ರಾಚಪ್ಪ ಗವಾಯಿಗಳ ಬಡತನದ ಬದುಕಿಗೆ ಸಂಗೀತವೇ ಸಿರಿವಂತಿಕೆ- ವೀರೇಶ ಸೌದ್ರಿ   

ರಾಚಪ್ಪ ಗವಾಯಿಗಳ ಬಡತನದ ಬದುಕಿಗೆ ಸಂಗೀತವೇ ಸಿರಿವಂತಿಕೆ- ವೀರೇಶ ಸೌದ್ರಿ   

e-ಸುದ್ದಿ, ಲಿಂಗಸುಗೂರು

ಬಡತನವನ್ನೇ ಹಾಸಿ ಹೊದ್ದು ಮಲಗಿದಂತಿರುವ ರಾಚಪ್ಪ ಗವಾಯಿಗಳ ಬದುಕಿನ ಸಿರಿವಂತಿಕೆ ಎಂದರೆ ಅದು ಸಂಗೀತವೇ ಆಗಿತ್ತು ಎಂದು ಸಾಹಿತಿ ವೀರೇಶ ಸೌದ್ರಿ ಅಭಿಪ್ರಾಯಪಟ್ಟರು.

ಲಿಂಗಸೂಗೂರಿನ ಕಾವ್ಯಮಂಟಪ ಸಂಸ್ಥೆಯು ಸಾಹಿತ್ಯ ಸಂಸ್ಕೃತಿ ಪರಂಪರೆಯ ನಿರಂತರ ದರ್ಶನ ಅಂಗವಾಗಿ ಅಂತರ್ಜಾಲದಲ್ಲಿ ಆಯೋಜಿಸಿದ್ದ ಸರಣಿ ಕಾರ್ಯಕ್ರಮ ‘ನಮ್ಮ ಹೆಮ್ಮೆ ಮಾಲಿಕೆ’ಯಡಿ ರಾಚಪ್ಪ ಗವಾಯಿಗಳ ಕುರಿತು ಅವರು ಉಪನ್ಯಾಸ ನೀಡಿದರು.

ರಾಚಪ್ಪ ಗವಾಯಿಗಳು ತಮಗಿದ್ದ ಬಡತನವನ್ನು ಮರೆತು, ಸಂಗೀತವನ್ನೇ ಪ್ರೀತಿಸಿ, ಅದನ್ನೇ ಉಸಿರಾಡಿಸಿದರು.ಆದ್ದರಿಂದ, ಅವರಿಗೆ ಬದುಕಿನ ನೆಮ್ಮದಿ ಎಂದರೆ ಅದು ಸಂಗೀತವೇ ಆಗಿತ್ತು. ಎಂದರು.

ನಾಗಲೀಕ ಸಿಂಪಿ ಸಮಾಜದ ರಾಚಪ್ಪನವರು (1905ರಲ್ಲಿ ಜನನ) ಬಟ್ಟೆ ನೇಯುವುದು, ಬಣ್ಣ ಹಾಕುವ ವೃತ್ತಿ ಮಾಡುತ್ತಿದ್ದರು. ತಂದೆಯೊಂದಿಗೆ ವಾರದ ಸಂತೆಯಲ್ಲಿ ಬಟ್ಟೆಯೂ ಮಾರುತ್ತಿದ್ದರು. ಭಜನೆ ಕಾರ್ಯಕ್ರಮದಲ್ಲಿ ಇದ್ದ ಆಸಕ್ತಿ ಅವರನ್ನು ಸಂಗೀತದೆಡೆಗೆ ಸೆಳೆಯಿತು. ಹೀಗಾಗಿ, ಮಸ್‌ಇಯಲ್ಲಿದ್ದ ಅಮರಯ್ಯ ಶಾಸ್ತ್ರೀಗಳಲ್ಲಿ ಸಂಗೀತ ಕಲಿತರು. ಪುರಾಣ ಷಟ್ಪದಿಗಳನ್ನು ಹಾಡುತ್ತಿದ್ದರು. ಅವುಗಳ ಗೂಢಾರ್ಥಗಳನ್ನು ತಿಳಿದು ಪಾರಂಗತರೆನಿಸಿ, ಜನರ ಗಮನ ಸೆಳೆದರು ಎಂದರು.

ನಾಟಕ ಕಂಪನಿಯಲ್ಲಿ ಸೇವೆ: ದಾವಣಗೆರೆಯ ವಾಮನರಾವ್ ನಾಟಕ ಕಂಪನಿಯಲ್ಲಿ 2 ವರ್ಷ ಹಾರ್ಮೋನಿಯಂ ವಾದಕರು, ಅಮೀರ್ ಝಾನ್, ಗೂಗರ್ ಝಾನ್ ನಾಟಕ ಕಂಪನಿಯಲ್ಲೂ ಸೇವೆ ಸಲ್ಲಿಸಿದ್ದರು. ಮಸ್ಕಿಯ ಅಮರೇಗೌಡ ಪಾಟೀಲರು ಭುವನೇಶ್ವರಿ ನಾಟ್ಯ ಸಂಘದಲ್ಲಿ ಸೇರಿಸಿಕೊಂಡಿದ್ದರು. ರಂಗಕರ್ಮಿ ಗರುಡ ಸದಾಶಿವರಾಯರು, ನೀಲಕಂಠರಾಯರ ಜೊತೆ ನಾಟಕಗಲ್ಲಿ ಸಂಗೀತದ ಸಾಥ್ ನೀಡಿದ್ದರು. ನಾಟಕ ರಂಗವನ್ನು ಬಿಟ್ಟು ಸಂಗೀತ ಕಲಿಸಲು ಪ್ರಾರಂಭಿಸಿ, ” ಪೇಟಿ ಮಾಸ್ತರ ” ಎಂದೇ ಹೆಸರುವಾಸಿಯಾದರು ಎಂದು ರಾಚಪ್ಪ ಗವಾಯಿಗಳ ಬದುಕಿನ ಪಯಣವನ್ನು ವಿವರಿಸಿದರು.

ಕಾವ್ಯ ರಚನೆ: ಸಿದ್ಧರಾಮ ಜಂಬಲದಿನ್ನಿ ಯವರು, ಬೂದೆಪ್ಪ ಗಬ್ಬೂರ್ ಅವರ ರಾಚಪ್ಪ ಗವಾಯಿಗಳ ಶಿಷ್ಯರು ಎಂಬುದು ವಿಶೇಷ. ಅಮರೇಶ್ವರ ಪುರಾಣ, ಶರಣಬಸವೇಶ್ವರ ಪುರಾಣ, ಧರ್ಮ ದೇವತೆ, ಭಾರತಾಂಬೆ‌ ಅಷ್ಟಕ ಮುಂತಾದ ನಾಟಕ ಮತ್ತು ಕಾವ್ಯಗಳನ್ನೂ ಬರೆದಿದ್ದಾರೆ.

(ಸಹಕಾರ-,ಬುಕ್ ಬ್ರಹ್ಮ)

Don`t copy text!