ಬಳಗಾನೂರಿನಲ್ಲಿ ಟ್ಯಾಂಕರ ಮೂಲಕ ಕೂಡಿಯುವ ನೀರು ಪೂರೈಕೆ

ತಾಲೂಕಿನ ಬಳಗಾನೂರು ಪಟ್ಟಣದ ಕೆಲ ವಾರ್ಡಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಕಾರಣ ಅಲ್ಲಿನ ನಿವಾಸಿಗಳಿಗೆ ಪಟ್ಟಣ ಪಂಚಾಯತಿ ಸಿಬ್ಬಂದಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ.
ಮಸ್ಕಿ ನಾಲಾ ಜಲಾಶಯ ಒಳ ಹರಿವಿನ ಪ್ರಮಾಣ ಹಾಗೂ ನಿರಂತರ ಮಳೆಯಾಗಿರುವದರಿಂದ ಹಳ್ಳಕ್ಕೆ ಹಾಕಲಾಗಿದ್ದ ಬೋರ್‍ವೆಲ್ಲ ಹಾಗೂ ಪೈಪ್ ಲೈನ್ ಕಿತ್ತುಕೊಂಡು ಹೋಗಿದೆ. ಇದರಿಂದ ನೀರು ಪೂರೈಕೆಯಲ್ಲಿ ತೊಂದರೆಯಗಿತ್ತು.
ಪಟ್ಟಣಕ್ಕೆ ನೀರು ಸರಬರಾಜು ಮಾಡಲು ನೀರುಗಂಟೆಗಳು ಪಪಂ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ನೀರು ಪೂರೈಕೆಗೆ ಶ್ರಮಿಸುತ್ತಿದ್ದಾರೆ. 1,2 ಮತ್ತು 3 ನೇ ವಾರ್ಡಿನ ನಿವಾಸಿಗಳಿಗೆ ಒಂದು ವಾರದಿಂದ ಟ್ಯಾಂಕರ್ ನೀರು ಸರಬರಾಜು ಮುಂದಾಗಿದ್ದಾರೆ.


ತರಾಟೆ: ಒಂದು ವಾರದಿಂದ ನೀರು ಪೂರೈಕೆ ತೊಂದರೆಯಿಂದಾಗಿ ನಿವಾಸಿಗಳು ಪ.ಪಂ. ಸದಸ್ಯರುಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ವಾರ್ಡಿನ ಸದಸ್ಯರಾದ ಮುದುಕಪ್ಪ ಹಳ್ಳಿಗೌಡ್ರು, ಮುಖಂಡ ಇಸ್ಮಾಯಿಲ್ ಸಾಬ್ ನೀರುಗಂಟೆ ಮತ್ತು ಪಪಂ ಕಾರ್ಯನಿರ್ವಹಿಸುವ ಅಧಿಕಾರಿಗೆ ಶೀಘ್ರದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಮುಂದಾಗಿ ಎಂದು ಮನವಿ ಮಾಡಿದ್ದರು.
ಎಚ್ಚೆತ್ತುಕೊಂಡ ಪಪಂ ಸಿಬ್ಬಂದಿಗಳು 1-2 ಮತ್ತು 3 ನೇ ವಾರ್ಡಿಗೆ ನಿವಾಸಿಗಳಿಗೆ ಟ್ಯಾಂಕರ ಮೂಲಕ ನೀರು ಸರಬರಾಜು ಮಾಡಲು ಮುಂದಾದರು.

————————————-

ಬಳಗಾನೂರಿನಲ್ಲಿ ಉದ್ಬವಿಸಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವದು
-ರಡ್ಡಿರಾಯನಗೌಡ ಪ.ಪಂ.ಪ್ರಭಾರಿ ಅಧಿಕಾರಿ

Don`t copy text!