ಗ್ರಾ.ಪಂ.ಸಿಬ್ಬಂದಿಯನ್ನು ಕರೊನಾ ವಾರಿಯರ್ಸ್ ಎಂದು ಪರಿಗಣಿಸಿ

e-ಸುದ್ದಿ, ಮಸ್ಕಿ
ಕರೊನಾ ವೈರಸ್ ಪ್ರತಿಯೊಂದು ಹಳ್ಳಿಗಳಲ್ಲಿ ಹರಡಿದೆ. ಗ್ರಾ.ಪಂ.ಸಿಬ್ಬಂದಿ ಕರೊನಾ ವಿರುದ್ಧ ಸರ್ಕಾರದ ನಿರ್ದೆಶನಗಳನ್ನು ಪಾಲಿಸುತ್ತ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಹಾಗಾಗಿ ಗ್ರಾ.ಪಂ.ಸಿಬ್ಬಂದಿಯನ್ನು ಕರೊನಾ ವಾರಿಯರ್ಸ್ ಎಂದು ಪರಿಗಣಿಸುವಂತೆ ಒತ್ತಾಯಿಸಿ ಗ್ರಾ.ಪಂ.ನೌಕರರು ಧರಣಿ ನಡೆಸಿದರು.
ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ಸೋಮವಾರ ಗ್ರಾ.ಪಂ.ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಧರಣಿ ನಡೆಸಿ ನಮ್ಮನ್ನು ಕರೊನಾ ವಿಮೆಗೆ ಒಳಪಡಿಸಿರಿ. ಈಗಾಗಲೇ ಕರೊನಾ ಕರ್ತವ್ಯದ ಮೇಲೆ ಮರಣಹೊಂದಿವರಿಗೆ ಸರ್ಕಾರದಿಂಸ ಸಿಗುವ ಸೌಲಭ್ಯ ಕಲ್ಪಿಸಿ ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಸಿಬ್ಬಂದಿಗಳಿಗೆ ವೇತನ ನೀಡುವಂತೆ ಆಗ್ರಹಿಸಿದರು.
ಗ್ರಾ.ಪಂ.ನೌಕರರ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ ಮಾತನಾಡಿ ಕಳೆದ 10-15 ತಿಂಗಳಿನಿಂದ ವೇತನ ಸಿಗದೆ ಪರದಾಡುವುಂತಾಗಿದೆ. ಕೂಡಲೇ ವೇತನ ಕೊಡಬೇಕು ಮತ್ತು ಗ್ರೇಡ್ 2 ಹುದ್ದಗೆ ತಡೆದಿರುವ ಆದೇಶ ವಾಪಸ್ಸು ಪಡೆದು ಬಡ್ತಿ ನೀಡಬೇಕೆಂದು ಒತ್ತಾಯಿಸಿದರು.
ಗ್ರಾ.ಪಂ.ನೌಕರರ ಸಂಘದ ತಾಲೂಕು ಅಧ್ಯಕ್ಷ ಮೌನೇಶ ಮಟ್ಟೂರು, ಹನುಮಪ್ಪ, ಸೋಮಪ್ಪ, ರಾಜಸಾಬ್, ಚಂದಪ್ಪ, ಶರಣಪ್ಪ, ಛತ್ರಪ್ಪ, ದುರ್ಗಮ್ಮ, ರಾಮಣ್ಣ, ಲಿಂಗನಸೌಡ, ಲಕ್ಷ್ಮಣ ಹಾಗೂ ಇತರರು ಭಾಗವಹಿಸಿದ್ದರು.
ತಾ.ಪಂ. ಇ.ಒ ಬಾಬುರಾವ್ ರಾಠೋಡ ಮನವಿ ಪತ್ರ ಸ್ವಿಕರಿಸಿದರು.

Don`t copy text!