ದೇಶ ಕಂಡ ಅಪ್ರತಿಮ ನಾಯಕ ಬಾಬು ಜಗಜೀವನ್ ರಾಮ್-ಪ್ರತಾಪಗೌಡ ಪಾಟೀಲ

e-ಸುದ್ದಿ, ಮಸ್ಕಿ
ಬಾಬು ಜಗಜೀವನ್ ರಾಮ್ ಅವರು ಭಾರತ ಕಂಡ ಅಪ್ರತಿಮ ನಾಯಕರಾಗಿದ್ದರು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾಜಿ ರಾಷ್ಟ್ರಪತಿ ಬಾಬು ಜಗಜೀವನ್ ರಾಮ್ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಾಬು ಜಗಜೀವನ್ ರಾಮ್ ಅವರು ಹತ್ತು ಹಲವು ಹುದ್ದೆಗಳನ್ನು ಅಲಂಕರಿಸಿದ ಶ್ರೇಷ್ಟ್ ನಾಯಕರಾಗಿದ್ದರು. ಬಡವರು ಹಿಂದುಳಿದವರು ಮತ್ತು ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ ಮಹಾನ್ ನಾಯಕರಾಗಿದ್ದರು ಎಂದು ಪ್ರತಾಪಗೌಡ ಪಾಟೀಲ ಬಣ್ಣಿಸಿದರು.
ಬಿಜೆಪಿಯ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಡಾ.ಶ್ಯಾಮ ಪ್ರಸಾದ ಮುಖರ್ಜಿ ನಡೆದ ಬಂದ ಹಾದಿಯ ಬಗ್ಗೆ ವಿವರಿಸಿದರು.
ಬಿಜೆಪಿ ಮುಖಂಡರಾದ ಮಸ್ಕಿ ಶಿವಪ್ಪ ಹುಬ್ಬಳ್ಳಿ, ಎಂ.ಅಮರೇಶ, ರವಿಗೌಡ ಪಾಟೀಲ, ಪ್ರಸನ್ನ ಪಾಟೀಲ, ಚೇತನ ಪಾಟೀಲ, ವೀರೇಶ ಕಮತರ್, ಶರಣಯ್ಯ ಸೊಪ್ಪಿಮಠ, ವೆಂಕಟೇಶ ನಾಯಕ, ಮೌನೇಶ ಮುರಾರಿ, ಶರಣಬಸವ ಹಂಚಿನಾಳ, ಶಿವಕುಮಾರ ವಟಗಲ್, ಶ್ರೀನಿವಾಸ ಇಲಕಲ್ಲ, ಶ್ರೀಧರ ಕಡಬೂರು, ಶರಣಯ್ಯ ಗುಡದೂರು, ಅಮರೇಶ ಮಾಟೂರು, ನಾಗರಾಜ ಯಂಬಲದ, ಮಲ್ಲಿಕಾರ್ಜುನ ಅಚ್ಛಾ ಹಾಗೂ ಇತರರು ಇದ್ದರು.

Don`t copy text!