ಮಸ್ಕಿ ಯುತ್ ಕಾಂಗ್ರೆಸ್‍ಗೆ ಬಸವರಾಜ ವೆಂಕಟಾಪೂರು, ಸಿದ್ದು ಮುರಾರಿ ನೇಮಕ

ಮಸ್ಕಿ : ಪಟ್ಟಣದ ಗಾಂಧಿ ನಗರದಲದಲ್ಲಿರುವ ಪ್ರವಾಸಿ ಮಂದಿರದಲ್ಲಿ ಮಸ್ಕಿ ಯುತ್ ಕಾಂಗ್ರೆಸ್ರ ಘಟಕದ ಉಪಾಧ್ಯಕ್ಷರನ್ನಾಗಿ ಬಸವರಾಜ ವೆಂಕಟಾಪೂರು ಹಾಗೂ ಗ್ರಾಮೀಣ ಘಟಕದ ಉಪಾಧ್ಯಕ್ಷರನ್ನಾಗಿ ಸಿದ್ದು ಮುರಾರಿ ಇವರನ್ನು ಯುತ್ ಕಾಂಗ್ರೆಸ್ ಮಸ್ಕಿ ನಗರ ಘಟಕದ ಅಧ್ಯಕ್ಷ ಹುಸೇನಬಾಷ ಬಳಗಾನೂರು ನೇಮಕ ಮಾಡಿ ಆದೇಶ ನೀಡಿದರು.
ಹುಸೇನಬಾಷ ಮಾತನಾಡಿ ಬರುವ ಚುನಾವಣೆಯಲ್ಲಿ ಗೆಲ್ಲಲು ಪಕ್ಷವನ್ನು ಬಲಪಡಿಸುವುದಕ್ಕಾಗಿ ಕಾಂಗ್ರೆಸ್‍ನ ಯುವ ಕಾರ್ಯಕರ್ತರು ಶ್ರಮವಹಿಸಿ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದರು. ನೂತನ ಪದಾಧಿಕಾರಿಗಳು ಪಕ್ಷದ ತತ್ವ ಸಿದ್ದಾಂತ ಹಾಗೂ ಪಕ್ಷದ ಸಂಘಟನೆಯಲ್ಲಿ ಸಕ್ರೀಯವಾಗಿ ಪಾಲ್ಗೋಳ್ಳಬೇಕು ಹಾಗೂ ಬಿಜೆಪಿ ಸರ್ಕಾರದ ತಪ್ಪುಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವಂತೆ ತಿಳಿಸಿದರು.
ಯುವ ಕಾಂಗ್ರೆಸ್ ಗ್ರಾಮೀಣ ಘಟಕ ಅಧ್ಯಕ್ಷ ಹನುಮೇಶ ಬಾಗೋಡಿ, ಆದೇಶ ನಾಯಕ ಹಾಗೂ ಇತರರು ಇದ್ದರು.

Don`t copy text!