ದಾಖಲೆ‌ ಮೆರೆದ 16 ಭಾಷೆಯ ಬಹುಭಾಷಾ ಕವಿಗೋಷ್ಟಿ

ದಾಖಲೆ‌ ಮೆರೆದ 16 ಭಾಷೆಯ ಬಹುಭಾಷಾ ಕವಿಗೋಷ್ಟಿ

e-ಸುದ್ದಿ, ಬೆಳಗಾವಿ

 

ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ (ರಿ) ಬೆಳಗಾವಿ ಜಿಲ್ಲೆಯ ವತಿಯಿಂದ ನಡೆದ ಬಹುಭಾಷಾ ಕವಿಗೋಷ್ಠಿ ‘ ಕಾರ್ಯಕ್ರಮವು ತುಂಬಾ ಯಶಸ್ವಿಯಾಗಿ ಮೂಡಿ ಬಂದಿತು.

೧೬ ವಿವಿಧ ಭಾಷೆಯ ೬೫ ಕ್ಕೂ ಹೆಚ್ಚು ಕವಿಗಳು ತಮ್ಮ ಕಾವ್ಯವನ್ನು ವಾಚನ ಮಾಡಿದರು. ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಬೆಳಗಾವಿ ಘಟಕದ ಗೌರವ ಅಧ್ಯಕ್ಷರಾದ
ಗುರುದೇವಿ ಹುಲೇಪ್ಪನವರು ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು
ಜೀವನದ ವಿಷದ ರಸದಿಂದ ಕೂಡಿದ್ದು ಅವುಗಳಲ್ಲಿ ಎರಡು ಅಮೃತ ಪ್ರಾಯದಂತಹ ಹಣ್ಣುಗಳನ್ನು ಭಗವಂತ ಇಟ್ಟಿದಾನೆ , ಅವುಗಳೆ ಸಜ್ಜನರ ಸಹವಾಸ ಹಾಗೂ ಸತ್ಕಾರ್ಯ ಸಲ್ಲಾಪ ಇವುಗಳನ್ನುಮಾಡುತ್ತಾ ಒಳ್ಳೆಯದನ್ನು ಕೇಳುತ್ತಾ, ಮಾತನಾಡುತ್ತಾ ,ಚಿಂತಿಸಿ ನಮ್ಮ ಸಮಯವನ್ನು ಸಾಹಿತ್ಯಾತ್ಮಕವಾಗಿ ಕಳೆಯುವಂತೆ ಮಾಡಬೇಕಿದೆ. ಮಿನಿಮಮ್ ವರ್ಡ್ಸ ಮ್ಯಾಕ್ಸಿಮಮ್ ಮ್ಯಾಟರ್ ಎಂದರು. ದಂಡಿ ಕವಿಯ ಮಾತನ್ನು ಉಲ್ಲೇಖಿಸುತ್ತಾ ‘ಭಾಷೆಯು ಜಗತ್ತನ್ನು ಬೆಳಗುವ ಸಾಧನ ಅದು ಇಲ್ಲದಿದ್ದರೆ ಜಗತ್ತು ಗಾಡಾಂಧಕಾರದಲ್ಲಿ ಮುಳುಗಿರುತಿತ್ತು’, ಆದ್ದರಿಂದ ಈ ಬಹು ಭಾಷಾ ಕವಿಗೋಷ್ಠಿಯು ಎಲ್ಲಾ ಭಾಷೆಯ ಮಹತ್ವವನ್ನು ಸಾರುವಂತಾಗಿದೆ ಎಂದು ತಮ್ಮ ನುಡಿಯಲ್ಲಿ ತಿಳಿಸಿದರು.
ಈ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ರವರು ಮಾತನಾಡಿ ‘ಪ್ರಸ್ತುತದ ಈ ಗೋಷ್ಠಿಯು ದೇಶ ಭಾಷೆ ಧರ್ಮದ ಗಡಿದಾಟಿ ವಿಶ್ವ ಧರ್ಮವನ್ನು ಸಾರು ಮಹತ್ವವನ್ನು ಹೊಂದಿದೆ. ಅಲ್ಲದೆ ‘ ಮಾನವ ಕುಲಂ ತಾನೊಂದೆ ವಲಂ’ ಭಾಷೆಯಾವುದಾದರೇನು ಭಾವ ಮುಖ್ಯ ಧರ್ಮ ಯಾವುದಾದರೇನು ಮೌಲ್ಯ ಮುಖ್ಯ ಎಂದರು ಹಾಗೂ ಮಹಾಮನೆಯ ಮಂತ್ರ ಸಾರಿದ ಬಸವಣ್ಣನವರ ಸಾಹಿತ್ಯ ಚಳುವಳಿಯ ಪರಿ ಮುಂತಾದ ವಿಶ್ವ ಸಂದೇಶವನ್ನು ಸಾರುವ ಕಾರ್ಯಕ್ರಮವಾಗಿದೆ. ಪ್ರಸ್ತುತ ಸಾಹಿತಿಗಳು ವಿಶಾಲ ಹೃದಯದ ಮನೋಭಾವವನ್ನು ಹೊಂದಿ ‘ನಿಂರಕುಶಮತಿಗಳಾಗಿ’ ಎಂದು ತಮ್ಮ ನುಡಿಯಲ್ಲಿ ತಿಳಿಸಿದರು.

ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಮತಿ ಆಶಾ.ಎಸ್.ಯಮಕನಮರಡಿಯವರು ಈ ಕಾರ್ಯಕ್ರಮದಲ್ಲಿ 79 ಕವಿಗಳು 16 ಭಾಷೆಗಳಲ್ಲಿ ಸ್ವರಚಿತ ಕವನ ವಾಚನ ಮಾಡಲು ಅಣಿಯಾಗಿರುವುದು ಬಹಳ ಸಂತಸ ತಂದಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ,ಪ್ರಾಂತೀಯ ಹಾಗೂ ಪ್ರಾದೇಶಿಕ ಸೊಗಡಿನ ಭಾಷೆಗಳ ಸಂಗಮವಿಲ್ಲಿ ಆಗಿದೆ ಎಂದು ಹೇಳಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭಕೋರಿದರು.
ಕನ್ನಡ,ತುಳು, ಮಳಯಾಳಿ, ಸಂಸ್ಕೃತ, ಗುಜರಾತಿ, ಹಿಂದಿ, ಫ್ರೆಂಚ್, ಪಂಜಾಬಿ, ಕೊಂಕಿಣಿ, ಉರ್ದು, ಮರಾಠಿ,ಜರ್ಮನ್, ಲಮಾಣಿ, ಇಂಗ್ಲೀಷ್, ಹವ್ಯಕ, ಮಾಲವಣಿ ಭಾಷೆಗಳಲ್ಲಿ ಕವಿಗಳ ಸ್ವರಚಿತ ಕವನ ವಾಚನ ಅರ್ಥಪೂರ್ಣವಾಗಿ ಮೂಡಿ ಬಂದು ವಿಶ್ವ ಸಂದೇಶ ಸಾರುವುದರ ಜೊತೆಗೆ ಕಾರ್ಯಕ್ರಮಕ್ಕೆ ಮೆರಗನ್ನು ತಂದು ಕೊಟ್ಟವು.
ಈ ಕಾರ್ಯಕ್ರಮದ ಬಹುಭಾಷಾ ಕವಿಗೋಷ್ಠಿಯ ನಿರ್ಣಾಯಕರಾಗಿ ಬೆಳಗಾವಿ ಜಿಲ್ಲೆಯ ಹಿರಿಯ ಕವಯತ್ರಿ ಶ್ರೀ ಮತಿ ಸುನಂದಾ ಎಮ್ಮಿಯವರು ಕವಿತೆಗಳ ವಾಚನವನ್ನು ಆಲಿಸಿ ಈ ಕಾರ್ಯಕ್ರಮವು ಭಾಷೆ ಬೇರೆಯಾದರೂ ಭಾವ ಬೇರೆಯಾದರೂ ನಾವೆಲ್ಲ ಭಾರತೀಯರು ಎಂಬ ಬಾಂಧವ್ಯವನ್ನು ಕಟ್ಟಿ ಕೊಟ್ಟಿತು ಎಂದರು.ಜಿಲ್ಲೆಯ ಮತ್ತೊರ್ವ ನಿರ್ಣಾಯಕರಾದ ಹಿರಿಯ ಸಾಹಿತಿ ಶ್ರೀ ಮತಿ ರಂಜನಾ ನಾಯಕ್ ಅವರು ಈ ಕೊರೋನ ಕಾಲದಲ್ಲಿ ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ತೋರಿಸಿದ ಹಬ್ಬದೂಟ ಬಡಿಸಿದಂತೆ ಈ ಕಾರ್ಯಕ್ರಮ ಮೂಡಿ ಬಂತು ಈ ಗೋಷ್ಠಿಯನ್ನು ಆಯೋಜನೆ ಮಾಡಿದ ಸಂಘಟಕರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಮಂಜುಶ್ರೀ ಹಾವಣ್ಣವರ್ ಯಶಸ್ವಿಯಾಗಿ ನಡೆಸಿಕೊಟ್ಟರು. ಹಾಗೂ ಕಾರ್ಯಕ್ರಮದ ಆಶಯ ನುಡಿಯಲ್ಲಿ ಯರಗಟ್ಟಿ ತಾಲೂಕಿನ ಅಧ್ಯಕ್ಷರಾದ ಶಮಾ ಜಮಾದಾರ ಅವರು ಮಾತನಾಡಿ ವೇದಿಕೆಯ ವಿನೂತನವಾದ ಈ ಪ್ರಯತ್ನ ವೇದಿಕೆಯ ಘನತೆಗೆ ಮುಕುಟಪ್ರಾಯವಾಗಿದೆ ಎಂದರು. ಹಾಗೆಯೆ ಗೌರವ ಉಪಸ್ಥಿತಿಯಲ್ಲಿ ಡಾ.ಸುಜಾತಾ ಚಲವಾದಿ ಅವರು ಮಾತನಾಡಿ ಇದು ರಾಷ್ಟ್ರಮಟ್ಟದ ಕವಿಗೋಷ್ಠಿ ಎಂದು ಶ್ಲಾಘಿಸಿದರು. ಬಹುಭಾಷಾ ವಿದ್ವಾಂಸರಾದ ಶ್ರೀ ಜಿ.ಆರ್.ಕುಲಕರ್ಣಿ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಭಾಷೆಗೆ ವ್ಯಾಕರಣ ಮುಖ್ಯ. 72 ವರುಷದ ಬಾಹತ್ತರ ನಾನು ಈ ಕಾರ್ಯಕ್ರಮ ಬಾ ಹತ್ತಿರ ಎನ್ನುವಂತಾಯ್ತು ಎಂದು ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಸ್ವರಚಿತ ಕವನ ವಾಚನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಗೀತಾ ಸೊಂಟಕ್ಕಿಯವರು ವಿನಾಯಕ ಪ್ರಾರ್ಥನೆ ಮಾಡಿದರು. ನಿರ್ಮಲಾ ಪಾಟೀಲ ಅವರು ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಶ್ರೀಮತಿ ಹೇಮಾ ಭರಭರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನೆ ತಿಳಿಸಿದರು.

ಕಾರ್ಯಕ್ರಮದ ವರದಿಯನ್ನು ವೇದಿಕೆಯ ತಾಲ್ಲೂಕಾ ಅಧ್ಯಕ್ಷರಾದ ಶ್ರೀ ಮತಿ ಪ್ರೇಮಾ ಕುಂಬಾರ ಅಚ್ಚುಕಟ್ಟಾಗಿ ತಯಾರಿಸಿದರು. ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಜನ ಈ ಕಾರ್ಯಕ್ರಮ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಿದ್ದೇಶ್ವರ ಸಾಹಿತ್ಯ ವೇದಿಕೆಗೆ ಇದೊಂದು ವಿಶಿಷ್ಟವಾದ ದಾಖಲೆಯ ಕಾರ್ಯಕ್ರಮವಾಗಿ ಮೂಡಿಬಂದಿತು.

Don`t copy text!