ಸೋಲು ಗೆಲುವಿಗಿಂತ ಜನರ ಜತೆ ಇರುವುದು ಮುಖ್ಯ-ಪ್ರತಾಪಗೌಡ ಪಟೀಲ

e-ಸುದ್ದಿ, ಮಸ್ಕಿ
ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯ ಅಲ್ಲ. ಸದಾ ಜನರ ಜೊತೆಗೆ ಇರುವುದು ಮುಖ್ಯ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ತಾಲೂಕಿನ ಮಲ್ಲದಗುಡ್ಡ ಗ್ರಾ.ಪಂ.ವ್ಯಾಪ್ತಿಯ ಡೋಣಮರಡಿ ಗ್ರಾಮದಲ್ಲಿ ಸೋಮವಾರ ಬಿಜೆಪಿ ಹಿಂದುಳಿದ ವರ್ಗ ಮೊರ್ಚಾದ ವತಿಯಿಂದ ಆಯೋಜಿಸಿದ್ದ ವೃಕ್ಷರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿ ನೆಟ್ಟು ಮಾತನಾಡಿದರು.
ಬಿಜೆಪಿಯ ಕಾರ್ಯಕರ್ತರು ನನ್ನ ಸೋಲಿನಿಂದ ಬೇಸರ ಮಾಡಿಕೊಳ್ಳಬೇಡಿ. ಜನರು ನೀಡಿದ ತೀರ್ಪುನ್ನು ಸ್ವಾಗತಿಸೋಣ ಮತ್ತು ಮುಂದಿನ ಚುನಾವಣೆಯಲ್ಲಿ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಳ್ಳೋಣ. ನಿಮ್ಮ ಜತೆ ನಾನಿದ್ದೇನೆ ಎಂದು ಬಿಜೆಪಿ ಪ್ರತಾಪಗೌಡ ಪಾಟೀಲ ಹೇಳಿದರು.
ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಮ್ಮ ಪಕ್ಷದ ಸರ್ಕಾರ ಇರುವುದರಿಂದ ಅನೇಕ ಯೋಜನೆಗಳನ್ನು ಮಸ್ಕಿ ತಾಲೂಕಿಗೆ ತರುವ ಪ್ರುಯತ್ನ ಮಾಡುವೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಸರ್ಕಾರದ ಉದ್ದೇಶ ಈಡೇರಿಕೆ ಮಾಡುವಲ್ಲಿ ಬಿಜೆಪಿ ಕಾರ್ಯಕರ್ತರು ಮುಂಚುಣಿಯಲ್ಲಿರಬೇಕೆಂದರು.
ಬಿಜೆಪಿಯ ಹಿರಿಯ ಮುಖಂಡರಾದ ವಿಶ್ವನಾಥ ಪಾಟೀಲ ತೋರಣದಿನ್ನಿ, ಜಗದೀಶಸ್ವಾಮಿ ಹಾಲಾಪೂರು, ಚಂದ್ರಕಾಂತ ಗೂಗೆಬಾಳ, ಲಿಂಗರಾಜ ಜಂಗಮರಹಳ್ಳಿ, ಶರಣಪ್ಪ ಸಾಹುಕಾರ ತೋರಣದಿನ್ನಿ, ಮಂಡಲ ಕಾರ್ಯದರ್ಶಿ ಶರಣಯ್ಯ ಸೋಪ್ಪಿಮಠ, ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ಪ್ರಕಾಶ, ಮಸ್ಕಿ ಮಂಡಲ ಹಿಂದುಳಿದ ವರ್ಗ ಮೊರ್ಚಾ ಅಧ್ಯಕ್ಷ ಬಸವರಾಜ ವಕೀಲ ಡೋಣಮರಡಿ, ಎಸ್ಸಿ ಮೊರ್ಚಾ ಜಿಲ್ಲಾ ಅಧ್ಯಕ್ಷ ಶರಣಬಸವ ವಕೀಲ, ಭೀಮಣ್ಣ ನಾಯಕ್ ಹಾಗೂ ಇತರರು ಭಾಗವಹಿಸಿದ್ದರು.

Don`t copy text!