾಗೂ ಜಿಲ್ಲಾಧಿಕಾರಿಗಳು ಸಂಬಂದಿಸಿದ ಅಧಿಕಾರಿಗಳ ಗಮನಕ್ಕೆ ತಂದು ಕೊಚ್ಚಿಹೋದ ಸೇತುವೆ ಹಾಗೂ ರಸ್ತೆ ದುರಸ್ಥಿಗೆ ಮುಂದಾಗುರೋ ಕಾದುನೋಡಬೇಕು.

ವಧು ವರರ ಮಾಹಿತಿಗಾಗಿ ಸಂರ್ಪಕಿಸಿ

Don`t copy text!