ಒಲವಿನ ಪ್ರೀತಿ

ಒಲವಿನ ಪ್ರೀತಿ

ನನ್ನ ಅವಳ ನಂಟು
ಹದಿನೆಂಟರ ಗಂಟು

ಹದಿನೆಂಟು ಬಿಡಿಸಲಾಗದ ಸಿಹಿನಂಟು
ಬಾಳ ಬಂಧನದಲ್ಲಿ‌ ಸಮರಸ ಉಂಟು

ಬಾಳ ಬಂಡಿಯಲ್ಲಿ ನಾವಿಬ್ಬರು
ನಮ್ಮ ಬದುಕಿಗೆ ಮಕ್ಕಳಿಬ್ಬರು

ಬಾಳೆಂಬ ಬಂಡಿಯಲಿ
ಬಾಂಧವ್ಯ ಬೆಸೆಯುತಿರುವೆ

ಬಂಧ ಅನುಬಂಧದೆಲೆಗಳಂತೆ
ಬದುಕಿನ ಮಜಲುಗಳು

ಬಂದದ್ದಲ್ಲವು ಬರಲಿ
ಬರುವದೆಲ್ಲವೂ ಬರಲಿ

ಒಲವಿನ ಪ್ರೀತಿ
ಅಗೆದಷ್ಟು‌ ಆಳ

ಬದುಕಿನ ಆಳ
ತಿಳಿದಷ್ಟು ನೋಡ

ನನ್ನ ‌ಅವಳ‌ ನಂಟು
ಹದಿನೆಂಟರ ಸಿಹಿನಂಟು

ವೀರೇಶ ಸೌದ್ರಿ, ಮಸ್ಕಿ

Don`t copy text!