ಮಸ್ಕಿ ಪಟ್ಟಣದಲ್ಲಿ ಖಾಲಿ ಸೈಟ್‍ನಲ್ಲಿ ಆಳೆತ್ತರಕ್ಕೆ ಬೆಳೆದ ಜಾಲಿ, ಜನರಿಗೆ ಹಾವು-ಚೇಳು ಬೀತಿ!

e-ಸುದ್ದಿ, ಮಸ್ಕಿ
ಪುರಸಭೆ ವ್ಯಾಪ್ತಿಯಲ್ಲಿ ಖಾಸಗಿ ನಿವೇಶನಗಳಲ್ಲಿ ಹಾಗೂ ಸಿಎ ಸೈಟ್‍ಗಳಲ್ಲಿ ಆಳೆತ್ತರಕ್ಕೆ ಜಾಲಿ ಗಿಡಗಳು ಬೆಳೆದು ನಿಂತಿರುವುದರಿಂದ ಅಕ್ಕ-ಪಕ್ಕದಲ್ಲಿ ವಾಸಿಸುವರು ಹಾವು-ಚೇಳುಗಳ ಭಯದಲ್ಲಿ ವಾಸಿಸುವಂತಾಗಿದೆ.
ಪಟ್ಟಣದ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ಗ್ರಾಮಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಅನೂಕೂಲವಾಗಲೆಂದು ಕೃಷಿಗೆ ಯೋಗ್ಯವಲ್ಲದ ಜಮೀನುಗಳನ್ನು ವಸತಿ ಉದ್ಧೇಶಕ್ಕಾಗಿ ಅಭಿವೃದ್ಧಿ ಪಡಿಸಿಕೊಳ್ಳುವುದಕ್ಕಾಗಿ ಪ್ರಾಧಿಕಾರ ಷರತ್ತುಗಳನ್ನು ವಿಧಿಸಿ ನಿವೇಶಗಳನ್ನು ಎನ್‍ಎ ಮಾಡಿಕೊಡುತ್ತದೆ. ಆದರೆ ನಿವೇಶಗಳಲ್ಲಿ ಮನೆಗಳನ್ನು ನಿರ್ಮಿಸದೆ ಜಾಲಿ ಗಿಡಗಳು ಬೇಳೆಯಲು ಅವಕಾಶವಾಗಿದೆ.
ಮಸ್ಕಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 75 ಎನ್‍ಎ ಲೇಔಟ್‍ಗಳು ನಿರ್ಮಾಣವಾಗಿದ್ದು ಅದರಲ್ಲಿ ಆರೂ ಸಾವಿರಕ್ಕೂ ಅಧಿಕ ಖಾಲಿ ನಿವೇಶನಗಳು ಖಾಸಗಿ ವ್ಯಕ್ತಿಗಳು ಖರೀದಿಸಿ ಲೇಔಟ್‍ಗಳಲ್ಲಿ ಮನೆ ಕಟ್ಟದೇ ಅನಿವಾರ್ಯ ಕಾರಣಗಳಿಂದ ಹಾಗೆ ಉಳಿದುಕೊಂಡಿವೆ.
ಕೆಲವೊಂದು ಬಡಾವಣೆಗಳಲ್ಲಿ ಕಟ್ಟಿಕೊಂಡ ಮನೆಗಳ ಅಕ್ಕ-ಪಕ್ಕದಲ್ಲಿ ಖಾಲಿ ನಿವೇಶಗಳಿದ್ದು ಆ ಜಾಗದಲ್ಲಿ ಜಾಲಿ-ಗಿಡಗಳು ಸೇರಿದಂತೆ ಕಸ-ಕಡ್ಡಿ ಬೆಳೆದಿರುವುದರಿಂದ ವಿಷ ಜಂತುಗಳು ಸೇರಿದಂತೆ ಉಳು ಉಪ್ಪಡಿಗಳ ಹಾವಳಿ ಹೆಚ್ಚಾಗುತ್ತಿದೆ. ಮಳೆಯ ನಿರಿನಿಂದಾಗಿ ಸೊಳ್ಳೆ ಕಾಟ ಅಧಿಕವಾಗವೆ.
ಖಾಸಗಿ ನಿವೇಶಗಳಲ್ಲಿ ಬೆಳೆದಿರುವ ಜಾಲಿಗಿಡಗಳನ್ನು ಸ್ವಚ್ಛಗೊಳಿಸುವಂತೆ ನಿವೇಶನದಾರರಿಗೆ ಪುರಸಭೆ ಸೂಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
——————–

ನಮ್ಮ ಮನೆಯ ಅಕ್ಕ-ಪಕ್ಕದಲ್ಲಿ ಖಾಲಿ ಸೈಟ್‍ಗಳು ಇರುವುದರಿಂದ ಮಳೆಗಾಲವಾಗಿರುವುದರಿಂದ ಕಸ ಹೆಚ್ಛಾಗುತ್ತಿದೆ. ಇದರಿಂದ ಹಾವು-ಚೇಳುಗಳ ಕಾಟ ಹೆಚ್ಛಾಗುತ್ತಿದೆ. ರಾತ್ರಿಯಾದರೆ ಮನೆಯ ಹೊರಗಡೆ ಓಡಾಡುವುದಕ್ಕೆ ಹೇದರಿಕೆಯಾಗುತ್ತಿದೆ. ಆದ್ದರಿಂದ ಪುರಸಭೆಯವರು ಕ್ರಮಕ್ಕೆ ಮುಂದಾಗಬೇಕು
-ಹೆಸರು ಹೇಳಲು ಇಚ್ಛಿಸದ ನಿವಾಸಿ.
———————

ಪುರಸಭೆ ವ್ಯಾಪ್ತಿಯಲ್ಲಿನ ಸಿಎ ಸೈಟ್‍ಗಳಲ್ಲಿ ಬೆಳೆದಿರುವ ಜಾಲಿಗಿಡಗಳನ್ನು ಸ್ವಚ್ಛಗೊಳಿಸಿ ನಾಮ ಫಲಕವನ್ನು ಹಾಕುತ್ತೆವೆ. ಅಲ್ಲದೇ ಖಾಸಗಿಯವರ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಕಸವನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ನಾವೂ ನೋಟೀಸ್ ನೀಡಿ ಪುರಸಭೆಯಿಂದ ಸ್ವಚ್ಛಗೊಳಿಸಿ ಅವರಿಂದ ಹಣ ವಸೂಲಿ ಮಾಡಲಾಗುವುದು
-ಹನುಮಂತಮ್ಮ ನಾಯಕ. ಪುರಸಭೆ ಮುಖ್ಯಾಧಿಕಾರಿ ಮಸ್ಕಿ.

Don`t copy text!