ಗಜಲ್
ಜಿಂದಗಿಯಲ್ಲಿ ಕತ್ತಲಾವರಿಸಿದೆ ನಿನ್ನ ಕಳೆದುಕೊಂಡು
ದಿನ್ ರಾತ್ ದುಃಖವೇನಿಸಿದೆ ನಿನ್ನ ಹುಡುಕಿಕೊಂಡು
ಒಲವಿನ ಆಲಿಂಗನಕ್ಕೆ ಹಂಬಲಿಸಿದ ಕರಗಳು ಸೋತಿವೆ
ಪಾದಗಳನ್ನು ಮುಟ್ಟಲು ಬಯಸಿದೆ ನಿನ್ನ ಸ್ಮರಿಸಿಕೊಂಡು
ಇಂದೇಕೋ ಬೇಡವಾಗಿ ಮಧು ಬಟ್ಟಲಲ್ಲಿ ಕಹಿ ತುಂಬಿದೆ
ಮನಸ್ಸಿಂದು ಕಂಬನಿ ಸುರಿಸುತ್ತಿದೆ ನಿನ್ನ ಜ್ಞಾಪಿಸಿಕೊಂಡು
ನಿತ್ಯವೂ ಹುಟ್ಟುವ ರವಿಗೂ ಪ್ರಖರತೆಯುಂಟು ಅಲ್ಲವೇ
ಕಬ್ಬಿಣದ ಕಡಲೆಯಾಗಿದೆ ದಿಲ್ ನಿನ್ನ ಪ್ರಾರ್ಥಿಸಿಕೊಂಡು
ವಿರೂ ಪ್ರೀತಿಯನ್ನು ಹೊತ್ತು ತಿರುಗುವ ಹೊನ್ನಿನ ತೇರು
ಶಬರಿಯಂತೆ ದಿನವೂ ಕಾದೆ ಕಾದೆ ನಿನ್ನ ಪೂಜಿಸಿಕೊಂಡು
✍️:-ವಿರೂಪಾಕ್ಷಿ ಎಂ.ಯಲಿಗಾರ